ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್​ ಟ್ರೋಫಿಯನ್ನು ಮುಟ್ಟದೆ ರೋಹಿತ್, ದ್ರಾವಿಡ್ ಕೈಹಿಡಿದ ನರೇಂದ್ರ ಮೋದಿ; ಕಾರಣವೇನು?

ಟಿ20 ವಿಶ್ವಕಪ್​ ಟ್ರೋಫಿಯನ್ನು ಮುಟ್ಟದೆ ರೋಹಿತ್, ದ್ರಾವಿಡ್ ಕೈಹಿಡಿದ ನರೇಂದ್ರ ಮೋದಿ; ಕಾರಣವೇನು?

Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಟಿ20 ವಿಶ್ವಕಪ್ ಗೆದ್ದ ಭಾರತದ ಆಟಗಾರರೊಂದಿಗೆ ಫೋಟೋಗೆ ಪೋಸ್ ಕೊಟ್ಟರು. ಆದರೆ ಈ ವೇಳೆ ಮೋದಿ ಟ್ರೋಫಿಯನ್ನು ಮುಟ್ಟಲಿಲ್ಲ. ಕಾರಣವೇನು?

ಟಿ20 ವಿಶ್ವಕಪ್ 2024ರ ಚಾಂಪಿಯನ್ ಭಾರತೀಯ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಇಂದು (ಜುಲೈ 4) ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾದರು.
icon

(1 / 6)

ಟಿ20 ವಿಶ್ವಕಪ್ ಪ್ರಶಸ್ತಿಯೊಂದಿಗೆ ಪ್ರಧಾನಿ ಮೋದಿ ಫೋಟೋ ತೆಗೆಸಿಕೊಂಡರು. ಆದರೆ ಈ ವೇಳೆ ಟ್ರೋಫಿಯನ್ನು ಮುಟ್ಟಲಿಲ್ಲ. ಟ್ರೋಫಿ ಬದಲಿಗೆ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರ ಕೈಗಳನ್ನು ಮೋದಿ ಹಿಡಿದಿದ್ದರು. ಆ ಮೂಲಕ ಪ್ರಶಸ್ತಿ ಗೆಲ್ಲಲು ಶ್ರಮಿಸಿದವರ ಕಠಿಣ ಪರಿಶ್ರಮವನ್ನು ಗುರುತಿಸುವ ಕೆಲಸ ಮಾಡಿದರು.
icon

(2 / 6)

ಪ್ರಧಾನಿ ಮೋದಿ ಅವರು ಭಾರತೀಯ ಆಟಗಾರರೊಂದಿಗೆ ತಮಾಷೆಯ ಸಂಭಾಷಣೆ ನಡೆಸಿದರು. ಆಟಗಾರರ ಸುತ್ತಲೂ ಕುಳಿತು ಪ್ರಧಾನಿ ಅವರು ಆಟಗಾರರ ಪ್ರದರ್ಶನದ ಕುರಿತು ಮಾತನಾಡಿದರು.
icon

(3 / 6)

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೈಕುಲುಕಿದರು. 
icon

(4 / 6)

ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ಅವರು ಮೋದಿ ಜೊತೆ ಫೋಟೋಗೆ ಪೋಸ್ ಕೊಟ್ಟರು. ಈ ಜೋಡಿಯ ಮಗ ಅಂಗದ್​ನನ್ನು ಮೋದಿ  ಎತ್ತಿಕೊಂಡರು.
icon

(5 / 6)

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ನಮೋ' ಹೆಸರಿನ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು.
icon

(6 / 6)

ಇತರ ಗ್ಯಾಲರಿಗಳು