PM Modi in Shillong: ಮೇಘಾಲಯದ ಉಡುಗೆಯಲ್ಲಿ ಮಿಂಚಿದ ಮೋದಿ, ಹಲವು ಸಾವಿರ ಕೋಟಿ ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ | ಚಿತ್ರಗಳು
- ನಾರ್ತ್ ಈಸ್ಟರ್ನ್ ಕೌನ್ಸಿಲ್(ಎನ್‌ಇಸಿ)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2450 ಕೋಟಿ ಮೌಲ್ಯದ ವಿವಿಧ ಪ್ರಾಜೆಕ್ಟ್‌ಗಳಿಗೆ ಭಾನುವಾರ ಚಾಲನೆ ನೀಡಿದ್ದಾರೆ. ಶಿಲ್ಲಾಂಗ್‌ನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.
- ನಾರ್ತ್ ಈಸ್ಟರ್ನ್ ಕೌನ್ಸಿಲ್(ಎನ್‌ಇಸಿ)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2450 ಕೋಟಿ ಮೌಲ್ಯದ ವಿವಿಧ ಪ್ರಾಜೆಕ್ಟ್‌ಗಳಿಗೆ ಭಾನುವಾರ ಚಾಲನೆ ನೀಡಿದ್ದಾರೆ. ಶಿಲ್ಲಾಂಗ್‌ನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.
(1 / 13)
ಶಿಲ್ಲಾಂಗ್: ನಾರ್ತ್ ಈಸ್ಟರ್ನ್ ಕೌನ್ಸಿಲ್(ಎನ್‌ಇಸಿ)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2450 ಕೋಟಿ ಮೌಲ್ಯದ ವಿವಿಧ ಪ್ರಾಜೆಕ್ಟ್‌ಗಳಿಗೆ ಭಾನುವಾರ ಚಾಲನೆ ನೀಡಿದ್ದಾರೆ. ಶಿಲ್ಲಾಂಗ್‌ನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.(ANI Photo)(ANI)
(2 / 13)
ನಾರ್ತ್ ಈಸ್ಟರ್ನ್ ಕೌನ್ಸಿಲ್(ಎನ್‌ಇಸಿ)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿರುವುದು. (ANI Photo)(ANI)
(3 / 13)
ಮೋದಿಯವರು ಈಶಾನ್ಯ ರಾಜ್ಯಗಳ ಒಂದು ದಿನದ ಭೇಟಿಗಾಗಿ ತೆರಳಿದ್ದು, ವಿವಿಧ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಹಲವು ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಿದ್ದಾರೆ. (ANI Photo)(ANI)
(4 / 13)
ಮೇಘಾಲಯದಲ್ಲಿ ಟೆಲಿಕಾಂ ಸಂಪರ್ಕವನ್ನು ಇನ್ನಷ್ಟು ಉತ್ತಮಪಡಿಸಲು 4ಜಿ ಟವರ್‌ಗಳನ್ನು ರಾಜ್ಯಕ್ಕೆ ಸಮರ್ಪಿಸಿದ್ದಾರೆ.. ಸದ್ಯ ಒಟ್ಟು 320 ಟವರ್‌ಗಳ ನಿರ್ಮಾಣ ಪೂರ್ಣಗೊಂಡಿದ್ದು, 890 ಟವರ್‌ಗಳು ನಿರ್ಮಾಣ ಹಂತದಲ್ಲಿವೆ. (ANI Photo)(ANI)
(5 / 13)
ಇದರೊಂದಿಗೆ ಐಐಎಂ ಶಿಲ್ಲಾಂಗ್‌ನ ಹೊಸ ಕ್ಯಾಂಪಸ್ ಅನ್ನು ಮೋದಿ ಉದ್ಘಾಟಿಸಿದ್ದಾರೆ. ಇದರೊಂದಿಗೆ ಶಿಲ್ಲಾಂಗ್ ಡಿಯೆಂಗ್‌ಪಾಸೋಹ್ ರಸ್ತೆಯನ್ನು ಉದ್ಘಾಟಿಸಿದ್ದಾರೆ. ಇದು ಶಿಲ್ಲಾಂಗ್ ಸ್ಯಾಟಲೈಟ್ ಟೌನ್‌ಶಿಪ್‌ಗೆ ಅತ್ಯುತ್ತಮ ಕನೆಕ್ಟಿವಿಟಿ ಒದಗಿಸಲಿದೆ. ಇದರಿಂದ ಶಿಲ್ಲಾಂಗ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. (ANI Photo)(ANI)
(6 / 13)
ಇದರೊಂದಿಗೆ, ಇದು ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವ ನಾಲ್ಕು ಇತರೆ ರಸ್ತೆ ಯೋಜನೆಗಳಿಗೂ ಇವರು ಚಾಲನೆ ನೀಡಿದ್ದಾರೆ. (ANI Photo)(ANI)
(7 / 13)
ನಾರ್ತ್ ಈಸ್ಟರ್ನ್ ಕೌನ್ಸಿಲ್(ಎನ್‌ಇಸಿ)ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (ANI Photo)(ANI/PIB)
(8 / 13)
ಮೇಘಾಲಯದ ಅಣಬೆ ಅಭಿವೃದ್ಧಿ ಕೇಂದ್ರದ ಸ್ಪ್ವನ್ ಲ್ಯಾಬೋರೇಟರಿಯನ್ನೂ ಮೋದಿ ಉದ್ಘಾಟಿಸಿದ್ದಾರೆ. ಮಿಜೊರಾಂ, ಮಣಿಪುರ, ತ್ರಿಪುರ, ಅಸ್ಸಾಂನಲ್ಲಿ 21 ಹಿಂದಿ ಲೈಬ್ರೆರಿಗಳನ್ನೂ ಮೋದಿ ಉದ್ಘಾಟಿಸಿದ್ದಾರೆ. (ANI Photo)(ANI/PIB)
(9 / 13)
ನಾರ್ತ್ ಈಸ್ಟ್ ಕೌನ್ಸಿಲ್- ಇದು ಈಶಾನ್ಯ ಭಾಗದ ಸಾಮಾಜಿಕ ಅಭಿವೃದ್ಧಿ ಏಜೆನ್ಸಿಯಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೊರಾಂ, ನಾಗಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಗಳ ಅಭಿವೃದ್ಧಿಗಾಗಿ ಇರುವ ಕೌನ್ಸಿಲ್. ಇದನ್ನು 1971ರಲ್ಲಿ ಸ್ಥಾಪಿಸಲಾಗಿತ್ತು. (ANI Photo)(ANI)
(10 / 13)
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯ ಇಂದಿನ ಭೇಟಿಗೆ ಒಂದು ದಿನ ಮುನ್ನ ಅಂದ್ರೆ, ನಿನ್ನೆಯೇ ಶಿಲ್ಲಾಂಗ್ ತಲುಪಿದ್ದರು.(ANI Photo)(ANI)
(11 / 13)
ಪ್ರತಿಪಕ್ಷಗಳು ಇತ್ತೀಚಿನ ಭಾರತ ಚೀನಾ ಗಡಿ ವಿವಾದದ ಕುರಿತು ಟೀಕಿಸುತ್ತಿರುವ ಸಂದರ್ಭದಲ್ಲಿ, ಈಶಾನ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು ವಿಶೇಷವಾಗಿದೆ. (ANI Photo)(ANI/PIB)
(12 / 13)
ಮುಂದಿನ ವರ್ಷದ ಆರಂಭದಲ್ಲಿಯೇ ತ್ರಿಪುರ ಮತ್ತು ಮೇಘಾಲಯಗಳಲ್ಲಿ ಚುನಾವಣೆ ನಡೆಯಲಿದೆ. ಎನ್‌ಪಿಪಿ-ಬಿಜೆಪಿ ಸರಕಾರವು ಮೇಘಾಲಯದಲ್ಲಿ ಆಡಳಿತ ನಡೆಸುತ್ತಿದ್ದು, ತ್ರಿಪುರದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ.(ANI Photo)(ANI)
ಇತರ ಗ್ಯಾಲರಿಗಳು