Priyanka Gandhi: ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುವರೇ?
- Kerala Politics ಪ್ರಿಯಾಂಕ ಗಾಂಧಿ ವಾದ್ರಾ( Priyanka Gandhi Vadra) ಅವರು ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಧುಮುಕುವುದು ನಿಕ್ಕಿಯಾಗಿದೆ.ಸಹೋದರ ರಾಹುಲ್ ಗಾಂಧಿ ( Rahul Gandhi) ತೆರವು ಮಾಡಲಿರುವ ವಯನಾಡು( Wayanad) ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಕಣಕ್ಕಿಳಿಯುವ ಘೋಷಣೆಯಾಗಿದ್ದು ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

(1 / 7)
ಪ್ರಿಯಾಂಕಾ ಗಾಂಧಿ ವಾದ್ರಾ ಗಾಂಧಿ ಕುಟುಂಬದ ಕುಡಿ.ಇತ್ತೀಚಿಗೆ ರಾಜಕೀಯವಾಗಿ ಸಕ್ರಿಯರಾಗಿರುವ ಅವರು ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಧುಮುಕುತ್ತಿದ್ದಾರೆ.
(2 / 7)
ಮುತ್ತಾತ ನೆಹರು, ಅಜ್ಜಿ ಇಂದಿರಾಗಾಂಧಿ, ಅಜ್ಜ ಫಿರೋಜ್ ಗಾಂಧಿ, ಅಪ್ಪ ರಾಜೀವ್ ಗಾಂಧಿ, ಅಮ್ಮ ಸೋನಿಯಾಗಾಂಧಿ, ಅಣ್ಣ ರಾಹುಲ್ ಗಾಂಧಿ ಅವರ ನಂತರ ಕುಟುಂಬದಲ್ಲಿ ಚುನಾವಣೆ ಅಖಾಡಕ್ಕೆ ಧುಮುಕುವ ಏಳನೇಯವರು ಪ್ರಿಯಾಂಕ.
(3 / 7)
ಎರಡು ದಶಕದಿಂದಲೂ ಪ್ರಿಯಾಂಕ ರಾಜಕೀಯವಾಗಿ ಸಕ್ರಿಯವಾಗಿದ್ದಾರೆ. ಒಂದು ದಶಕದಿಂದ ಸಹೋದರ ರಾಹುಲ್‌ಗೆ ಬೆಂಬಲವಾಗಿ ನಿಂತಿದ್ದಾರೆ.
(4 / 7)
ಎರಡು ವರ್ಷದ ಹಿಂದೆ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಗಾಂಧಿ ಅವರು ಚುನಾವಣೆ ಕಣಕ್ಕೆ ಇಳಿಯಬೇಕು ಎನ್ನುವ ಬೇಡಿಕೆ ಇತ್ತು. ಆದರೆ ಸ್ಪರ್ಧಿಸಿರಲಿಲ್ಲ.
(5 / 7)
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಪ್ರಿಯಾಂಕ ಕಣಕ್ಕೆ ಇಳಿಯಬಹುದು ಎನ್ನುವ ಲೆಕ್ಕಾಚಾರಗಳೂ ಇದ್ದವು. ಆದರೂ ಅವರು ಪ್ರಚಾರದಲ್ಲಿ ಮಾತ್ರ ಭಾಗಿಯಾಗಿದ್ದರು.
(6 / 7)
ಅಜ್ಜಿ ಇಂದಿರಾಗಾಂಧಿ ಅವರನ್ನೇ ಹೋಲುವ ಪ್ರಿಯಾಂಕ ಅವರಿಗೂ ಸಾಕಷ್ಟು ಅಭಿಮಾನಗಳಿದ್ದಾರೆ. ರಾಜಕೀಯವಾಗಿಯೂ ತಮ್ಮ ಭಾಷಣದಲ್ಲಿ ಪ್ರಬುದ್ಧತೆ ತೋರುತ್ತಾ ಬಂದಿದ್ದಾರೆ ಪ್ರಿಯಾಂಕ.
ಇತರ ಗ್ಯಾಲರಿಗಳು