ಧೃತಿ ಪುನೀತ್‌ ರಾಜ್‌ಕುಮಾರ್‌ ವಿಷಯದಲ್ಲಿ ಮನೆಯವರು ತೆಗೆದುಕೊಂಡ ಮಹತ್ವದ ನಿರ್ಧಾರ ಎಲ್ಲಾ ಹೆತ್ತವರಿಗೂ ಪಾಠ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧೃತಿ ಪುನೀತ್‌ ರಾಜ್‌ಕುಮಾರ್‌ ವಿಷಯದಲ್ಲಿ ಮನೆಯವರು ತೆಗೆದುಕೊಂಡ ಮಹತ್ವದ ನಿರ್ಧಾರ ಎಲ್ಲಾ ಹೆತ್ತವರಿಗೂ ಪಾಠ

ಧೃತಿ ಪುನೀತ್‌ ರಾಜ್‌ಕುಮಾರ್‌ ವಿಷಯದಲ್ಲಿ ಮನೆಯವರು ತೆಗೆದುಕೊಂಡ ಮಹತ್ವದ ನಿರ್ಧಾರ ಎಲ್ಲಾ ಹೆತ್ತವರಿಗೂ ಪಾಠ

ದಿವಂಗತ ಪುನೀತ್‌ ರಾಜ್‌ಕುಮಾರ್‌ ಬದುಕಿನ ಆದರ್ಶಗಳಿಂದ ನಾವೆಲ್ಲರೂ ಕಲಿಯಬೇಕಾದ ಸಾಕಷ್ಟು ಸಂಗತಿಗಳು ಇವೆ. ಪುನೀತ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮಗಳು ಧೃತಿ ಪುನೀತ್‌ ರಾಜ್‌ಕುಮಾರ್‌ ಇತ್ತೀಚೆಗೆ ತನ್ನ ಕನಸೊಂದನ್ನು ಈಡೇರಿಸಿಕೊಂಡಿದ್ದಾರೆ. ಈಕೆಯ ಕುರಿತು ಹೆತ್ತವರ ನಿರ್ಧಾರ ಎಲ್ಲಾ ಹೆತ್ತವರಿಗೂ ಒಂದು ಪಾಠ ಎಂದರೆ ತಪ್ಪಾಗದು.

ಜೂನ್‌ ತಿಂಗಳು ಹತ್ತಿರದಲ್ಲಿದೆ. ಶಾಲಾ ಕಾಲೇಜುಗಳು ಆರಂಭವಾಗುವ ಸಮಯವಿದು. ಈ ಸಮಯದಲ್ಲಿ ಮಕ್ಕಳಿಗೆ ಅದು ಓದು, ಇದು ಓದು ಎಂದು ಹೆತ್ತವರು ಕನಸು ಬಿತ್ತುತ್ತಿದ್ದಾರೆ. ನನ್ನ ಮಗ ಡಾಕ್ಟರ್‌ ಆಗಬೇಕು, ಎಂಜಿನಿಯರ್‌ ಆಗಬೇಕೆಂದು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರುತ್ತಿರುತ್ತಾರೆ.
icon

(1 / 10)

(Twitter/x @PowerStarPunith)

ಆದರೆ, ಮಕ್ಕಳ ಮನಸ್ಸಲ್ಲಿ  ಬೇರೆ ಏನೋ ಇರುತ್ತದೆ. ಒಳ್ಳೆಯ ಕ್ರಿಕೆಟರ್‌ ಆಗಬೇಕು, ಚಿತ್ರಕಾರ ಆಗಬೇಕು, ಡ್ಯಾನ್ಸರ್‌ ಆಗಬೇಕು, ಸಮಾಜ ಸೇವಕನಾಗಬೇಕು ಎಂದೆಲ್ಲ ಕನಸುಗಳು ಇರುತ್ತವೆ.
icon

(2 / 10)

(social media)

ಕೆಲವು ಮಕ್ಕಳು ತಮ್ಮ ವೃತ್ತಿ ಮತ್ತು ಪ್ರವೃತ್ತಿಯನ್ನು ಬೇರೆಬೇರೆಯಾಗಿಸುತ್ತಾರೆ. ಇನ್ನು ಕೆಲವರು ವೃತ್ತಿಗಾಗಿ ತಮ್ಮ ಕನಸುಗಳನ್ನು, ಹವ್ಯಾಸಗಳನ್ನು ಮರೆಯುತ್ತಾರೆ. ಆರಂಭದಲ್ಲಿ ಓದುವ ಯಂತ್ರವಾಗುತ್ತಾರೆ. ಬಳಿಕ ಹಣ ತರುವ ಯಂತ್ರವಾಗುತ್ತಾರೆ.
icon

(3 / 10)

ಮನೆಯಲ್ಲಿ ಅಪ್ಪ ಅಮ್ಮ ಬೋಧಕರಾಗಿದ್ದರೆ ಮಕ್ಕಳು ಕೂಡ ಟೀಚಿಂಗ್‌ಗೆ ಹೋಗುತ್ತಾರೆ. ಡಾಕ್ಟರ್‌ ಮಕ್ಕಳು ಡಾಕ್ಟರ್‌ ಆಗುತ್ತಾರೆ. ಸಿನಿಮಾ ನಟಿ ನಟರ ಮಕ್ಕಳು ನಟನೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ, ಹೆತ್ತವರ ಗತವೈಭವವನ್ನು ಮಕ್ಕಳು ಮುಂದುವರೆಸುತ್ತಾರೆ.
icon

(4 / 10)

ಆದರೆ, ಕೆಲವರು ಮಾತ್ರ ಮಕ್ಕಳ ಕನಸು ಏನು, ಅವರ ಹವ್ಯಾಸ ಏನು? ಅವರ ಆಸಕ್ತಿಗಳೇನು ಎಂದು ತಿಳಿದು ಅದಕ್ಕೆ ತಕ್ಕಂತೆ ವಿದ್ಯಾಭ್ಯಾಸ ನೀಡುತ್ತಾರೆ.
icon

(5 / 10)

ಮಕ್ಕಳ ಆಸಕ್ತಿ, ಕನಸು, ಹವ್ಯಾಸಕ್ಕೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಹೆತ್ತವರಿಗೆ ದಿವಂಗತ ಪುನೀತ್‌ ರಾಜ್‌ ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಂದ ಕಲಿಯಬೇಕಾದ ವಿಷಯಗಳು ಸಾಕಷ್ಟು ಇವೆ.
icon

(6 / 10)

ಇತ್ತೀಚೆಗಷ್ಟೇ ಧೃತಿ ಪುನೀತ್‌ ರಾಜ್‌ಕುಮಾರ್‌ ತನ್ನ ಪದವಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಆಕೆ ಕಲಿತದ್ದು ನಟನೆ ಕೋರ್ಸ್‌ ಅಲ್ಲ. ಸಿನಿಮಾ ನಿರ್ದೇಶನಕ್ಕೆ ಸಂಬಂಧಪಟ್ಟಂತೆ ಕೋರ್ಸ್‌ ಕೂಡ ಅಲ್ಲ.
icon

(7 / 10)

ಇಲ್ಯುಸ್ಟ್ರೇಟರ್‌ ಆಂಡ್‌ ಡಿಸೈನರ್‌ ವಿಷಯದಲ್ಲಿ  ಧೃತಿ ಪುನೀತ್‌ ರಾಜ್‌ಕುಮಾರ್‌ ಪದವಿ ಪಡೆದಿದ್ದಾರೆ. ಆಕೆಗೆ ಚಿತ್ರಕಲೆ ಇಷ್ಟ. ಅದಕ್ಕೆ ಚಿತ್ರಕಲೆಯಲ್ಲಿ ಪದವಿ ಓದಿದ್ದಾರೆ. ಆಕೆಯ ಹೆತ್ತವರು ಮಗಳ ಕನಸಿಗೆ ನೀರೆರೆದಿದ್ದಾರೆ.
icon

(8 / 10)

ನೀನು ಕೂಡ ಅಪ್ಪನಂತೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡು ಎಂದು ಈಕೆಗೆ ಯಾರೂ ಒತ್ತಡ ಹಾಕಿಲ್ಲ. ಹೀಗಾಗಿ, ತನ್ನ ಪ್ರೀತಿಯ ಹವ್ಯಾಸವನ್ನೇ ಕರಿಯರ್‌ ಆಗಿ ರೂಪಿಸಲು ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಇಲ್ಯುಸ್ಟ್ರೇಟರ್‌ ಆಂಡ್‌ ಡಿಸೈನರ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.
icon

(9 / 10)

ತಮ್ಮ ಮಕ್ಕಳ ಹವ್ಯಾಸ, ಆಸಕ್ತಿ, ಕನಸು, ಸಾಮರ್ಥ್ಯದ ಮೇಲೆ ಗಮನ ಹರಿಸದೆ ಬಲವಂತವಾಗಿ ಆಸಕ್ತಿ ಇಲ್ಲದ ಕೋರ್ಸ್‌ ಕಲಿಯಲು ಪ್ರೇರೇಪಿಸಲು ಬಯಸುವವರಿಗೆ ಇದೊಂದು ಪಾಠ ಅಲ್ಲವೇ?
icon

(10 / 10)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು