ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್ VI 2017-18ರ ಲಾಭ 4,196 ರೂಪಾಯಿ, ಮೌಲ್ಯ ಶೇ 142 ವೃದ್ಧಿ
ನೀವು ಆರು ವರ್ಷ ಹಿಂದೆ ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್ VI 2017-18 ಖರೀದಿಸಿದ್ದರೆ ಇಂದು ಅದರ ಲಾಭ 4,196 ರೂಪಾಯಿ. ಅದೇ ರೀತಿ ಅದರ ಮೌಲ್ಯ ಶೇ 142 ವೃದ್ಧಿಯಾಗಿರುವುದನ್ನು ಗಮನಿಸಬಹುದು. ಗೋಲ್ಡ್ ಬಾಂಡ್ ಲಾಭದ ಕುರಿತ ಸಚಿತ್ರ ವರದಿ ಇಲ್ಲಿದೆ.
(1 / 7)
ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್ VI 2017-18ರ ರಿಡಮ್ಶನ್ ಅಥವಾ ನಗದೀಕರಣಕ್ಕೆ ಅವಕಾಶ ನೀಡಿದ್ದು, ಅವಧಿಗೆ ಮುಂಚಿತವಾಗಿ ಈಗ ನಗದೀಕರಿಸುವುದಾದರೆ ಪ್ರತಿ ಬಾಂಡ್ ಅನ್ನು 7,141 ರೂಪಾಯಿಗೆ ಹಿಂದಿರುಗಿಸಬಹುದು.
(2 / 7)
ಅವಧಿಗೆ ಮುಂಚಿತವಾಗಿ ಸಾವರಿನ್ ಗೋಲ್ಡ್ ಬಾಂಡ್ ನಗದೀಕರಿಸಲು ಅಥವಾ ಮಾರಾಟ ಮಾಡುವುದಕ್ಕೆ ಆರ್‌ಬಿಐ ಮೇ 4 ರಿಂದ ಮೇ 6 ರ ತನಕ ಕಾಲಾವಕಾಶ ನೀಡಿತ್ತು.
(3 / 7)
ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್ VI 2017-18 ಖರೀದಿಸಿದ್ದರೆ ಇಂದು ಅದರ ಲಾಭ 4,196 ರೂಪಾಯಿ. ಅದೇ ರೀತಿ ಅದರ ಮೌಲ್ಯ ಶೇ 142 ವೃದ್ಧಿಯಾಗಿದೆ ಎಂಬುದನ್ನು ಗಮನಿಸಬಹುದು.
(5 / 7)
2018-19 ರ ಸಾವರಿನ್ ಗೋಲ್ಡ್ ಬಾಂಡ್ ಸರಣಿ VI ರ ಅವಧಿ ಪೂರ್ವ ಮಾರಾಟಕ್ಕೆ 2024ರ ಏಪ್ರಿಲ್ 30 ರ ದರವನ್ನು ಪರಿಗಣಿಸಲಾಗಿತ್ತು. ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್ VI 2017-18ರ ಅವಧಿ ಪೂರ್ವ ಮಾರಾಟಕ್ಕೆ ಮೇ 2 ಮತ್ತು ಮೇ 3 ರ ವಹಿವಾಟಿನ ಮುಕ್ತಾಯದ ಚಿನ್ನದ ಬೆಲೆಯ ಸರಾಸರಿಯನ್ನು ಪರಿಗಣಿಸಲಾಗಿದೆ.
(6 / 7)
ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಸರ್ಕಾರ ವಿತರಿಸುತ್ತದೆ. ಈ ಹೂಡಿಕೆಗೆ ಹೂಡಿಕೆದಾರರು ಹಿಡುವಳಿ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಇದು ಚಿನ್ನದಲ್ಲಿ ಹೆಸರಿಸಲಾದ ಸರ್ಕಾರಿ ಭದ್ರತೆಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಹೂಡಿಕೆದಾರರು ವಿತರಣೆಯ ಬೆಲೆಯನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ.
ಇತರ ಗ್ಯಾಲರಿಗಳು