ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಜನಮೆಚ್ಚುಗೆ ಪಾತ್ರರಾದ ಪಿಎಸ್‌ಐ ಅನ್ನಪೂರ್ಣಾ ಕಾಲೇಜು ದಿನಗಳಲ್ಲಿ ಹೀಗಿದ್ದರು- ಚಿತ್ರನೋಟ
ಹುಬ್ಬಳ್ಳಿ ಎನ್‌ಕೌಂಟರ್ ಬಳಿಕ ಲೇಡಿ ಸಿಂಗಮ್ ಖ್ಯಾತಿ ಪಡೆದುಕೊಂಡ ಪಿಎಸ್ಐ ಅನ್ನಪೂರ್ಣಾ ಮುಕ್ಕಣ್ಣವರ ಯಾರು ಎಂಬ ಕುತೂಹಲ ಸಹಜ. ಪಿಎಸ್‌ಐ ಅನ್ನಪೂರ್ಣಾ ಅವರು ಕಾಲೇಜು ದಿನಗಳಲ್ಲಿ ಹೇಗಿದ್ದರು ಎಂಬ ಕುತೂಹಲ ತಣಿಸುವ ಚಿತ್ರನೋಟ ಇಲ್ಲಿದೆ.
(1 / 8)
ಹುಬ್ಬಳ್ಳಿಯಲ್ಲಿ ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ವೆಸಗಿದ ದುರುಳನನ್ನು ಎನ್‌ಕೌಂಟರ್ ಮೂಲಕ ಇಲ್ಲವಾಗಿಸಿದ ದಿಟ್ಟೆ ಪಿಎಸ್ಐ ಅನ್ನಪೂರ್ಣಾ ಮುಕ್ಕಣ್ಣವರ. ಅವರ ಪರಿಚಯ, ಫೋಟೋಸ್‌ಗಾಗಿ ಜಾಲತಾಣಗಳಲ್ಲಿ ಹುಡುಕಾಟ ನಡೆದಿದೆ. ಹಾಗೆ ಅವರ ಜನಪ್ರಿಯತೆ ಹೆಚ್ಚಾಗತೊಡಗಿದೆ.
(PRH)(2 / 8)
ಫೇಸ್‌ಬುಕ್, ಟ್ವಿಟರ್, ಸೋಷಿಯಲ್ ಮೀಡಿಯಾದಲ್ಲಿ ಅನ್ನಪೂರ್ಣಾ ಮುಕ್ಕಣ್ಣವರ ಅವರಿಲ್ವ? ಎಂಬಿತ್ಯಾದಿ ಪ್ರಶ್ನೆಗಳೂ ಸಹಜವಾಗಿಯೆ ಕೇಳಿಬಂದಿವೆ. ಅವರ ಫೋಟೋಸ್‌ಗಾಗಿ ತಲಾಶ್ ನಡೆದೇ ಇದೆ.
(PRH)(3 / 8)
ಪಿಎಸ್‌ಐ ಅನ್ನಪೂರ್ಣಾ ಮುಕ್ಕಣ್ಣವರ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗುಜನಗಟ್ಟಿ ಗ್ರಾಮದವರು. ರೈತ ಕುಟುಂಬದ ಹಿನ್ನೆಲಯಿಂದ ಬಂದವರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಗರಡಿಯಲ್ಲಿ ಪಳಗಿದವರು.
(PRH)(4 / 8)
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದು, ಬೆಂಗಳೂರಿನ ಜೆಕೆವಿಕೆಯಲ್ಲಿ ಎಂಎಸ್‌ಸಿ ಪದವಿಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಅನ್ನಪೂರ್ಣಾ ಮುಕ್ಕಣ್ಣವರ ಅವರಿಗೆ ಪೊಲೀಸ್ ಆಗಬೇಕು ಎಂಬ ಆಸೆ ಇತ್ತು.
(PRH)(6 / 8)
ಕೃಷಿ, ಪರಿಸರದ ಬಗ್ಗೆ ಕುತೂಹಲಿಯಾಗಿದ್ದ ಅವರು ಕಲಿಕೆಯಲ್ಲಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು.
(PRH)ಇತರ ಗ್ಯಾಲರಿಗಳು