ಪಿಎಸ್‌ಎಲ್ ಪ್ಲೇ ಆಫ್ ಪಂದ್ಯಗಳಿಗೆ ಸ್ಟೇಡಿಯಂ ಖಾಲಿ ಖಾಲಿ; ಇದು ಮುಜುಗರದ ಸಂಗತಿ ಎಂದ ವಾಸಿಂ ಅಕ್ರಮ್
- Pakistan Super League: ಭಾರತದಲ್ಲಿ ಐಪಿಎಲ್‌ನಂತೆಯೇ, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (PSL) ನಡೆಯುತ್ತದೆ. ಪಿಎಸ್‌ಎಲ್ ಒಂಬತ್ತನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಮಾರ್ಚ್ 18ರಂದು ಫೈನಲ್ ಪಂದ್ಯ ನಡೆಯುತ್ತಿದೆ. ಆದರೆ ಈ ಬಾರಿಯ ಟೂರ್ನಿಯ ಪ್ಲೇ ಆಫ್ ಹಂತದ ಪಂದ್ಯಗಳು ಪ್ರೇಕ್ಷಕರ ಕೊರತೆಯಿಂದೆ ಸೊರಗಿದೆ.

(1 / 5)
ಮಹತ್ವದ ಎಲಿಮನೇಟರ್ ಪಂದ್ಯ ನಡೆಯುತ್ತಿದ್ದರೂ, ಮೈದಾನವಿಡಿ ಖಾಲಿ ಖಾಲಿ ಕಂಡುಬಂದಿದೆ. ಇದು ಜಾಗತಿಕ ಮಟ್ಟದಲ್ಲಿ ಟೀಕೆಗೂ ಕಾರಣವಾಗಿದೆ. ಮೊಹಮ್ಮದ್ ರಿಜ್ವಾನ್ ನೇತೃತ್ವದ ಮುಲ್ತಾನ್ ಸುಲ್ತಾನ್ ತಂಡವು ಕ್ವಾಲಿಫೈಯರ್‌ನಲ್ಲಿ ಬಾಬರ್ ಅಜಮ್ ನೇತೃತ್ವದ ಪೇಶಾವರ್ ಜಲ್ಮಿ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲೂ ಅಭಿಮಾನಿಗಳ ಸಂಖ್ಯೆ ಕಡಿಮೆ ಇತ್ತು.(X)
(2 / 5)
ಪಿಎಸ್‌ಎಲ್ ಟೂರ್ನಿಯಲ್ಲಿ ಮಹತ್ವದ ಪ್ಲೇಆಫ್ ಪಂದ್ಯವನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಪ್ರೇಕ್ಷಕರು ಬರುವ ನಿರೀಕ್ಷೆ ಇತ್ತು. ಕರಾಚಿಯಲ್ಲಿ ನಡೆದ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕೊರತೆಯು ಪಾಕ್ ಜನತೆ ಹಾಗೂ ಕ್ರಿಕೆಟಿಗರ ಕಳವಳಕ್ಕೆ ಕಾರಣವಾಗಿದೆ.(X)
(3 / 5)
ಶುಕ್ರವಾರ ನಡೆದ ಪಂದ್ಯದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಎಲಿಮಿನೇಟರ್ 1ರಲ್ಲಿ ಮುಖಾಮುಖಿಯಾಗಿದ್ದವು. ಆದರೆ, ನಿರ್ಣಾಯಕ ಪಂದ್ಯವು ಬಹುತೇಕ ಖಾಲಿ ಮೈದಾನದಲ್ಲಿ ನಡೆಯಿತು. ಇದು ವ್ಯಾಪಕ ಟೀಕೆಗೂ ಕಾರಣವಾಗಿದೆ.(X)
(4 / 5)
ಪಂದ್ಯಾವಳಿಯು ಲಾಹೋರ್, ರಾವಲ್ಪಿಂಡಿ ಮತ್ತು ಮುಲ್ತಾನ್‌ನಲ್ಲಿ ನಡೆದಾಗ ಬಹುತೇಕ ಸ್ಟೇಡಿಯಂಗಳು ಭರ್ತಿಯಾಗಿದ್ದವು. ಆದರೆ ಕರಾಚಿ ಲೆಗ್‌ನಲ್ಲಿ ಪ್ರೇಕ್ಷಕರ ಹಾಜರಾತಿ ನೀರಸವಾಗಿದೆ.
ಇತರ ಗ್ಯಾಲರಿಗಳು