Chitradurga News: ಹೊಳಲ್ಕೆರೆಯಲ್ಲಿ ಮೃತಪಟ್ಟ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ; ಹಣ ಎಣಿಸಿದ ಗ್ರಾಮಸ್ಥರು, ಫೋಟೋ ವರದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chitradurga News: ಹೊಳಲ್ಕೆರೆಯಲ್ಲಿ ಮೃತಪಟ್ಟ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ; ಹಣ ಎಣಿಸಿದ ಗ್ರಾಮಸ್ಥರು, ಫೋಟೋ ವರದಿ

Chitradurga News: ಹೊಳಲ್ಕೆರೆಯಲ್ಲಿ ಮೃತಪಟ್ಟ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆ; ಹಣ ಎಣಿಸಿದ ಗ್ರಾಮಸ್ಥರು, ಫೋಟೋ ವರದಿ

Chitradurga News: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಕಳೆದ ವಾರ ಮೃತಪಟ್ಟ ಸನ್ಯಾಸಿ ಗಂಗಾಧರಯ್ಯ ಶಾಸ್ತ್ರಿ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಅವರಿಗೆ ವಾರಸುದರಾರರು ಇಲ್ಲದ ಕಾರಣ, ಗ್ರಾಮಸ್ಥರು ಮನೆ ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ 30 ಲಕ್ಷ ರೂಪಾಯಿಯಷ್ಟು ಹಣ ಪತ್ತೆಯಾಗಿದೆ. ಇದರ ಸಚಿತ್ರ ವರದಿ ಇಲ್ಲಿದೆ.

ಹೊಳಲ್ಕೆರೆಯ ಸನ್ಯಾಸಿ ಗಂಗಾಧರಯ್ಯ ಶಾಸ್ತ್ರಿ ಕಳೆದ ವಾರ ಮೃತರಾಗಿದ್ದು, ಅವರಿಗೆ ವಾರಸುದಾರರು ಇಲ್ಲದ ಕಾರಣ ಅವರ ಮನೆ ಪ್ರವೇಶಿಸಿದ ಗ್ರಾಮಸ್ಥರಿಗೆ ಲಕ್ಷಾಂತರ ರೂಪಾಯಿ ದುಡ್ಡು, ತೆಂಗಿನ ಕಾಯಿ ಮತ್ತು ಇತರೆ ವಸ್ತುಗಳು ಕಂಡುಬಂದಿದೆ. 
icon

(1 / 3)

ಮನೆಯ ಅಟ್ಟದ ಮೇಲೆ ಹಣದ ಗಂಟುಗಳು ಪತ್ತೆಯಾಗಿದ್ದವು. ಚಿಲ್ಲರೆ ಹಣದ ಮೌಲ್ಯ 46,000 ರೂಪಾಯಿ ಇದ್ದು, ಉಳಿದವರು 10 ರೂ., 20 ರೂ., 50 ರೂ., 100 ರೂ., 200 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಎಂದು ಗ್ರಾಮಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
icon

(2 / 3)

ಗಂಗಾಧರಯ್ಯ ಅವರು ಬೇರೆಯವರು ಅಡುಗೆ ಮಾಡಿದ ಆಹಾರ ಸೇವಿಸುತ್ತಿರಲಿಲ್ಲ. ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಮನೆಯ ಒಳಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಚಪ್ಪಲಿ ಕೂಡ ಧರಿಸುತ್ತಿರಲಿಲ್ಲ. ಈಗ ಸಿಕ್ಕ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅವರ ಮನೆಯನ್ನು ಗದ್ದುಗೆಯನ್ನಾಗಿ ಪರಿವರ್ತಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ನಾಲ್ಕು ಎಕರೆ ತೆಂಗಿನ ತೋಟವೂ ಇದ್ದು, ಟ್ರಸ್ಟ್‌ ರೂಪಿಸಿ ಸಮಾಜ ಸೇವೆಗೆ ಎಲ್ಲವನ್ನೂ ಬಳಸಲು ಗ್ರಾಮಸ್ಥರು ನಿರ್ಣಯಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 
icon

(3 / 3)

ಇತರ ಗ್ಯಾಲರಿಗಳು