Pranita Subhash Bathtub Pics: ಮಾಲ್ಡೀವ್ಸ್ನಲ್ಲಿ ನಟಿ ಪ್ರಣೀತಾಗೆ ವಾದ್ಯವೃಂದದ ಸ್ವಾಗತ; ಬಾತ್ ಟಬ್ ಸ್ನಾನ.. ಇಲ್ಲಿವೆ ಫೋಟೋಸ್..
- ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಫಿಟ್ನೆಸ್ ಬಗ್ಗೆ ಸದಾ ಕಾಳಜಿ ವಹಿಸ್ತಾರೆ. ಅದನ್ನು ಬಿಡಿಸಿ ಹೇಳಬೇಕಿಲ್ಲ. ಏಕೆಂದರೆ, ಮಗುವಿಗೆ ಜನ್ಮ ನೀಡಿದ ಕೇವಲ ಎರಡೇ ತಿಂಗಳಲ್ಲಿ ತಮ್ಮ ಫಿಟ್ನೆಸ್ ಹೇಗಿದೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಹೊಸ ಫೋಟೋಶೂಟ್ ಮಾಡಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಪ್ರಣೀತಾ, ಅಲ್ಲಿನ ಬಗೆಬಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಕಿನಿಯಲ್ಲಿಯೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದ ಈ ನಟಿ, ಇದೀಗ ಬಾತ್ಟಬ್ನಲ್ಲಿ ಸ್ನಾನ ಮಾಡುತ್ತಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

(1 / 6)
ಮನೆಗೆ ಮಗು ಬಂದ ಬಳಿಕ ಸಿನಿಮಾದಿಂದ ಕೊಂಚ ದೂರ ಉಳಿದಿರುವ ಪ್ರಣೀತಾ, ಫಿಟ್ನೆಸ್ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.(Instagram/ Pranita Subhash )
(2 / 6)
ಉದ್ಯಮಿ ನಿತಿನ್ ಜತೆ ಮದುವೆಯಾಗಿ, ಮಗಳು ಆರ್ನಾಗೆ ಜನ್ಮ ನೀಡಿ, ಸಿನಿಮಾದಿಂದ ಕೊಂಚ ದೂರವೇ ಉಳಿದಿರುವ ಪ್ರಣೀತಾ, ಸದ್ಯ ಮಾಲ್ಡೀವ್ಸ್ ಪ್ರವಾಸದ ಮಜಾ ಅನುಭವಿಸುತ್ತಿದ್ದಾರೆ.(Instagram/ Pranita Subhash )
(3 / 6)
ಪತಿ ನಿತಿನ್ ಜತೆಗೆ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ಗೆ ಭೇಟಿ ನೀಡಿ, ಪೂಲ್ ಪಾರ್ಟಿ ಮಾಡಿ, ಸಂಭ್ರಮಿಸಿದ್ದಾರೆ. ಈಜುಕೊಳದಲ್ಲಿ ಪತಿ ಜತೆ ಮಿಂದೆದ್ದಿದ್ದಾರೆ.(Instagram/ Pranita Subhash )
(4 / 6)
ಬರೀ ಪೂಲ್ ಪಾರ್ಟಿ ಅಷ್ಟೇ ಅಲ್ಲ, ಬಿಕಿನಿಯಲ್ಲಿಯೂ ದೇಹ ಪ್ರದರ್ಶಿಸಿ, ಫಿಟ್ನೆಸ್ ಹೇಗಿದೆ ಎಂಬುದನ್ನೂ ಫೋಟೋ ಮೂಲಕ ಹೊರಗೆಡವಿದ್ದಾರೆ.(Instagram/ Pranita Subhash )
(5 / 6)
ಇದೀಗ ಮಾಲ್ಡೀವ್ಸ್ನಲ್ಲಿ ನಟಿಗೆ ಸಿಕ್ಕ ಸ್ವಾಗತ ಹೇಗಿತ್ತು ಎಂಬುದನ್ನು ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಪ್ರಣೀತಾ ಆಗಮಿಸುತ್ತಿದ್ದಂತೆ, ವಾದ್ಯದವರೂ ಅವರನ್ನು ಸ್ವಾಗತಿಸಿದ್ದಾರೆ.(Instagram/ Pranita Subhash )
ಇತರ ಗ್ಯಾಲರಿಗಳು