ಕನ್ನಡ ಸುದ್ದಿ  /  Photo Gallery  /  Pm Modi Casts His Vote For The Second Phase Of Gujarat Assembly Elections In Ahmedabad

PM Modi: ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ: ಪ್ರಜಾಪ್ರಭುತ್ವ ಗೆಲ್ಲಿಸಲು ಕರೆ

  • ಅಹಮದಾಬಾದ್: ಗುಜರಾತ್‌ ವಿಧಾನಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಹಮದಾಬಾದ್‌ನಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಎಲ್ಲರೂ ಬಂದು ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..

ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸಲಾಗಿರುವ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
icon

(1 / 5)

ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸಲಾಗಿರುವ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.(ANI)

ಈ ವೇಳೆ ಮತಟ್ಟೆ ಹಿರಗೆ ಜಮಾಯಿಸಿದ್ದ ಮತದಾರರು, ಪ್ರಧಾನಿ ಮೋದಿ ಅವರನ್ನು ಕಂಡೊಡನೆಯೇ ಪುಳಕಿತರಾದರು. ಸರತಿ ಸಾಲಿನಲ್ಲಿ ಮತದಾರರತ್ತ ಕೈಬೀಸಿದ ಪ್ರಧಾನಿ ಮೋದಿ, ಬೇಗ ತಮ್ಮ ಮತ ಚಲಾಯಿಸಿ, ಇತರರಿಗೆ ಮತದಾನ ಮಾಡಲು ಅನುವು ಮಾಡಿಕೊಟ್ಟರು.
icon

(2 / 5)

ಈ ವೇಳೆ ಮತಟ್ಟೆ ಹಿರಗೆ ಜಮಾಯಿಸಿದ್ದ ಮತದಾರರು, ಪ್ರಧಾನಿ ಮೋದಿ ಅವರನ್ನು ಕಂಡೊಡನೆಯೇ ಪುಳಕಿತರಾದರು. ಸರತಿ ಸಾಲಿನಲ್ಲಿ ಮತದಾರರತ್ತ ಕೈಬೀಸಿದ ಪ್ರಧಾನಿ ಮೋದಿ, ಬೇಗ ತಮ್ಮ ಮತ ಚಲಾಯಿಸಿ, ಇತರರಿಗೆ ಮತದಾನ ಮಾಡಲು ಅನುವು ಮಾಡಿಕೊಟ್ಟರು.(ANI)

ಮತಗಟ್ಟೆ ಸಿಬ್ಬಂದಿ ಕೂಡ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮತದಾನ ಮಾಡಲು ಬಂದ ಪ್ರಧಾನಿ ಮೋದಿ ಅವರ ಕೈ ಬೆರಳಿಗೆ ಮತಗಟ್ಟೆ ಸಿಬ್ಬಂದಿ ಶಾಯಿ ಹಾಕಿದರು.
icon

(3 / 5)

ಮತಗಟ್ಟೆ ಸಿಬ್ಬಂದಿ ಕೂಡ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಮತದಾನ ಮಾಡಲು ಬಂದ ಪ್ರಧಾನಿ ಮೋದಿ ಅವರ ಕೈ ಬೆರಳಿಗೆ ಮತಗಟ್ಟೆ ಸಿಬ್ಬಂದಿ ಶಾಯಿ ಹಾಕಿದರು.(ANI)

ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಅತ್ಯಂತ ಅವಶ್ಯ ಎಂದ ಪ್ರಧಾನಿ ಮೋದಿ, ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವು ನಿಮಗೆನೀಡಿದ ಪವಿತ್ರ ಹಕ್ಕನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
icon

(4 / 5)

ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಅತ್ಯಂತ ಅವಶ್ಯ ಎಂದ ಪ್ರಧಾನಿ ಮೋದಿ, ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವು ನಿಮಗೆನೀಡಿದ ಪವಿತ್ರ ಹಕ್ಕನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.(ANI)

ಇನ್ನು ಕೆಲವೇ ಕ್ಷಣಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಅಹಮದಾಬಾದ್‌ನಲ್ಲಿ ತಮ್ಮ ಮತವನ್ನು ಚಲಾಯಿಸಲಿದ್ದಾರೆ.
icon

(5 / 5)

ಇನ್ನು ಕೆಲವೇ ಕ್ಷಣಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಅಹಮದಾಬಾದ್‌ನಲ್ಲಿ ತಮ್ಮ ಮತವನ್ನು ಚಲಾಯಿಸಲಿದ್ದಾರೆ.(PTI)


ಇತರ ಗ್ಯಾಲರಿಗಳು