ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

ಹಾಸನ ಲೈಂಗಿಕ ಹಗರಣ, ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಕೇಸ್ ನಿರ್ಣಾಯಕ ಹಂತಕ್ಕೆ ಬಂದಿದೆ. ತಲೆಮರೆಸಿಕೊಂಡ ಒಂದು ತಿಂಗಳ ಬಳಿಕ ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು.

ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.
icon

(1 / 6)

ರಾಜ್ಯ ರಾಜಕಾರಣದಲ್ಲಿ 40 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕಳೆದ 25 ವರ್ಷದಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ನೆಲದ ಕಾನೂನಿನ ಬಗ್ಗೆ ಗೌರವವಿದೆ, ದೇವರ ಮೇಲೆ ನಂಬಿಕೆಯೂ ಇದೆ. ಪ್ರಜ್ವಲ್ ವಿಚಾರ ಕೋರ್ಟ್‌ನಲ್ಲಿರುವ ಕಾರಣ ಏನೂ ಮಾತನಾಡಲ್ಲ. ಎಲ್ಲವನ್ನೂ ಶ್ರೀ ಮಂಜುನಾಥನಿಗೆ ಬಿಟ್ಟಿದ್ದೇನೆ ಎಂದು ಧರ್ಮಸ್ಥಳದಲ್ಲಿ ಎಚ್ ಡಿ ರೇವಣ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ. 
icon

(2 / 6)

ವಾಪಸ್ ಬರುವಂತೆ ಎಚ್ ಡಿ ದೇವೇಗೌಡರು ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಎಚ್ಚರಿಕೆ ಕೊಟ್ಟಿದ್ದರು. ನಾನೂಎಚ್ಚರಿಕೆ ಕೊಟ್ಟಿದ್ದೆ. ಈಗ ವಿಡಿಯೋ ಹೇಳಿಕೆ ನೀಡಿರುವ ಆತ ಮೇ 31ಕ್ಕೆ ವಾಪಸ್ ಬರುವುದಾಗಿ ಹೇಳಿರುವುದು ಸಮಾಧಾನ ತಂದಿದೆ  ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. 
icon

(3 / 6)

ಎಸ್‌ಐಟಿ ಬಳಿ ಇರುವ ಸಾಕ್ಷಿಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ತನಿಖೆ ಮುಂದುವರಿಯುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಅವರನ್ನು ಕರೆ ತರುವ ಪ್ರಯತ್ನ ಎಲ್ಲ ರೀತಿಯಲ್ಲೂ ನಡೆಯುತ್ತಿತ್ತು. ಈಗ ಒಂದು ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ಅವರು ಮೇ 31 ರಂದು ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಹಕಾರ ನೀಡುವುದಾಗಿ ಅಜ್ಞಾತ ಸ್ಥಳದಿಂದ ಕಳುಹಿಸಿದ ವಿಡಿಯೋ ಹೇಳಿಕೆಯನ್ನು ಸ್ವಾಗತಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತುಮಕೂರಿನಲ್ಲಿ ಹೇಳಿದರು.
icon

(4 / 6)

ಪ್ರಜ್ವಲ್ ರೇವಣ್ಣ ಕೇಸಿನ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ರಾಹುಲ್ ವಿಚಾರ ಪ್ರಸ್ತಾಪಿಸಿದ ಪ್ರಜ್ವಲ್‌ಗೆ ಕಾಲವೇ ಉತ್ತರಿಸಲಿದೆ. ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಹೇಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮ ಪ್ರತಿನಿಧಿಗಳಿಂದ ವಿಷಯ ತಿಳಿಯಿತು. ಪ್ರಜ್ವಲ್ ರೇವಣ್ಣ ಏನು ಬೇಕಾದರೂ ಹೇಳಿಕೊಳ್ಳಲಿ. ಯಾರ ಬಾಯಿಗೂ ನಾವು ಬೀಗ ಹಾಕಲು ಆಗುವುದಿಲ್ಲ. ಆದರೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗದೇ ಅವರಿಗೆ ಬೇರೆ ದಾರಿಯಿಲ್ಲ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. 
icon

(5 / 6)

ಸಂಸದ ಪ್ರಜ್ವಲ್ ರೇವಣ್ಣ ಅವರು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಮೇ 31ರಂದು ದೇಶಕ್ಕೆ ವಾಪಸ್ ಬರ್ತೇನೆ. ತನಿಖೆ ಎದುರಿಸ್ತೇನೆ ಎಂದಿದ್ದಾರೆ. ಇದನ್ನು ಸ್ವಾಗತಿಸುವೆ. ಈ ಕೆಲಸವನ್ನು ಅವರು ಮೊದಲೇ ಮಾಡಬೇಕಾಗಿತ್ತು. ಆಗ ಅದಕ್ಕೆ ಒಂದು ಅರ್ಥ ಇತ್ತು. ಇದು ಲೇಟಾಯಿತು. ಆದರೆ, ಈಗಲಾದರೂ ಹೇಳಿದ್ದಾರಲ್ಲ, ಬೇಗ ಬಂದು ತನಿಖೆಗೆ ಸಹಕರಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್ ಹೇಳಿದರು
icon

(6 / 6)

ಇತರ ಗ್ಯಾಲರಿಗಳು