ವಿಶ್ವಕಪ್ ನಂತರ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಮತ್ತು ಹೇಳಲಿರುವ ಆಟಗಾರರು ಇವರೇ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಶ್ವಕಪ್ ನಂತರ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಮತ್ತು ಹೇಳಲಿರುವ ಆಟಗಾರರು ಇವರೇ

ವಿಶ್ವಕಪ್ ನಂತರ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಮತ್ತು ಹೇಳಲಿರುವ ಆಟಗಾರರು ಇವರೇ

  • ODI World Cup 2023 : ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಅಂತಿಮ ಹಂತ ತಲುಪಿದೆ. ಈಗ ನಾಕೌಟ್ ಪಂದ್ಯಗಳು ನಡೆಯಲಿವೆ. ಅನೇಕ ಲೆಜೆಂಡರಿ ಆಟಗಾರರಿಗೆ ಈ ವಿಶ್ವಕಪ್ ಕೊನೆಯದು. ಈ ಪಟ್ಟಿಯಲ್ಲಿ ದೊಡ್ಡ ದೊಡ್ಡ ಹೆಸರುಗಳೇ ಇವೆ ಎಂಬುದು ವಿಶೇಷ.

2023ರ ವಿಶ್ವಕಪ್​​ ಸೆಮಿಫೈನಲ್​ಗೆ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅರ್ಹತೆ ಪಡೆದಿವೆ. ಆದರೆ ಈ ವಿಶ್ವಕಪ್ ನಂತರ ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್ ಸೇರಿದಂತೆ ಹಲವರಿಗೆ ಈ ವಿಶ್ವಕಪ್ ಕೊನೆಯದ್ದು.
icon

(1 / 7)

2023ರ ವಿಶ್ವಕಪ್​​ ಸೆಮಿಫೈನಲ್​ಗೆ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅರ್ಹತೆ ಪಡೆದಿವೆ. ಆದರೆ ಈ ವಿಶ್ವಕಪ್ ನಂತರ ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್ ಸೇರಿದಂತೆ ಹಲವರಿಗೆ ಈ ವಿಶ್ವಕಪ್ ಕೊನೆಯದ್ದು.

ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಏಕದಿನ ಕ್ರಿಕೆಟ್​ ನಿವೃತ್ತಿ ಘೋಷಿಸಿದ್ದಾರೆ. 24 ವರ್ಷದ ನವೀನ್, ವಿಶ್ವಕಪ್​​ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಆಡುವುದಿಲ್ಲ ಎಂದು ವಿದಾಯ ಹೇಳಿದ್ದರು. ಇನ್ಮುಂದೆ ಅವರು ಏಕದಿನ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. 15 ಏಕದಿನ ಪಂದ್ಯಗಳನ್ನಾಡಿದ್ದು 22 ವಿಕೆಟ್ ಪಡೆದಿದ್ದಾರೆ.
icon

(2 / 7)

ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಏಕದಿನ ಕ್ರಿಕೆಟ್​ ನಿವೃತ್ತಿ ಘೋಷಿಸಿದ್ದಾರೆ. 24 ವರ್ಷದ ನವೀನ್, ವಿಶ್ವಕಪ್​​ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಆಡುವುದಿಲ್ಲ ಎಂದು ವಿದಾಯ ಹೇಳಿದ್ದರು. ಇನ್ಮುಂದೆ ಅವರು ಏಕದಿನ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. 15 ಏಕದಿನ ಪಂದ್ಯಗಳನ್ನಾಡಿದ್ದು 22 ವಿಕೆಟ್ ಪಡೆದಿದ್ದಾರೆ.(PTI)

ಆಸ್ಟ್ರೇಲಿಯಾ ತಂಡದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಈ ವಿಶ್ವಕಪ್‌ನಲ್ಲಿ 2 ಶತಕ ಸಹಿತ 499 ರನ್ ಸಿಡಿಸಿದ್ದಾರೆ. ಈ ವಿಶ್ವಕಪ್ ಬಳಿಕ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ. 37 ವರ್ಷದ ವಾರ್ನರ್ ಈವರೆಗೂ 159 ಏಕದಿನ ಪಂದ್ಯಗಳನ್ನಾಡಿದ್ದು, 6896ರನ್ ಕಲೆ ಹಾಕಿದ್ದಾರೆ. 22 ಶತಕ, 33 ಅರ್ಧಶತಕಗಳನ್ನು ಬಾರಿಸಿದ್ದಾರೆ.
icon

(3 / 7)

ಆಸ್ಟ್ರೇಲಿಯಾ ತಂಡದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಈ ವಿಶ್ವಕಪ್‌ನಲ್ಲಿ 2 ಶತಕ ಸಹಿತ 499 ರನ್ ಸಿಡಿಸಿದ್ದಾರೆ. ಈ ವಿಶ್ವಕಪ್ ಬಳಿಕ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ. 37 ವರ್ಷದ ವಾರ್ನರ್ ಈವರೆಗೂ 159 ಏಕದಿನ ಪಂದ್ಯಗಳನ್ನಾಡಿದ್ದು, 6896ರನ್ ಕಲೆ ಹಾಕಿದ್ದಾರೆ. 22 ಶತಕ, 33 ಅರ್ಧಶತಕಗಳನ್ನು ಬಾರಿಸಿದ್ದಾರೆ.(PTI)

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ತಮ್ಮ ಕೊನೆಯ ವಿಶ್ವಕಪ್ ಆಡುತ್ತಿದ್ದಾರೆ. ಈ ವಿಶ್ವಕಪ್‌ಗೂ ಮುನ್ನ ಅವರು ನಿವೃತ್ತಿ ಘೋಷಿಸಿದ್ದಾರೆ. ಇದಾದ ನಂತರ ಕ್ವಿಂಟನ್ ಡಿ ಕಾಕ್ ಏಕದಿನ ಮಾದರಿಯಲ್ಲಿ ಆಡುವುದಿಲ್ಲ. ಆದಾಗ್ಯೂ, ಈ ವಿಶ್ವಕಪ್‌ನಲ್ಲಿ ಕ್ವಿಂಟನ್ ಡಿ ಕಾಕ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಡಿ ಕಾಕ್ ಈ ವಿಶ್ವಕಪ್‌ನಲ್ಲಿ ಈವರೆಗೂ 4 ಶತಕಗಳನ್ನು ಬಾರಿಸಿದ್ದಾರೆ. 30 ವರ್ಷದ ಡಿಕಾಕ್, 154 ಏಕದಿನ ಪಂದ್ಯಗಳನ್ನಾಡಿದ್ದು 21 ಶತಕ ಸಹಿತ 6767 ರನ್ ಗಳಿಸಿದ್ದಾರೆ.
icon

(4 / 7)

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ತಮ್ಮ ಕೊನೆಯ ವಿಶ್ವಕಪ್ ಆಡುತ್ತಿದ್ದಾರೆ. ಈ ವಿಶ್ವಕಪ್‌ಗೂ ಮುನ್ನ ಅವರು ನಿವೃತ್ತಿ ಘೋಷಿಸಿದ್ದಾರೆ. ಇದಾದ ನಂತರ ಕ್ವಿಂಟನ್ ಡಿ ಕಾಕ್ ಏಕದಿನ ಮಾದರಿಯಲ್ಲಿ ಆಡುವುದಿಲ್ಲ. ಆದಾಗ್ಯೂ, ಈ ವಿಶ್ವಕಪ್‌ನಲ್ಲಿ ಕ್ವಿಂಟನ್ ಡಿ ಕಾಕ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಡಿ ಕಾಕ್ ಈ ವಿಶ್ವಕಪ್‌ನಲ್ಲಿ ಈವರೆಗೂ 4 ಶತಕಗಳನ್ನು ಬಾರಿಸಿದ್ದಾರೆ. 30 ವರ್ಷದ ಡಿಕಾಕ್, 154 ಏಕದಿನ ಪಂದ್ಯಗಳನ್ನಾಡಿದ್ದು 21 ಶತಕ ಸಹಿತ 6767 ರನ್ ಗಳಿಸಿದ್ದಾರೆ.(PTI)

ಈ ವಿಶ್ವಕಪ್ ಇಂಗ್ಲೆಂಡ್‌ಗೆ ತುಂಬಾ ನಿರಾಶಾದಾಯಕವಾಗಿದೆ. 36 ವರ್ಷದ ಸ್ಟಾರ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಈ ಪಂದ್ಯಾವಳಿಯ ನಂತರ, ಮೊಯಿನ್ ಅಲಿ ಏಕದಿನ ಸ್ವರೂಪಕ್ಕೆ ವಿದಾಯ ಹೇಳಬಹುದು. 138 ಏಕದಿನ ಪಂದ್ಯಗಳನ್ನಾಡಿದ್ದು 3 ಶತಕ ಸಹಿತ 2355 ಸಿಡಿಸಿದ್ದಾರೆ. ಬೌಲಿಂಗ್​​ನಲ್ಲಿ 111 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
icon

(5 / 7)

ಈ ವಿಶ್ವಕಪ್ ಇಂಗ್ಲೆಂಡ್‌ಗೆ ತುಂಬಾ ನಿರಾಶಾದಾಯಕವಾಗಿದೆ. 36 ವರ್ಷದ ಸ್ಟಾರ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಈ ಪಂದ್ಯಾವಳಿಯ ನಂತರ, ಮೊಯಿನ್ ಅಲಿ ಏಕದಿನ ಸ್ವರೂಪಕ್ಕೆ ವಿದಾಯ ಹೇಳಬಹುದು. 138 ಏಕದಿನ ಪಂದ್ಯಗಳನ್ನಾಡಿದ್ದು 3 ಶತಕ ಸಹಿತ 2355 ಸಿಡಿಸಿದ್ದಾರೆ. ಬೌಲಿಂಗ್​​ನಲ್ಲಿ 111 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.(Reuters)

ಈ ಬಾರಿಯ ವಿಶ್ವಕಪ್‌ನಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅದ್ಭುತ ಪ್ರದರ್ಶನ ನೀಡಿದರು. ಬೆನ್ ಸ್ಟೋಕ್ಸ್ ಏಕದಿನ ಸ್ವರೂಪಕ್ಕೆ ವಿದಾಯ ಹೇಳಿದ್ದರು. ಬಳಿಕ ವಿಶ್ವಕಪ್‌ನಲ್ಲಿ ಆಡುವ ಸಲುವಾಗಿ ನಿವೃತ್ತಿ ವಾಪಸ್ ಪಡೆದರು. ಆದರೆ ಈ ವಿಶ್ವಕಪ್ ನಂತರ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್ ಆಡುವುದಿಲ್ಲ. 114 ಏಕದಿನ ಪಂದ್ಯಗಳನ್ನಾಡಿರುವ ಸ್ಟೋಕ್ಸ್, 5 ಶತಕ ಸಹಿತ 3463 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 74 ವಿಕೆಟ್ ಪಡೆದಿದ್ದಾರೆ.
icon

(6 / 7)

ಈ ಬಾರಿಯ ವಿಶ್ವಕಪ್‌ನಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅದ್ಭುತ ಪ್ರದರ್ಶನ ನೀಡಿದರು. ಬೆನ್ ಸ್ಟೋಕ್ಸ್ ಏಕದಿನ ಸ್ವರೂಪಕ್ಕೆ ವಿದಾಯ ಹೇಳಿದ್ದರು. ಬಳಿಕ ವಿಶ್ವಕಪ್‌ನಲ್ಲಿ ಆಡುವ ಸಲುವಾಗಿ ನಿವೃತ್ತಿ ವಾಪಸ್ ಪಡೆದರು. ಆದರೆ ಈ ವಿಶ್ವಕಪ್ ನಂತರ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್ ಆಡುವುದಿಲ್ಲ. 114 ಏಕದಿನ ಪಂದ್ಯಗಳನ್ನಾಡಿರುವ ಸ್ಟೋಕ್ಸ್, 5 ಶತಕ ಸಹಿತ 3463 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 74 ವಿಕೆಟ್ ಪಡೆದಿದ್ದಾರೆ.(AFP)

ಇಂಗ್ಲೆಂಡ್ ತಂಡದ ವೇಗದ ಆಲ್​ರೌಂಡರ್​ ಡೇವಿಡ್ ವಿಲ್ಲಿ ಪಾಕಿಸ್ತಾನ ಎದುರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಏಕದಿನ ವಿಶ್ವಕಪ್​ ಟೂರ್ನಿಯ ಮಧ್ಯ ಭಾಗದಲ್ಲೇ ವಿಲ್ಲಿ, ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. 73 ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. ತಮ್ಮ ಕೊನೆಯ ಪಂದ್ಯದಲ್ಲಿ ವಿಲ್ಲಿ 15 ರನ್ ಸಿಡಿಸಿದರು. ಬೌಲಿಂಗ್​​ನಲ್ಲಿ 3 ವಿಕೆಟ್ ಪಡೆದರು. ಅಲ್ಲದೆ, ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
icon

(7 / 7)

ಇಂಗ್ಲೆಂಡ್ ತಂಡದ ವೇಗದ ಆಲ್​ರೌಂಡರ್​ ಡೇವಿಡ್ ವಿಲ್ಲಿ ಪಾಕಿಸ್ತಾನ ಎದುರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಏಕದಿನ ವಿಶ್ವಕಪ್​ ಟೂರ್ನಿಯ ಮಧ್ಯ ಭಾಗದಲ್ಲೇ ವಿಲ್ಲಿ, ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. 73 ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. ತಮ್ಮ ಕೊನೆಯ ಪಂದ್ಯದಲ್ಲಿ ವಿಲ್ಲಿ 15 ರನ್ ಸಿಡಿಸಿದರು. ಬೌಲಿಂಗ್​​ನಲ್ಲಿ 3 ವಿಕೆಟ್ ಪಡೆದರು. ಅಲ್ಲದೆ, ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ಇತರ ಗ್ಯಾಲರಿಗಳು