ಕನ್ನಡ ಸುದ್ದಿ  /  Photo Gallery  /  Pune Accident: Major Accident On Navle Bridge In Pune Many Vehicles Crashed Check Photos Here

Pune Accident: ಪುಣೆಯಲ್ಲಿ ಭೀಕರ ಅಪಘಾತ, 30 ರಿಂದ 40 ವಾಹನಗಳು ಪರಸ್ಪರ ಡಿಕ್ಕಿ, ಘಟನಾ ಸ್ಥಳದ ಭೀಕರ ಫೋಟೋಸ್ ನೋಡಿ‌

Pune Accident: ಪುಣೆಯ ನವ್ಲೆ ಸೇತುವೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಚಿತ್ರ ಅಪಘಾತದಲ್ಲಿ 48 ವಾಹನಗಳು ಜಖಂಗೊಂಡಿವೆ. ಈ ಅಪಘಾತದ ನಂತರ ಅಗ್ನಿಶಾಮಕ ದಳದ 2 ರಕ್ಷಣಾ ವಾಹನಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಅಪಘಾತದಿಂದಾಗಿ ಸತಾರಾದಿಂದ ಪುಣೆಗೆ ಸಂಚಾರ ಸ್ಥಗಿತಗೊಂಡಿತ್ತು. 

ಸತಾರಾದಿಂದ ಪುಣೆಗೆ ಹೋಗುವ ದಾರಿಯಲ್ಲಿ ಆಂಧ್ರಪ್ರದೇಶದಿಂದ ಬರುತ್ತಿದ್ದ ಟ್ಯಾಂಕರ್ ಎದುರಿಗೆ ಬಂದ 30ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಭಾನುವಾರ ರಾತ್ರಿ 8.30ರ ಸುಮಾರಿಗೆ ಈ ಅಪಘಾತ ನಡೆದಿದೆ. ಹಲವು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದರಿಂದ ಘಟನಾ ಸ್ಥಳದಲ್ಲಿ ಎಲ್ಲೆಂದರಲ್ಲಿ ಇಂಧನ ಸೋರಿರುವ ಕಾರಣ, ರಸ್ತೆಯಲ್ಲಿ ನಡೆದಾಡುವುದು ಕೂಡ ದುಸ್ತರವಾಗಿದೆ.
icon

(1 / 6)

ಅಪಘಾತದಲ್ಲಿ 48 ಕಾರುಗಳು ಜಖಂಗೊಂಡಿವೆ ಎಂದು ಪಿಎಂಆರ್‌ಡಿಎ ಅಗ್ನಿಶಾಮಕ ದಳ ಮಾಹಿತಿ ನೀಡಿದೆ.
icon

(2 / 6)

ಪಿಎಂಆರ್‌ಡಿಎ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸರ್ಕಾರಿ ಆ್ಯಂಬುಲೆನ್ಸ್ 108ರಲ್ಲಿ ಕನಿಷ್ಠ 10 ಮಂದಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಕೆಲ ಗಾಯಾಳುಗಳು ನವ್ಲೆ ಸೇತುವೆ ಬಳಿಯ ಮೊರಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
icon

(3 / 6)

ಅಪಘಾತದ ಮಾಹಿತಿ ತಿಳಿದ ತಕ್ಷಣ ಸಿಂದಗಿ ರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಕೆಲ ನಾಗರಿಕರ ನೆರವಿನೊಂದಿಗೆ ಸ್ಥಳಕ್ಕೆ ಧಾವಿಸಿ ಅಪಘಾತದ ವಾಹನಗಳನ್ನು ತೆಗೆದು ಸುಗಮ ಸಂಚಾರಕ್ಕೆ ಪ್ರಯತ್ನಿಸಿದ್ದರು.
icon

(4 / 6)

ಕಾರಿನಲ್ಲಿ ಸಿಲುಕಿದ್ದ ಚಾಲಕ ಸೇರಿ ಪ್ರಯಾಣಿಕರನ್ನು ಪೊಲೀಸರು ಹೊರಗೆಳೆದರು. ಅಪಘಾತದ ನಂತರ ಹೊರವರ್ತುಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಅಪಘಾತದಲ್ಲಿ 48 ವಾಹನಗಳು ಜಖಂಗೊಂಡಿದ್ದು, 30ರಿಂದ 35 ಮಂದಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.
icon

(5 / 6)

ನವ್ಲೆ ಸೇತುವೆ ಬಳಿ ಕಡಿದಾದ ಇಳಿಜಾರಿನಲ್ಲಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಹಿಂಬದಿಯಿಂದ ಹಲವು ವಾಹನಗಳಿಗೆ ಗುದ್ದಿದೆ. ಹಿಂದಿನಿಂದ ಟ್ಯಾಂಕರ್ ಡಿಕ್ಕಿ ಹೊಡೆದಿದ್ದರಿಂದ ವಾಹನಗಳು ಪರಸ್ಪರ ಡಿಕ್ಕಿ ಹೊಡೆದವು.
icon

(6 / 6)

ಇತರ ಗ್ಯಾಲರಿಗಳು