ಅಗ್ರಸ್ಥಾನದತ್ತ ಬೆಂಗಳೂರು ಬುಲ್ಸ್, ಟಾಪ್ನಲ್ಲಿ ಬೆಂಗಾಲ್, ಕೊನೆಯಲ್ಲಿ ಟೈಟಾನ್ಸ್; ಇಲ್ಲಿದೆ ಅಂಕಪಟ್ಟಿ ವಿವರ
- PKL 2023 Points Table: ಪ್ರೊ ಕಬಡ್ಡಿ ಲೀಗ್ ದಿನೆದಿನೇ ರೋಚಕತೆ ಹೆಚ್ಚಿಸುತ್ತಿದೆ. ಪ್ರತಿ ನಿತ್ಯವೂ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಸತತ 4 ಪಂದ್ಯ ಸೋತಿದ್ದ ಬೆಂಗಳೂರು ಬುಲ್ಸ್, ಇದೀಗ ಸತತ 2 ಪಂದ್ಯ ಗೆದ್ದು ಅಗ್ರಸ್ಥಾನದತ್ತ ಚಿತ್ತ ನೆಟ್ಟಿದೆ. ಹಾಗಾದರೆ ಡಿಸೆಂಬರ್ 13ರ ಅಂತ್ಯಕ್ಕೆ ಪಿಕೆಎಲ್ ಅಂಕಪಟ್ಟಿ ಹೇಗಿದೆ?
- PKL 2023 Points Table: ಪ್ರೊ ಕಬಡ್ಡಿ ಲೀಗ್ ದಿನೆದಿನೇ ರೋಚಕತೆ ಹೆಚ್ಚಿಸುತ್ತಿದೆ. ಪ್ರತಿ ನಿತ್ಯವೂ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಸತತ 4 ಪಂದ್ಯ ಸೋತಿದ್ದ ಬೆಂಗಳೂರು ಬುಲ್ಸ್, ಇದೀಗ ಸತತ 2 ಪಂದ್ಯ ಗೆದ್ದು ಅಗ್ರಸ್ಥಾನದತ್ತ ಚಿತ್ತ ನೆಟ್ಟಿದೆ. ಹಾಗಾದರೆ ಡಿಸೆಂಬರ್ 13ರ ಅಂತ್ಯಕ್ಕೆ ಪಿಕೆಎಲ್ ಅಂಕಪಟ್ಟಿ ಹೇಗಿದೆ?
(1 / 12)
ಬೆಂಗಾಲ್ ವಾರಿಯರ್ಸ್ 4 ಪಂದ್ಯಗಳಲ್ಲಿ 3 ಗೆಲುವು 1 ಡ್ರಾ ಸಾಧಿಸಿ 18 ಅಂಕ ಪಡೆದು ಅಗ್ರಸ್ಥಾನ ಅಲಂಕರಿಸಿದೆ. ಕಳೆದ ವಾರ ಬೆಂಗಾಲ್ ಎರಡನೇ ಸ್ಥಾನದಲ್ಲಿತ್ತು.
(2 / 12)
ಈ ಹಿಂದೆ ಪ್ರಥಮ ಸ್ಥಾನದಲ್ಲಿದ್ದ ಗುಜರಾತ್ ಜೈಂಟ್ಸ್ 2ನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಜಯ, 2 ಸೋಲು ಕಂಡಿದ್ದು 17 ಅಂಕ ಗಳಿಸಿದೆ.
(3 / 12)
ಸತತ 4 ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿತ್ತು. ಇದೀಗ ಸತತ ಎರಡು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಜಿಗಿತ ಕಂಡಿದೆ. ಅಗ್ರ ಎರಡು ತಂಡಗಳು ತಮ್ಮ ಮುಂದಿನ ಪಂದ್ಯದಲ್ಲಿ ಸೋತು, ಬುಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.
(4 / 12)
ಯುಪಿ ಯೋಧಾಸ್ ಆಡಿದ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿದೆ. 12 ಅಂಕ ಸಂಪಾದಿಸಿರುವ ಯೋಧಾಸ್ 4ನೇ ಸ್ಥಾನದಲ್ಲಿದೆ.
(5 / 12)
ಪುಣೇರಿ ಪಲ್ಟನ್ ಇನ್ನೂ ಆಡಿರುವುದೇ 2 ಪಂದ್ಯ. ಎರಡಲ್ಲೂ ಅಮೋಘ ಜಯ ಸಾಧಿಸಿ 10 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿ ಅವಕಾಶ ಪಡೆದಿದೆ.
(6 / 12)
ಪಾಟ್ನಾ ಪೈರೇಟ್ಸ್ 3 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. 2ರಲ್ಲಿ ಗೆದ್ದು, 1 ಸೋಲು ಕಂಡಿದೆ. 10 ಅಂಕ ಗಳಿಸಿ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನ ಪಡೆದಿದೆ.
(7 / 12)
ತಮಿಳ್ ತಲೈವಾಸ್ ಈವರೆಗೂ 3 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ಪೈಕಿ 2ರಲ್ಲಿ ಘನ ವಿಜಯ, 1 ಸೋಲಿನೊಂದಿಗೆ 10 ಅಂಕ ಪಡೆದು 7ನೇ ಸ್ಥಾನದಲ್ಲಿದೆ.
(8 / 12)
ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ 4 ಪಂದ್ಯಗಳಲ್ಲಿ 1 ಗೆಲುವು, 2 ಪರಾಜಯ, 1 ಡ್ರಾ ಸಾಧಿಸಿದೆ. 10 ಅಂಕ ಗಳಿಸಿ 8ನೇ ಸ್ಥಾನ ಅಲಂಕರಿಸಿದೆ.
(9 / 12)
ಈವರೆಗೂ 3 ಪಂದ್ಯಗಳನ್ನಾಡಿರುವ ಹರಿಯಾಣ ಸ್ಟೀಲರ್ಸ್, 2ರಲ್ಲಿ ಗೆದ್ದಿದೆ. 1ರಲ್ಲಿ ಪರಾಭವಗೊಂಡಿದೆ. 10 ಅಂಕ ಗಳಿಸಿದ್ದು, ಸದ್ಯದ ಮಟ್ಟಿಗೆ 9ನೇ ಸ್ಥಾನ ಪಡೆದಿದೆ.
(10 / 12)
ದಬಾಂಗ್ ಡೆಲ್ಲಿ ಕೆಸಿ 3 ಪಂದ್ಯ ಆಡಿದ್ದು 2ರಲ್ಲಿ ಮಕಾಡೆ ಮಲಗಿದೆ. 1 ಗೆಲುವು ಸಹಿತ 6 ಅಂಕ ಗಳಿಸಿದೆ. ಇದು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
(11 / 12)
ಯು ಮುಂಬಾ ತಂಡವು ಮೇಲೇಳಲು ಹರಸಾಹಸ ಪಡುತ್ತಿದೆ. ಈವರೆಗೂ ಆಡಿದ 3 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದೆ. ಆದರೆ 2 ಸೋಲಿನ ನಿರಾಸೆಯಲ್ಲಿದೆ. 6 ಅಂಕ ಗಳಿಸಿ 11ನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು