ಪ್ರೊ ಕಬಡ್ಡಿ ಲೀಗ್ ಪಂದ್ಯಗಳಿಗೆ ತೆರೆ; ಟೇಬಲ್ ಟಾಪರ್ ಯಾರು, ಕೊನೆ ಸ್ಥಾನ ಯಾವ ತಂಡಕ್ಕೆ, ಬೆಂಗಳೂರು ಬುಲ್ಸ್ ಕಥೆ ಏನು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರೊ ಕಬಡ್ಡಿ ಲೀಗ್ ಪಂದ್ಯಗಳಿಗೆ ತೆರೆ; ಟೇಬಲ್ ಟಾಪರ್ ಯಾರು, ಕೊನೆ ಸ್ಥಾನ ಯಾವ ತಂಡಕ್ಕೆ, ಬೆಂಗಳೂರು ಬುಲ್ಸ್ ಕಥೆ ಏನು?

ಪ್ರೊ ಕಬಡ್ಡಿ ಲೀಗ್ ಪಂದ್ಯಗಳಿಗೆ ತೆರೆ; ಟೇಬಲ್ ಟಾಪರ್ ಯಾರು, ಕೊನೆ ಸ್ಥಾನ ಯಾವ ತಂಡಕ್ಕೆ, ಬೆಂಗಳೂರು ಬುಲ್ಸ್ ಕಥೆ ಏನು?

  • PKL 2024 Points Table : ಪ್ರೊ ಕಬಡ್ಡಿ ಲೀಗ್​ ಗುಂಪು ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ. ಫೆಬ್ರವರಿ 26ರಿಂದ ಪ್ಲೇ ಆಫ್​ ಪಂದ್ಯಗಳು ಶುರುವಾಗಲಿವೆ. ಆದರೆ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಮತ್ತು ಕೊನೆಯ ಸ್ಥಾನ ಯಾರಿಗೆ? ಬೆಂಗಳೂರು ಬುಲ್ಸ್ ಕಥೆ ಏನು?

ಪ್ರೊ ಕಬಡ್ಡಿ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಗುಂಪು ಹಂತದ ಅಂಕಪಟ್ಟಿಯಲ್ಲಿ ಪುಣೇರಿ ಪಲ್ಟನ್ಸ್ 96 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಡಿರುವ 22 ಪಂದ್ಯಗಳಲ್ಲಿ 17 ಗೆಲುವು, 2 ಸೋಲು, 3 ಡ್ರಾ ಸಾಧಿಸಿದೆ. ಸದ್ಯ ಸೆಮಿಫೈನಲ್​ 1ಕ್ಕೆ ನೇರ ಪ್ರವೇಶ ಪಡೆದಿದೆ.
icon

(1 / 12)

ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ. ಕಣಕ್ಕಿಳಿದ 22 ಪಂದ್ಯಗಳ ಪೈಕಿ 16 ಗೆಲುವು ಸಾಧಿಸಿದೆ. ತಲಾ 3 ಸೋಲು, ಡ್ರಾ ಸಾಧಿಸಿ 92 ಅಂಕ ಸಂಪಾದಿಸಿದೆ. ಸೆಮಿಫೈನಲ್​ 2ಕ್ಕೆ ಅರ್ಹತೆ ಪಡೆದಿದೆ.
icon

(2 / 12)

ದಬಾಂಗ್ ಡೆಲ್ಲಿ ತಂಡ 79 ಅಂಕ ಗಳಿಸಿ 3ನೇ ಸ್ಥಾನದಲ್ಲಿದೆ. 22 ಪಂದ್ಯಗಳಲ್ಲಿ 13 ಗೆಲುವು ಸಾಧಿಸಿ 6 ಸೋಲು, 3 ಡ್ರಾ ಆಗಿದೆ. ಸದ್ಯ ಫೆ 26ರಂದು ನಡೆಯುವ ಎಲಿಮಿನೇಟರ್​​ 1ರಲ್ಲಿ ಕಣಕ್ಕಿಳಿಯಲಿದೆ.
icon

(3 / 12)

70 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ಸಹ ಪ್ಲೇ ಆಫ್​ಗೆ ಅರ್ಹತೆ ಪಡೆದಿದೆ. ಸದ್ಯ ಆಡಿದ 22 ಪಂದ್ಯಗಳಲ್ಲಿ 13 ಗೆಲುವು, 9 ಸೋಲು ಅನುಭವಿಸಿದೆ. 
icon

(4 / 12)

ಐದನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ಸಹ 70 ಅಂಕ ಸಂಪಾದಿಸಿದೆ. ಪ್ಲೇ ಆಫ್​ಗೆ ಕ್ವಾಲಿಫೈ ಆಗಿರುವ ಹರಿಯಾಣ 22 ಪಂದ್ಯಗಳಲ್ಲಿ 13 ಗೆಲುವು, 8 ಸೋಲು, 1 ಡ್ರಾ ಸಾಧಿಸಿದೆ.
icon

(5 / 12)

ಪ್ಲೇ ಆಫ್​ಗೆ ಕೊನೆಯ ತಂಡವಾಗಿ ಅರ್ಹತೆ ಗಿಟ್ಟಿಸಿಕೊಂಡಿರುವ ಪಾಟ್ನಾ ಪೈರೇಟ್ಸ್, 69 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 22 ಪಂದ್ಯಗಳಲ್ಲಿ 11 ಗೆಲುವು, 8 ಸೋಲು, 3 ಡ್ರಾ ಸಾಧಿಸಿದೆ.
icon

(6 / 12)

ಬೆಂಗಾಲ್ ವಾರಿಯರ್ಸ್ 22 ಪಂದ್ಯಗಳಲ್ಲಿ 9 ಗೆಲುವು 11 ಸೋಲು 2 ಡ್ರಾ ಕಂಡಿದೆ. 55 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿರುವ ಬೆಂಗಾಲ್ ಲೀಗ್​ ಹಂತದಿಂದಲೇ ಹೊರಬಿದ್ದಿದೆ.
icon

(7 / 12)

ಲೀಗ್​ನ ಕೊನೆಯ ಪಂದ್ಯದಲ್ಲಿ ಗೆದ್ದು 8ನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್, 22 ಪಂದ್ಯಗಳಲ್ಲಿ 8 ಗೆಲುವು ಮಾತ್ರ ಸಾಧಿಸಿದೆ. 12 ಸೋಲು, 2 ಡ್ರಾ ಸಾಧಿಸಿ 53 ಅಂಕ ಮಾತ್ರ ಪಡೆದಿದೆ.
icon

(8 / 12)

ತಮಿಳ್ ತಲೈವಾಸ್ ಕೂಡ ಕಳಪೆ ಪ್ರದರ್ಶನ ನೀಡಿದ್ದು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 22 ಪಂದ್ಯಗಳಲ್ಲಿ 9 ಗೆಲುವು, 13 ಸೋಲು ಅನುಭವಿಸಿದೆ. 51 ಅಂಕ ಪಡೆದಿದೆ.
icon

(9 / 12)

ಯು ಮುಂಬಾ 22 ಪಂದ್ಯಗಳಲ್ಲಿ 6 ಗೆಲುವು, 13 ಸೋಲು, 3 ಡ್ರಾ ಸಾಧಿಸಿ 45 ಅಂಕ ಪಡೆದಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
icon

(10 / 12)

ಯುಪಿ ಯೋಧಾಸ್ 11ನೇ ಸ್ಥಾನದಲ್ಲಿದೆ. 17 ಸೋಲು, 1 ಡ್ರಾ ಸಾಧಿಸಿದೆ. 4ರಲ್ಲಿ ಮಾತ್ರ ಗೆಲುವು ಸಾಧಿಸಿ 31 ಅಂಕ ಸಂಪಾದಿಸಿದೆ.
icon

(11 / 12)

ಇನ್ನು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ ಅತ್ಯಂತ ಹೀನಾಯ ಪ್ರದರ್ಶನ ತೋರಿತು. ಆಡಿದ 22ರಲ್ಲಿ 19 ಸೋಲು, 1 ಡ್ರಾ ಸಾಧಿಸಿದೆ. 2ರಲ್ಲಿ ಗೆಲುವು ಸಾಧಿಸಿ 21 ಅಂಕ ಪಡೆದಿದೆ. 
icon

(12 / 12)

ಇತರ ಗ್ಯಾಲರಿಗಳು