ಕನ್ನಡ ಸುದ್ದಿ  /  Photo Gallery  /  Photos Of Royal Challengers Bangalore Women Team Celebrates Wpl 2024 Trophy After Win Over Delhi Capitals Women Jra

WPL 2024 Photos: ನಾವೇ ರಾಣಿಯರು; ಚೊಚ್ಚಲ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ ವನಿತೆಯರ ಸಂಭ್ರಮ ಹೀಗಿತ್ತು

  • Royal Challengers Bangalore Women: ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಡಬ್ಲ್ಯುಪಿಎಲ್ 2024 ಟ್ರೋಫಿ ಗೆದ್ದುಕೊಂಡಿದೆ. ಮೊದಲನೇ ಟ್ರೋಫಿ ಗೆದ್ದ ಆರ್‌ಸಿಬಿ ವನಿತೆಯರ ತಂಡದ ಸಂಭ್ರಮ ಭರ್ಜರಿಯಾಗಿ ನಡೆಯಿತು. 

ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ 2024ರ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು.
icon

(1 / 9)

ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್ 2024ರ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು.(PTI)

ಟ್ರೋಫಿ ಗೆದ್ದ ತಂಡದ ಆಟಗಾರ್ತಿಯರ ಸಂಭ್ರಮ ಅಮೋಘವಾಗಿತ್ತು.
icon

(2 / 9)

ಟ್ರೋಫಿ ಗೆದ್ದ ತಂಡದ ಆಟಗಾರ್ತಿಯರ ಸಂಭ್ರಮ ಅಮೋಘವಾಗಿತ್ತು.(PTI)

ಇದು ಆರ್‌ಸಿಬಿ ತಂಡ ಗೆದ್ದ ಮೊದಲನೇ ಟ್ರೋಫಿ. ಐಪಿಎಲ್‌ನಲ್ಲಿ ಇದುವರೆಗೂ ಆರ್‌ಸಿಬಿ ಕಪ್‌ ಗೆದ್ದಿಲ್ಲ. ಆದರೆ, ಡಬ್ಲ್ಯುಪಿಎಲ್‌ ಫೈನಲ್‌ ಪ್ರವೇಶಿಸಿದ ಮೊದಲ ಪ್ರಯತ್ನದಲ್ಲಿಯೇ ವನಿತೆಯರು ಕಪ್‌ ಎತ್ತಿ ಹಿಡಿದಿದ್ದಾರೆ.
icon

(3 / 9)

ಇದು ಆರ್‌ಸಿಬಿ ತಂಡ ಗೆದ್ದ ಮೊದಲನೇ ಟ್ರೋಫಿ. ಐಪಿಎಲ್‌ನಲ್ಲಿ ಇದುವರೆಗೂ ಆರ್‌ಸಿಬಿ ಕಪ್‌ ಗೆದ್ದಿಲ್ಲ. ಆದರೆ, ಡಬ್ಲ್ಯುಪಿಎಲ್‌ ಫೈನಲ್‌ ಪ್ರವೇಶಿಸಿದ ಮೊದಲ ಪ್ರಯತ್ನದಲ್ಲಿಯೇ ವನಿತೆಯರು ಕಪ್‌ ಎತ್ತಿ ಹಿಡಿದಿದ್ದಾರೆ.(PTI)

ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಜೋರಾಗಿದೆ.
icon

(4 / 9)

ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಜೋರಾಗಿದೆ.(RCB - X)

ಎಲಿಮನೇಟರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿದ್ದ ಆರ್‌ಸಿಬಿ, ಚೊಚ್ಚಲ ಫೈನಲ್‌ ಪಂದ್ಯದಲ್ಲೇ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
icon

(5 / 9)

ಎಲಿಮನೇಟರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿದ್ದ ಆರ್‌ಸಿಬಿ, ಚೊಚ್ಚಲ ಫೈನಲ್‌ ಪಂದ್ಯದಲ್ಲೇ ಟ್ರೋಫಿ ಗೆದ್ದ ಸಾಧನೆ ಮಾಡಿದೆ.(PTI)

ಟ್ರೋಫಿ ಜೊತೆಗೆ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ ಕೂಡಾ ಆರ್‌ಸಿಬಿ ಪಾಲಾಗಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅತಿ ಹೆಚ್ಚು ವಿಕೆಟ್‌ ಪಡೆದರೆ, ಎಲ್ಲಿಸ್‌ ಪೆರ್ರಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದರು.
icon

(6 / 9)

ಟ್ರೋಫಿ ಜೊತೆಗೆ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ ಕೂಡಾ ಆರ್‌ಸಿಬಿ ಪಾಲಾಗಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅತಿ ಹೆಚ್ಚು ವಿಕೆಟ್‌ ಪಡೆದರೆ, ಎಲ್ಲಿಸ್‌ ಪೆರ್ರಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದರು.(AFP)

16 ವರ್ಷಗಳಿಂದ ಆರ್‌ಸಿಬಿ ಟ್ರೋಫಿ ಬರ ಎದುರಿಸುತ್ತಿತ್ತು. ಇದೀಗ ವನಿತೆಯರ ತಂಡವು ಆ ಟ್ರೋಫಿ ಬರ ನೀಗಿಸಿದೆ. ಅಭಿಮಾನಿಗಳು ಖುಷಿಯಾಗಿದ್ದಾರೆ.
icon

(7 / 9)

16 ವರ್ಷಗಳಿಂದ ಆರ್‌ಸಿಬಿ ಟ್ರೋಫಿ ಬರ ಎದುರಿಸುತ್ತಿತ್ತು. ಇದೀಗ ವನಿತೆಯರ ತಂಡವು ಆ ಟ್ರೋಫಿ ಬರ ನೀಗಿಸಿದೆ. ಅಭಿಮಾನಿಗಳು ಖುಷಿಯಾಗಿದ್ದಾರೆ.(AFP)

ದೆಹಲಿಯಲ್ಲಿ ತುಂಬಿದ ಮೈದಾನದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆಯೇ ಹೆಚ್ಚಿತ್ತು. ಮೈದಾನದಲ್ಲಿ ಆರ್‌ಸಿಬಿ ಆರ್‌ಸಿಬಿ ಎಂಬ ಘೋಷಣೆ ಜೋರಾಗಿ ಕೇಳಿಬರುತ್ತಿತ್ತು.
icon

(8 / 9)

ದೆಹಲಿಯಲ್ಲಿ ತುಂಬಿದ ಮೈದಾನದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆಯೇ ಹೆಚ್ಚಿತ್ತು. ಮೈದಾನದಲ್ಲಿ ಆರ್‌ಸಿಬಿ ಆರ್‌ಸಿಬಿ ಎಂಬ ಘೋಷಣೆ ಜೋರಾಗಿ ಕೇಳಿಬರುತ್ತಿತ್ತು.(AFP)

ಪಂದ್ಯಾವಳಿಯುದ್ದಕ್ಕೂ ಆರ್‌ಸಿಬಿ ತಂಡ ಅಮೋಘ ಪ್ರದರ್ಶನ ನೀಡಿದೆ. ಅದರಲ್ಲೂ ಕೊನೆಯ ಮೂರು ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದೆ.
icon

(9 / 9)

ಪಂದ್ಯಾವಳಿಯುದ್ದಕ್ಕೂ ಆರ್‌ಸಿಬಿ ತಂಡ ಅಮೋಘ ಪ್ರದರ್ಶನ ನೀಡಿದೆ. ಅದರಲ್ಲೂ ಕೊನೆಯ ಮೂರು ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದೆ.(AFP)


IPL_Entry_Point

ಇತರ ಗ್ಯಾಲರಿಗಳು