Makara Santranti: ತೆಲಂಗಾಣದ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಮನೆಯಲ್ಲಿ ಮಕರ ಸಂಕ್ರಾಂತಿ ಆಚರಿಸಿದ ಪ್ರಧಾನಿ ಮೋದಿ; ಆಕರ್ಷಕ ಚಿತ್ರನೋಟ
Makara Santranti Celebrations: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜನವರಿ 13) ರಾತ್ರಿ ತಮ್ಮ ಸಂಪುಟ ಸಹೋದ್ಯೋಗಿ, ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಮನೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡರು. ಇದರ ಆಕರ್ಷಕ ಚಿತ್ರನೋಟ ಇಲ್ಲಿದೆ.
(1 / 11)
ಪ್ರಧಾನಿ ನರೇಂದ್ರ ಮೋದಿ, ನಿನ್ನೆ (ಜನವರಿ 13) ರಾತ್ರಿ ತಮ್ಮ ಸಂಪುಟ ಸಹೋದ್ಯೋಗಿ, ತೆಲಂಗಾಣದ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರ ನವದೆಹಲಿ ನಿವಾಸದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು. ತುಳಸಿ ಪೂಜೆ, ಗೋಪೂಜೆ ಕಾರ್ಯಕ್ರಮದಲ್ಲೂ ಭಾಗವಹಿಸಿದರು.
(2 / 11)
ನವದೆಹಲಿಯಲ್ಲಿರುವ ಸಚಿವ ಕಿಶನ್ ರೆಡ್ಡಿ ನಿವಾಸಕ್ಕೆ ಮಕರ ಸಂಕ್ರಾಂತಿ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಂದರ್ಭ ಇದು.
(PMO/ PTI)(3 / 11)
ಕೇಂದ್ರ ಸಚಿವ ಕಿಶನ್ ರೆಡ್ಡಿ ನಿವಾಸದಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ವೇಳೆ, ತೆಲಂಗಾಣದ ಜನಪದ ಕಲಾವಿದರ ಶುಭಕೋರಿದರು. ಆಗ ಪ್ರಧಾನಿ ಮೋದಿ, ಆ ಕಲಾವಿದರ ಕುಶಲೋಪರಿ ವಿಚಾರಿಸಿದರು.
(PMO)(4 / 11)
ಕೇಂದ್ರ ಸಚಿವ ಕಿಶನ್ ರೆಡ್ಡಿ ನಿವಾಸದಲ್ಲಿ ಮಕರ ಸಂಕ್ರಾಂತಿ ಉತ್ಸವ ಆಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗೋವಿಗೆ ಬಾಳೆಹಣ್ಣು ತಿನ್ನಿಸಿದರು,.
(PMO)(6 / 11)
ಮಕರ ಸಂಕ್ರಾಂತಿ ಆಚರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಹೋದ್ಯೋಗಿ ಕಿಶನ್ ರೆಡ್ಡಿ ನಿವಾಸದಲ್ಲಿ ತುಳಸಿ ಪೂಜೆ ನೆರವೇರಿಸಿದರು.
(@narendramodi)(7 / 11)
ನವದೆಹಲಿಯ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ನಿವಾಸದಲ್ಲಿ ಸಂಕ್ರಾಂತಿ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಕ್ರಾಂತಿಯ ಭೋಗಿ ಬೆಂಕಿಗೆ ಆಜ್ಯ ಸುರಿದರು. ನಟ ಚಿರಂಜೀವಿ ಕೂಡ ಜತೆಗಿದ್ದರು.
(PMO via X / PTI)(8 / 11)
ಮಕರ ಸಂಕ್ರಾಂತಿ ಉತ್ಸವ ಕೃಷಿಗೆ ಸಂಬಂಧಿಸಿದ ಹಬ್ಬವೂ ಆಗಿದ್ದು, ಪ್ರಧಾನಿ ಮೋದಿ ಪೂಜೆ ನೆರವೇರಿಸಿದರು.
(@narendramodi)(9 / 11)
ಸಚಿವ ಕಿಶನ್ ರೆಡ್ಡಿ ನಿವಾಸದಲ್ಲಿ ನಟ ಚಿರಂಜೀವಿ ಅವರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಕುಶಲೋಪರಿ ನಡೆಸಿದರು.
(PMO)(10 / 11)
ನವದೆಹಲಿಯಲ್ಲಿರುವ ಸಚಿವ ಕಿಶನ್ ರೆಡ್ಡಿ ನಿವಾಸದಲ್ಲಿ ಮಕರ ಸಂಕ್ರಾಂತಿ ಆಚರಣೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಲಂಗಾಣದ ರಾಜಕೀಯ ನೇತಾರರು ಸ್ಮರಣಿಕೆ ನೀಡಿ ಗೌರವಿಸಿದರು. ನಟ ಚಿರಂಜೀವಿ ಕೂಡ ಚಿತ್ರದಲ್ಲಿದ್ದಾರೆ.
(PMO)ಇತರ ಗ್ಯಾಲರಿಗಳು