ಪೋಪ್ ಫ್ರಾನ್ಸಿಸ್ ನಿಧನ; ಅವರ ಕೊನೆಯ ಈಸ್ಟರ್ ಆಚರಣೆಯ ಫೋಟೋಸ್ ಮತ್ತು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭೇಟಿಯ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪೋಪ್ ಫ್ರಾನ್ಸಿಸ್ ನಿಧನ; ಅವರ ಕೊನೆಯ ಈಸ್ಟರ್ ಆಚರಣೆಯ ಫೋಟೋಸ್ ಮತ್ತು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭೇಟಿಯ ಚಿತ್ರನೋಟ

ಪೋಪ್ ಫ್ರಾನ್ಸಿಸ್ ನಿಧನ; ಅವರ ಕೊನೆಯ ಈಸ್ಟರ್ ಆಚರಣೆಯ ಫೋಟೋಸ್ ಮತ್ತು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭೇಟಿಯ ಚಿತ್ರನೋಟ

ಪೋಪ್ ಫ್ರಾನ್ಸಿಸ್ ನಿಧನ: ಪೋಪ್ ಫ್ರಾನ್ಸಿಸ್ ಅವರ ಕೊನೆಯ ಈಸ್ಟರ್ ಆಚರಣೆ ಮತ್ತು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ದಂಪತಿ ಅವರನ್ನು ಭೇಟಿಯಾದ ಸಂದರ್ಭದ ಚಿತ್ರನೋಟ ಇಲ್ಲಿದೆ.

ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಅವರು ಸೋಮವಾರ ಬೆಳಿಗ್ಗೆ ನಿಧನರಾಗಿದ್ದು, ಅವರ ಕೊನೆಯ ಈಸ್ಟರ್ ಆಚರಣೆ ಮತ್ತು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿಯೋಗ ಭೇಟಿಯ ಸಂದರ್ಭದ ಕೆಲವು ಫೋಟೋಸ್ ಇಲ್ಲಿವೆ.
icon

(1 / 10)

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಿಯೋಗ ಪೋಪ್ ಫ್ರಾನ್ಸಿಸ್ ಅವರನ್ನು ಈಸ್ಟರ್ ಸಂಡೇ ದಿನ ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿದರು.
icon

(2 / 10)

(via REUTERS)

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಜತೆಗೆ ಮಾತುಕತೆ ನಡೆಸುತ್ತ  ಡೊನಾಲ್ಡ್ ಟ್ರಂಪ್ ಅವರ ವಲಸಿಗರ ನೀತಿ ವಿಚಾರದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬಹಿರಂಗವಾಗಿಯೆ ಟೀಕೆ ಮಾಡಿದ್ದರು. ಅಮೆರಿಕದ ನೀತಿಗಳ ಕುರಿತು ಸ್ವಲ್ಪ ಹೊತ್ತು ಇಬ್ಬರೂ ಮಾತುಕತೆ ನಡೆಸಿದರು ಎಂದು ಚರ್ಚ್‌ನ ಮೂಲಗಳು ತಿಳಿಸಿವೆ.
icon

(3 / 10)

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು 2019ರಲ್ಲಿ ರೋಮನ್ ಕ್ಯಾಥೋಲಿಕ್ ಆಗಿ ಬದಲಾಗಿದ್ದರು. ಈ ಭೇಟಿಯ ವೇಳೆ ಅವರು ವ್ಯಾಟಿಕನ್ ಅಧಿಕೃತರ ಜತೆಗೆ ವಲಸೆ ಮತ್ತು ಜಾಗತಿಕ ಬಿಕ್ಕಟ್ಟುಗಳ ಕುರಿತು ಮಾತುಕತೆ ನಡೆಸಿದರು ಎಂದು ವ್ಯಾಟಿಕನ್ ಮಾಧ್ಯಮ ಮೂಲಗಳು ತಿಳಿಸಿವೆ.
icon

(4 / 10)

(AFP)

ಜೆಡಿ ವ್ಯಾನ್ಸ್ ನಿಯೋಗದಲ್ಲಿದ್ದ ಅಧಿಕಾರಿಗಳು ಕೂಡ ಪೋಪ್ ಅವರೊಂದಿಗೆ ಮಾತುಕತೆಯಲ್ಲಿ ಭಾಗಿಯಗದರು. ವ್ಯಾನ್ಸ್ ನಿಯೋಗ ವ್ಯಾಟಿಕನ್ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಅಲ್ಲೇ ಪೋಪ್ ಫ್ರಾನ್ಸಿಸ್ ಅವರು ಜೆಡಿ ವ್ಯಾನ್ಸ್ ಅವರ ಮೂವರು ಮಕ್ಕಳಿಗೆ ಮೂರು ದೊಡ್ಡ ಚಾಕೊಲೇಟ್ ಈಸ್ಟರ್ ಎಗ್‌ಗಳನ್ನು ಕೊಟ್ಟು ಹರಸಿದರು.
icon

(5 / 10)

ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ಗೊತ್ತಾಗುತ್ತಿದೆ. ನೀವು ಬೇಗ ಗುಣಮುಖರಾಗಿ ಎಂದು ಜೆಡಿ ವ್ಯಾನ್ಸ್ ಹಾರೈಸಿದರು. ನನ್ನನ್ನು ನೋಡಲು ಆಗಮಿಸಿದ್ದಕ್ಕೆ ಧನ್ಯವಾದಗಳು ಎಂದು ಪೋಪ್ ಫ್ರಾನ್ಸಿಸ್ ಅವರು ಪ್ರತಿನುಡಿದರು. ಅವರು ಪೋಪ್ ಅವರೊಂದಿಗೆ 17 ನಿಮಿಷ ಇದ್ದರು ಎಂದು ದ ಗಾರ್ಡಿಯನ್ ವರದಿ ಮಾಡಿದೆ.
icon

(6 / 10)

ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸಂಡೇ ದಿನ ಸಂತ ಪೀಟರ್‌ನ ಬಾಸಿಲಿಕಾದ ಬಾಲ್ಕನಿಯಿಂದ ಈಸ್ಟರ್ ಆಚರಣೆಗೆ ಶುಭ ಹಾರೈಸಿದರು.
icon

(7 / 10)

ಈಸ್ಟರ್ ಮಾಸ್‌ನ ಜನಸಮೂಹದ ನಡುವೆ ವ್ಯಾಟಿಕನ್‌ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ಗೆ ತೆರೆದ ಜೀಪ್‌ನಲ್ಲಿ ಸಾಗಿ ಬಂದ ಪೋಪ್ ಫ್ರಾನ್ಸಿಸ್‌.
icon

(8 / 10)

ಬಾಲ್ಕನಿಯಿಂದಲೇ ಜನಸಮೂಹವನ್ನು ನೋಡುತ್ತ ಹರಸಿದ ಪೋಪ್ ಫ್ರಾನ್ಸಿಸ್‌.
icon

(9 / 10)

ಬಾಲ್ಕನಿಯಿಂದಲೇ ಜನಸಮೂಹವನ್ನು ನೋಡುತ್ತ ಹರಸಿದ ಪೋಪ್ ಫ್ರಾನ್ಸಿಸ್‌.
(AFP)

ಪೋಪ್ ಫ್ರಾನ್ಸಿಸ್ ಅವರಿಗೆ ಕಂಡ ಈಸ್ಟರ್ ಆಚರಣೆಗೆಂದು ಸೇರಿದ್ದ ಜನಸಮೂಹ.
icon

(10 / 10)

ಪೋಪ್ ಫ್ರಾನ್ಸಿಸ್ ಅವರಿಗೆ ಕಂಡ ಈಸ್ಟರ್ ಆಚರಣೆಗೆಂದು ಸೇರಿದ್ದ ಜನಸಮೂಹ.
(AFP)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು