ಪೂಜಾ ಹೆಗ್ಡೆ ವರ್ಸಸ್ ಶ್ರೀನಿಧಿ ಶೆಟ್ಟಿ: ಮೇ 1ರಿಂದ ಬಾಕ್ಸ್‌ಆಫೀಸ್‌ನಲ್ಲಿ ಕನ್ನಡ ನಟಿಯರ ಪೈಪೋಟಿ
ಮೇ 1ರಂದು ಶ್ರೀನಿಧಿ ನಟಿಸಿರುವ ಹಿಟ್ 3 ಸಿನಿಮಾ ಮತ್ತು ಪೂಜಾ ಹೆಗ್ಡೆ ನಟನೆಯ ರೆಟ್ರೋ ಸಿನಿಮಾ ರಿಲೀಸ್ ಆಗುತ್ತಿದೆ. ಕರ್ನಾಟಕದ ನಟಿಯರು ಪರಭಾಷೆಗಳಲ್ಲಿ ಖ್ಯಾತಿ ಪಡೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ನಟಿಯರಾದ ಪೂಜಾ ಹೆಗ್ಡೆ ಮತ್ತು ಶ್ರೀನಿಧಿ ಶೆಟ್ಟಿ ಬಗ್ಗೆ ವಿಶೇಷ ಚರ್ಚೆ ನಡೆಯುತ್ತಿದೆ.
(1 / 8)
ಕರ್ನಾಟಕ ಮೂಲದ ಹಲವು ನಟಿಯರು ಪರಭಾಷೆಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ. ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಮಾತ್ರವಲ್ಲದೆ ಪೂಜಾ ಹೆಗ್ಡೆ ಮುಂತಾದವರು ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎಣಿಸಿಕೊಂಡಿದ್ದಾರೆ. ಈ ವಾರ ಬಿಡುಗಡೆಯಾಗುವ ಎರಡು ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಪೂಜಾ ಹೆಗ್ಡೆ ಮತ್ತು ಶ್ರೀನಿಧಿ ಶೆಟ್ಟಿ ಪೈಪೋಟಿ ನಡೆಸಲಿದ್ದಾರೆ.
(2 / 8)
ಹಿಟ್ 3 ಸಿನಿಮಾ ಮೂಲಕ ಶ್ರೀನಿಧಿ ಶೆಟ್ಟಿ ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಆಕ್ಷನ್ ಸಿನಿಮಾದಲ್ಲಿ ನಾನಿ ನಾಯಕನಾಗಿ ನಟಿಸಿದ್ದಾರೆ.
(3 / 8)
ರೆಟ್ರೋ ಮೂಲಕ ಪೂಜಾ ಹೆಗ್ಡೆ ದೀರ್ಘ ಗ್ಯಾಪ್ ನಂತರ ತೆಲುಗು ಪ್ರೇಕ್ಷಕರನ್ನು ಭೇಟಿಯಾಗುತ್ತಿದ್ದಾರೆ. ಇದು ಮೂಲ ತಮಿಳು ಸಿನಿಮಾ. ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದಲ್ಲಿ ಸೂರ್ಯಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.
(5 / 8)
ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಹೆಗ್ಡೆ ಜೊತೆ ಶ್ರೀನಿಧಿ ಶೆಟ್ಟಿಯನ್ನು ಹೋಲಿಸಿ ನೆಟಿಜನ್‌ಗಳು ಹಲವು ಟ್ವೀಟ್‌ಗಳನ್ನು ಹಾಕುತ್ತಿದ್ದಾರೆ.
(6 / 8)
ನಟನೆ ಮತ್ತು ಗ್ಲಾಮರ್‌ನಲ್ಲಿ ಪೂಜಾ ಹೆಗ್ಡೆಗಿಂತ ಶ್ರೀನಿಧಿ ಕಡಿಮೆಯೇನಿಲ್ಲ ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೂಜಾ ಹೆಗ್ಡೆಯನ್ನು ಮೀರಿಸಿ ನಂಬರ್ ಒನ್ ಸ್ಟಾರ್ ಆಗುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
(7 / 8)
ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಸಿನಿಮಾ ವೀಕ್ಷಕರ ಗಮನ ಸೆಳೆದಿದ್ದಾರೆ. ಶ್ರೀನಿಧಿ ರಮೇಶ್ ಶೆಟ್ಟಿ ಅವರು 1992ರ ಅಕ್ಟೋಬರ್ 21ರಂದು ಜನಿಸಿದ್ದಾರೆ. ಮಿಸ್ ಸುಪ್ರನೇಷನಲ್ 2016ರಲ್ಲಿ ಗೆಲುವು ಪಡೆದಿದ್ದರು. ಈ ಪ್ರಶಸ್ತಿ ಪಡೆದ ಎರಡನೇ ಭಾರತೀಯ ವ್ಯಕ್ತಿ ಇವರಾಗಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್‌ಗೆ ನಾಮನಿರ್ದೇಶನಗೊಂಡಿದ್ದರು. ಸೈಮಾ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಇತರ ಗ್ಯಾಲರಿಗಳು