G20 Summit in Bali: ಅಮೆರಿಕದ ಅಧ್ಯಕ್ಷರ ಜತೆ ಮೋದಿ ಉಭಯ ಕುಶಲೋಪರಿ ಸಾಂಪ್ರತ, ಜಿ20 ಶೃಂಗಸಭೆಯ ಇಂದಿನ ಚಿತ್ರಸಂಪುಟ
G20 Summit in Bali: ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈಗಾಗಲೇ ಜಗತ್ತಿನ ನಾಯಕರ ಮುಂದೆ ಭಾಷಣವನ್ನೂ ಮಾಡಿದ್ದಾರೆ. ಬಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ನಾಯಕರ ಜತೆ ನಡೆಸಿದ ಉಭಯ ಕುಶಲೋಪರಿ ಸಾಂಪ್ರತದ ಚಿತ್ರ ಸಂಪುಟ ಇಲ್ಲಿದೆ.
(1 / 5)
ಬಾಲಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಥಕಧಿಮಿ ಥೈ ಸ್ವಾಗತ. ಬಾಲಿಯ ಸಾಂಪ್ರದಾಯಿಕ ನೃತ್ಯದ ಮೂಲಕ ಭಾರತದ ಪ್ರಧಾನಿಯನ್ನು ಸ್ವಾಗತಿಸಲಾಯಿತು. ಈ ಬಾರಿ ಜಿ20 ಶೃಂಗಸಭೆಯ ಥೀಮ್ 'Recover Together, Recover Stronger'. ಅಂದರೆ, ಒಟ್ಟಾಗಿ ಚೇತರಿಸಿಕೊಳ್ಳೋಣ. ಸೃಢವಾಗಿ ಚೇತರಿಸಿಕೊಳ್ಳೋಣ. ಆರ್ಥಿಕ ಬಿಕ್ಕಟ್ಟಿನ ಭಯ ಇತ್ಯಾದಿಗಳಿಂದ ಚೇತರಿಕೆಯ ಮಂತ್ರ ಈ ಬಾರಿ ಪಠಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಸ್ವಾಗತಿಸಿದರು. ಮೋದಿಯವರು ಶೃಂಗಸಭೆ ಆರಂಭಕ್ಕೆ ಮುನ್ನ ಅಮೆರಿಕದ ಅಧ್ಯಕ್ಷರಾದ ಜೋ ಬೈಡೆನ್ ಮತ್ತು ಫ್ರಾಂಚ್ ಅಧ್ಯಕ್ಷ ಇಮ್ಯಾನೆಲ್ ಮಕ್ರೊನ್ ಅವರನ್ನೂ ಭೇಟಿಯಾದರು. (PMO)
(2 / 5)
ಬಾಲಿಯಲ್ಲಿ ಶೃಂಗಸಭೆ ಆರಂಭಕ್ಕೆ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷರಾದ ಜೋ ಬೈಡೆನ್ ಜತೆ ಆತ್ಮೀಯವಾಗಿ ಮಾತನಾಡಿ ಒಂದು ಅಪ್ಪುಗೆ ನೀಡಿದ್ದಾರೆ. (PMO)
(3 / 5)
ಹೇಗಿದ್ದೀರಿ ಇಮ್ಯಾನೆಲ್?: ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯು ಫ್ರಾನ್ಸ್ ಅಧ್ಯಕ್ಷ ಇಮ್ಯಾನೆಲ್ ಮಾಕ್ರೊನ್ ಜತೆಯೂ ಮಾತುಕತೆ ನಡೆಸಿದ್ದಾರೆ.(PMO)
(4 / 5)
"ಕಳೆದ ಶತಮಾನದಲ್ಲಿ ಎರಡನೇ ವಿಶ್ವಯುದ್ಧವು ಜಗತ್ತಿನಲ್ಲಿ ವಿನಾಶ ಉಂಟು ಮಾಡಿತು. ಬಳಿಕ ಅಂದಿನ ನಾಯಕರು ಶಾಂತಿ ಮಾರ್ಗದತ್ತ ತೆರಳಲು ಗಂಭೀರ ಪ್ರಯತ್ನ ನಡೆಸಿದರು. ಈಗ ಇಂತಹ ಸರದಿ ನಮಗೆ ಬಂದಿದೆʼʼ ಎಂದು ಪ್ರಧಾನಿ ಮೋದಿಯವರು ಈ ಶೃಂಗಸಭೆಯಲ್ಲಿ ಭಾಷಣ ಮಾಡಿದ್ದಾರೆ.(PMO)
ಇತರ ಗ್ಯಾಲರಿಗಳು