ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ಪಂಜಾಬ್ ಕಿಂಗ್ಸ್; ಕಡಿಮೆ ರನ್ ರಕ್ಷಿಸಿಕೊಂಡ ತಂಡಗಳ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ಪಂಜಾಬ್ ಕಿಂಗ್ಸ್; ಕಡಿಮೆ ರನ್ ರಕ್ಷಿಸಿಕೊಂಡ ತಂಡಗಳ ಪಟ್ಟಿ ಇಲ್ಲಿದೆ

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ಪಂಜಾಬ್ ಕಿಂಗ್ಸ್; ಕಡಿಮೆ ರನ್ ರಕ್ಷಿಸಿಕೊಂಡ ತಂಡಗಳ ಪಟ್ಟಿ ಇಲ್ಲಿದೆ

  • ಕೇವಲ 111 ರನ್ ಗಳಿಸಿದ್ದರ ಹೊರತಾಗಿಯೂ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ 16 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದು, ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ 120ಕ್ಕಿಂತ ಕಡಿಮೆ ಸ್ಕೋರ್ ಅನ್ನು ರಕ್ಷಿಸಿಕೊಂಡ ತಂಡವಾಗಿದೆ.

ಪಂಜಾಬ್ ಕಿಂಗ್ಸ್ ಐಪಿಎಲ್​ ಇತಿಹಾಸದಲ್ಲಿ ನೂತನ ಇತಿಹಾಸ ಸೃಷ್ಟಿಸಿದೆ. ಕೆಕೆಆರ್ ವಿರುದ್ಧ 111 ರನ್​ ಡಿಫೆಂಡ್ ಮಾಡಿಕೊಂಡು ಚರಿತ್ರೆ ಸೃಷ್ಟಿಸಿದೆ. ಅತ್ಯಂತ ಕಡಿಮೆ ಸ್ಕೋರನ್ನು ರಕ್ಷಿಸಿಕೊಂಡ ಐಪಿಎಲ್​ನ ಮೊದಲ ತಂಡದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
icon

(1 / 8)

(Surjeet Yadav)

ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ 120 ಕ್ಕಿಂತ ಕಡಿಮೆ ರನ್‌ಗಳನ್ನು ರಕ್ಷಿಸಿಕೊಂಡಿದ್ದು ಇದು 3ನೇ ಬಾರಿಯಾಗಿದೆ. ಐಪಿಎಲ್ 2025ರಲ್ಲಿ ಮೊದಲ ಬಾರಿಗೆ, ಒಂದು ತಂಡವು ಇಷ್ಟು ಕಡಿಮೆ ಸ್ಕೋರ್ ಅನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
icon

(2 / 8)

(AFP)

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 15.3 ಓವರ್​ಗಳಲ್ಲಿ 111ಕ್ಕೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್​ 15.1 ಓವರ್​​ಗಳಲ್ಲಿ 95ಕ್ಕೆ ಆಲೌಟ್ ಆಗಿ 16 ರನ್ನಿಂದ ಶರಣಾಯಿತು. ಕಡಿಮೆ ಮೊತ್ತ ರಕ್ಷಿಸಿಕೊಂಡ ಟಾಪ್​-5 ತಂಡಗಳ ವಿವರ ಇಂತಿದೆ.
icon

(3 / 8)

(REUTERS)

ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತ ಕಾಯ್ದುಕೊಂಡ ದಾಖಲೆ ಜಂಟಿಯಾಗಿ ಹೊಂದಿದೆ. ಆದರೆ, ವಿಕೆಟ್ ಪತನದ ವಿಷಯದಲ್ಲಿ ಆರ್‌ಸಿಬಿ ನಂಬರ್ 1 ಸ್ಥಾನದಲ್ಲಿದೆ. 2013ರಲ್ಲಿ ಬೆಂಗಳೂರಿನಲ್ಲಿ ಸಿಎಸ್‌ಕೆ ವಿರುದ್ಧ 106 ರನ್ ಗಳಿಸಿತ್ತು. ಆದರೆ ಸಿಎಸ್​ಕೆ 82 ರನ್​​ ಗಳಿಸಿ 24 ರನ್​ಗಳಿಂದ ಶರಣಾಗಿತ್ತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಪರಿಣಾಮ ಪಂದ್ಯವನ್ನು 8-8 ಓವರ್​​ಗಳಿಗೆ ಇಳಿಸಲಾಗಿತ್ತು.
icon

(4 / 8)

2015ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 10 ಓವರ್​ಗಳಲ್ಲಿ 106 ರನ್ ಗಳಿಸಿತ್ತು. ಆದರೆ ಆರ್​ಸಿಬಿ 84 ರನ್ ಗಳಿಸಿ 22 ರನ್​ಗಳಿಂದ ಶರಣಾಗಿತ್ತು. ಮಳೆಯ ಕಾರಣ ತಲಾ 10 ಓವರ್​ಗಳಿಗೆ ಕಡಿಮೆ ಮಾಡಲಾಗಿತ್ತು. 2009ರಲ್ಲಿ ಪಂಜಾಬ್ ಕಿಂಗ್ಸ್ 119 ರನ್ ಗಳಿಸಿ ಜಯ ಸಾಧಿಸಿತ್ತು. ಈ ರೀತಿಯಾಗಿ ಐಪಿಎಲ್​ನಲ್ಲಿ 120ಕ್ಕಿಂತ ಕಡಿಮೆ ರನ್ನನ್ನು 3 ಬಾರಿ ರಕ್ಷಿಸಿಕೊಂಡ ಏಕೈಕ ತಂಡವಾಗಿದೆ.
icon

(5 / 8)

ಆದರೆ ಐಪಿಎಲ್‌ನಲ್ಲಿ 20-20 ಓವರ್‌ಗಳ ಪಂದ್ಯದಲ್ಲಿ 111 ರನ್‌ ರಕ್ಷಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ. ಐಪಿಎಲ್ 2025ರಲ್ಲಿ ಮುಲ್ಲನ್‌ಪುರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈ ಸಾಧನೆ ಮಾಡಿದೆ. ಕೆಕೆಆರ್ ಅನ್ನು 95 ರನ್‌ಗಳಿಗೆ ಕಟ್ಟಿಹಾಕಿತು.
icon

(6 / 8)

ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸೇರಿದ್ದು, ಇದು 4ನೇ ಸ್ಥಾನದಲ್ಲಿದೆ. 2009ರಲ್ಲಿ ಪಂಜಾಬ್ ವಿರುದ್ಧ ಸಿಎಸ್​ಕೆ 116 ರನ್‌ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯವು ಡರ್ಬನ್‌ನಲ್ಲಿ ನಡೆದಿತ್ತು. ಇದರಲ್ಲಿ ಕಿಂಗ್ಸ್ XI ಪಂಜಾಬ್ 92 ರನ್‌ಗಳಿಗೆ ಆಲೌಟ್ ಆಗಿತ್ತು.
icon

(7 / 8)

ಸನ್‌ರೈಸರ್ಸ್ ಹೈದರಾಬಾದ್ ಕೂಡ 120ಕ್ಕಿಂತ ಕಡಿಮೆ ರನ್‌ ಉಳಿಸಿಕೊಂಡಿದೆ. ಇದು 2018ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಭವಿಸಿತ್ತು. ಎಸ್​ಆರ್​ಹೆಚ್ 118 ರನ್ ಗಳಿಸಿದರೂ ಗೆದ್ದಿತ್ತು. ಮುಂಬೈ ತನ್ನ ತವರು ನೆಲದಲ್ಲಿ 87 ರನ್‌ಗಳಿಗೆ ಕುಸಿದಿತ್ತು.
icon

(8 / 8)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು