World Photography Day: ಅದ್ಭುತ ಫೋಟೋಗಳನ್ನು ಸೆರೆಹಿಡಿಯಲು ವಿಶ್ವದ ಟಾಪ್ 6 ಅತ್ಯಂತ ಸುಂದರ ಸ್ಥಳಗಳಿವು
World Photography Day 2023: ಕಣ್ಣಿಗೆ ಹಬ್ಬ ನೀಡುವ ಸುಂದರ ಹಿಮ ಪರ್ವತಗಳಿಂದ ಹಿಡಿದು ದಟ್ಟ ಮಂಜು ನದಿಯಾಗಿ ಹರಿಯುವ ವಿಸ್ಮಯಕಾರಿ ತಾಣಗಳು ಫೋಟೋಗ್ರಫಿಗೆ ಹೇಳಿ ಮಾಡಿಸಿದ ಸ್ಥಳ. ನದಿ ಸರೋವರಗಳು, ಒಣ ಪರ್ವತಗಳು ಕೂಡಾ ಛಾಯಾಗ್ರಾಹಕನಿಗೆ ಆಸಕ್ತಿಯ ತಾಣ. ಇಂತಹ ವಿಸ್ಮಯಯಕಾರಿ ಚಿತ್ರಗಳನ್ನು ಸೆರೆಹಿಡಿಯಬಹುದಾದ ವಿಶ್ವದ ಅತ್ಯಂತ ಫೋಟೊಜೆನಿಕ್ ಸ್ಥಳಗಳನ್ನು ಅನ್ವೇಷಿಸೋಣ.
(1 / 7)
ಛಾಯಾಗ್ರಾಹಕನ ಸೃಜನಶೀಲ ಕಲೆಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ರುದ್ರರಮಣೀಯ ಜಲಪಾತಗಳಿಂದ ಹಿಡಿದು ಸೃಷ್ಟಿಯ ಬೆರಗುಗೊಳಿಸುವ ನೈಸರ್ಗಿಕ ಅದ್ಭುತಗಳವರೆಗೆ, ಪ್ರಪಂಚದಲ್ಲಿ ನೂರಾರು ಅದ್ಭುತ ಸ್ಥಳಗಳಿವೆ. ಆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಪ್ರತಿಯೊಬ್ಬ ಛಾಯಾಗ್ರಾಹಕರ ಡೆಸ್ಟಿನೇಶನ್ ಪಟ್ಟಿಯಲ್ಲಿ ಇರಲೇಬೇಕಾದ ವಿಶ್ವದ ಅತ್ಯಂತ ಸುಂದರ ಹಾಗೂ ಫೋಟೋಗ್ರಫಿಗೆ ಸೂಕ್ತ ಸ್ಥಳಗಳು ಪಟ್ಟಿ ಇಲ್ಲಿದೆ ನೋಡಿ.(Unsplash/Alif Ngoylung)
(2 / 7)
ಕಪಾಡೋಸಿಯಾ, ಟರ್ಕಿ (Cappadocia, Turkey): ಪ್ರಕೃತಿಯು ಎಷ್ಟು ವಿಸ್ಮಯಕಾರಿಯಾಗಿದೆ ಹಾಗೂ ನೋಡಲು ಸುಂದರವಾಗಿರುತ್ತದೆ ಎಂಬುದಕ್ಕೆ ಈ ಸ್ಥಳವೇ ಸಾಕ್ಷಿ. ಮನುಷ್ಯನ ಕಾಲ್ಪನಿಕ ಕಥೆಯು ನಿಜವಾದರೆ ಹೇಗಿರಬಹುದೋ, ಈ ಸ್ಥಳ ಕೂಡಾ ಹಾಗೆಯೇ ಇದೆ. ಭೂಪ್ರದೇಶವನ್ನು ಹೋಲುವ ಸುಂದರ ಕಲ್ಲುಗಳು ಮತ್ತು ಬೆಟ್ಟಗಳಿಂದ ಕೂಡಿದ ಈ ಸ್ಥಳದಲ್ಲಿ ಕೆಂಪು, ಹಳದಿ, ಕಿತ್ತಳೆ ಮತ್ತು ಕ್ರೀಮ್ ಬಣ್ಣದಲ್ಲಿ ಆಕಾಶವು ದಿಗಂತವನ್ನು ಸ್ಪರ್ಶಿಸುತ್ತದೆ. ಬಿಸಿ ಗಾಳಿಯ ಬಲೂನ್‌ಗಳು ಇಲ್ಲಿನ ಸೌಂದರ್ಯವನ್ನು ದುಪ್ಪಟ್ಟಾಗಿಸುತ್ತದೆ.(Unsplash/Timur Garifov)
(3 / 7)
ವೈಟ್‌ಹೇವನ್ ಬೀಚ್, ಕ್ವೀನ್ಸ್‌ಲ್ಯಾಂಡ್, ಆಸ್ಟ್ರೇಲಿಯಾ (Whitehaven Beach, Queensland, Australia): ವಿಟ್ಸಂಡೆಸ್‌ನಲ್ಲಿರುವ 74 ದ್ವೀಪಗಳಲ್ಲಿ ಅತಿ ದೊಡ್ಡ ದ್ವೀಪವಾದ ವಿಟ್ಸಂಡೆ ದ್ವೀಪದ ಸುಂದರ ಬೀಚ್ ಭೂಲೋಕದ ಸ್ವರ್ಗದಂತಿದೆ. ಇಲ್ಲಿಬ ಕಡಲತೀರವು ಏಳು ಮೈಲುಗಳಷ್ಟು ಉದ್ದವಾಗಿದೆ. ಪ್ರಪಂಚದಲ್ಲೇ ಅತ್ಯುತ್ತಮವಾದ ಬಿಳಿ ಸಿಲಿಕಾ ಮರಳನ್ನು ಈ ಬೀಚ್‌ನಲ್ಲಿ ಕಾಣಬಹುದು.(Unsplash/Sofia Cerqueira)
(4 / 7)
ಗ್ರ್ಯಾಂಡ್ ಕ್ಯಾನ್ಯನ್, ಅಮೆರಿಕ (Grand Canyon, USA): ಅಮೆರಿಕದ ಅತ್ಯಂತ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾದ ಗ್ರ್ಯಾಂಡ್ ಕ್ಯಾನ್ಯನ್ ಉತ್ತರ ಅರಿಜೋನಾದಲ್ಲಿದೆ. ಛಾಯಾಚಿತ್ರ ಸೆರೆಹಿಡಿಯಲು ಮತ್ತು ವಿಸ್ಮಯಕಾರಿ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಅನೇಕ ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಇದು ವಿಶ್ವದ ಜನಪ್ರಿಯ ಫೋಟೋಗ್ರಫಿ ಸ್ಥಳವಾಗಿದೆ.(Unsplash/Gert Boers)
(5 / 7)
ಸಲಾರ್ ಡಿ ಯುಯುನಿ, ಬೊಲಿವಿಯಾ (Salar de Uyuni, Bolivia): ಬೊಲಿವಿಯಾದ ಸಲಾರ್ ಡಿ ಯುಯುನಿ ಭೂಮಿ ಮೇಲಿನ ಅತ್ಯಂತ ಅಸಾಮಾನ್ಯ ಭೂದೃಶ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸುಮಾರು 4,050 ಚದರ ಮೈಲಿಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಉಪ್ಪು ಸಮತಲ ಪ್ರದೇಶವು ನೋಡಲು ತುಂಬಾ ಸುಂದರ. ಈ ದಟ್ಟವಾದ ಉಪ್ಪಿನ ಪದರವು ದೂರ ದಿಗಂತವನ್ನು ಸ್ಪರ್ಶಿಸುವುದರಿಂದ ಇದರ ಸೌಂದರ್ಯ ದುಪ್ಪಟ್ಟಾಗಿದೆ. ಹೀಗಾಗಿ ಫೋಟೋಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸ್ಥಳವಾಗಿದೆ.(Unsplash/Bolivia’s Salar de Uyuni)
(6 / 7)
ಪ್ಲಿಟ್ವಿಸ್ ಲೇಕ್ಸ್ ರಾಷ್ಟ್ರೀಯ ಉದ್ಯಾನವನ, ಕ್ರೊಯೇಷಿಯಾ (Plitvice Lakes National Park, Croatia): ಈ ರಾಷ್ಟ್ರೀಯ ಉದ್ಯಾನವನವು 16 ಸರೋವರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಹಲವಾರು ಜಲಪಾತಗಳು ಪ್ರಮುಖ ಆಕರ್ಷಣೆ. ಜಾಲದಿಂದ ಒಂದಕ್ಕೊಂದು ಸಂಪರ್ಕಿಸುತ್ತದೆ. 18 ಕಿಮೀ ಮರದ ಕಾಲುದಾರಿಗಳು ಮತ್ತು ಪಾದಚಾರಿ ಸೇತುವೆಗಳು ಉದ್ಯಾನದ ಅಪ್ರತಿಮ ವೀಕ್ಷಣೆಗೆ ದಾರಿ ಮಾಡಿಕೊಡುತ್ತದೆ.(Unsplash/Robert V. Ruggiero)
(7 / 7)
ರೈನ್‌ಬೋ ಮೌಂಟೇನ್ಸ್, ಪೆರು (Rainbow Mountains, Peru): ಇದು 14 ವಿವಿಧ ಬಣ್ಣಗಳ ಖನಿಜಗಳ ಪದರಗಳಿಂದ ಮಾಡಲ್ಪಟ್ಟ ರೋಮಾಂಚಕ ಪಟ್ಟೆಗಳ ಪರ್ವತವಾಗಿದೆ. ಈ ಪರ್ವತವು ಕುಸ್ಕೋ ನಗರದ ಸಮೀಪ ಆಂಡಿಸ್‌ನಲ್ಲಿದೆ. ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯಲು ಇದು ಸುಂದರವಾದ ದೃಶ್ಯವಾಗಿದೆ. ಮೋಡ ಕವಿದ ದಿನದಲ್ಲಿಯೂ ಈ ಪರ್ವತದ ವಿಶಿಷ್ಟ ಮತ್ತು ಸುಂದರ ಬಣ್ಣಬಣ್ಣದ ಗೆರೆಗಳು ಗೋಚರಿಸುತ್ತವೆ.(Unsplash/McKayla Crump)
ಇತರ ಗ್ಯಾಲರಿಗಳು