ಕನ್ನಡ ಸುದ್ದಿ  /  Photo Gallery  /  Prime Minister Narendra Modi Holds A Mega Roadshow In Ahmedabad

PM Modi Roadshow: ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿಯಿಂದ 50 ಕಿ.ಮೀ 'ಮೆಗಾ ರೋಡ್ ಶೋ'!

  • ಅಹಮದಾಬಾದ್:‌ ಗುಜರಾತ್‌ ವಿಧಾನಸಭೆ ಚುನಾವಣೆಗೆ ಇಂದು (ಡಿ.01-ಗುರುವಾರ) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಡಿ.05(ಸೋಮವಾರ)ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರ ಅಹಮದಾಬಾದ್‌ನಲ್ಲಿ ಇಂದು ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಒಟ್ಟು 50 ಕಿ.ಮೀ ದೂರ ಕ್ರಮಿಸಿದ 'ಮೆಗಾ ರೋಡ್ ಶೋ' ಬಗ್ಗೆ ಇಲ್ಲಿದೆ ಮಾಹಿತಿ..

ಅಹಮದಾಬಾದ್‌ನಲ್ಲಿ 50 ಕಿ.ಮೀ 'ಮೆಗಾ ರೋಡ್ ಶೋ' ನಡೆಸಿದ ಪ್ರಧಾನಿ ಮೋದಿ, ರಸ್ತೆಯುದ್ದಕ್ಕೂ ಜಮಾವಣೆಗೊಂಡಿದ್ದ ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಈ ವೇಳೆ ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ಕಂಡ ಅವರ ಅಭಿಮಾನಿಗಳು ಸಂಭ್ರಮಿಸಿದರು.
icon

(1 / 5)

ಅಹಮದಾಬಾದ್‌ನಲ್ಲಿ 50 ಕಿ.ಮೀ 'ಮೆಗಾ ರೋಡ್ ಶೋ' ನಡೆಸಿದ ಪ್ರಧಾನಿ ಮೋದಿ, ರಸ್ತೆಯುದ್ದಕ್ಕೂ ಜಮಾವಣೆಗೊಂಡಿದ್ದ ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಈ ವೇಳೆ ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ಕಂಡ ಅವರ ಅಭಿಮಾನಿಗಳು ಸಂಭ್ರಮಿಸಿದರು.(ANI)

50 ಕಿ.ಮೀ 'ಮೆಗಾ ರೋಡ್ ಶೋ' ಉದ್ದಕ್ಕೂ, 'ನರೇಂದ್ರ ಮೋದಿ ಕೀ ಜೈ' ಘೋಷಣೆಗಳನ್ನು ಮೊಳಗಿಸಿದ ಬಿಜೆಪಿ ಕಾರ್ಯಕರ್ತರು, ಅತ್ಯಂತ ಉತ್ಸಾಹದಿಂದ ರೋಡ್‌ ಶೋದಲ್ಲಿ ಭಾಗವಹಿಸಿದರು.
icon

(2 / 5)

50 ಕಿ.ಮೀ 'ಮೆಗಾ ರೋಡ್ ಶೋ' ಉದ್ದಕ್ಕೂ, 'ನರೇಂದ್ರ ಮೋದಿ ಕೀ ಜೈ' ಘೋಷಣೆಗಳನ್ನು ಮೊಳಗಿಸಿದ ಬಿಜೆಪಿ ಕಾರ್ಯಕರ್ತರು, ಅತ್ಯಂತ ಉತ್ಸಾಹದಿಂದ ರೋಡ್‌ ಶೋದಲ್ಲಿ ಭಾಗವಹಿಸಿದರು.(ANI)

ಯಾತ್ರೆಯ ಮಧ್ಯೆ ಪ್ರಧಾನಿ ಮೋದಿ ಅವರು, ಅಹಮದಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಸರ್ದಾರ್‌ ಪಟೇಲ್‌ ಅವರ ಜೈಕಾರ ಕೂಗಿದರು.
icon

(3 / 5)

ಯಾತ್ರೆಯ ಮಧ್ಯೆ ಪ್ರಧಾನಿ ಮೋದಿ ಅವರು, ಅಹಮದಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಸರ್ದಾರ್‌ ಪಟೇಲ್‌ ಅವರ ಜೈಕಾರ ಕೂಗಿದರು.(ANI)

ಇನ್ನು ಪ್ರಧಾನಿ ಮೋದಿ ಅವರು ತಮ್ಮ ಬೃಹತ್ ರೋಡ್‌ ಶೋ ವೇಳೆ, ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಡಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದರು.
icon

(4 / 5)

ಇನ್ನು ಪ್ರಧಾನಿ ಮೋದಿ ಅವರು ತಮ್ಮ ಬೃಹತ್ ರೋಡ್‌ ಶೋ ವೇಳೆ, ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಡಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದರು.(ANI)

ಗುಜರಾತ್‌ ವಿಧಾನಸಭೆ ಚುನಾವಣೆಗೆ ಇಂದು (ಡಿ.01-ಗುರುವಾರ) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು , ಡಿ.05(ಸೋಮವಾರ) ಎರಡನೇ ಹಂತದ ಮತದಾನ ನಡೆಯಲಿದೆ. ಡಿ.08ರಂದು ಫಲಿತಾಂಶ ಪ್ರಕಟವಾಗಲಿದೆ.
icon

(5 / 5)

ಗುಜರಾತ್‌ ವಿಧಾನಸಭೆ ಚುನಾವಣೆಗೆ ಇಂದು (ಡಿ.01-ಗುರುವಾರ) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು , ಡಿ.05(ಸೋಮವಾರ) ಎರಡನೇ ಹಂತದ ಮತದಾನ ನಡೆಯಲಿದೆ. ಡಿ.08ರಂದು ಫಲಿತಾಂಶ ಪ್ರಕಟವಾಗಲಿದೆ.(ANI)


ಇತರ ಗ್ಯಾಲರಿಗಳು