Rayara Aradhana: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಚಾಲನೆ, ಕಳೆಗಟ್ಟಿದೆ ತುಂಗಭದ್ರಾ ತೀರದ ಧಾರ್ಮಿಕ ತಾಣ photos
- Mantralaya Aradhana ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಕಳೆಗಟ್ಟಿದೆ. ಮೂರು ದಿನದ ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆ ಸೇರಿ ಒಂದು ವಾರ ನಾನಾ ಕಾರ್ಯಕ್ರಮಗಳನ್ನು ಸಹಸ್ರಾರು ಭಕ್ತರನ್ನು ಆಕರ್ಷಿಸಲಿದೆ. ಈ ಕುರಿತ ಚಿತ್ರನೋಟ ಇಲ್ಲಿದೆ.
- Mantralaya Aradhana ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಕಳೆಗಟ್ಟಿದೆ. ಮೂರು ದಿನದ ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆ ಸೇರಿ ಒಂದು ವಾರ ನಾನಾ ಕಾರ್ಯಕ್ರಮಗಳನ್ನು ಸಹಸ್ರಾರು ಭಕ್ತರನ್ನು ಆಕರ್ಷಿಸಲಿದೆ. ಈ ಕುರಿತ ಚಿತ್ರನೋಟ ಇಲ್ಲಿದೆ.
(1 / 9)
ಮಂತ್ರಾಲಯದಲ್ಲಿ ರಾಯರ ಆರಾಧನೆಗೆ ಇನ್ನಿಲ್ಲ ಮಹತ್ವ. ಇದಕ್ಕಾಗಿ ಇಡೀ ರಾಯರ ಮಠ ಕಳೆಗಟ್ಟಿರುತ್ತದೆ. ಭಕ್ತರ ಉತ್ಸಾಹದ ನಡುವೆ ಶ್ರೀರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವ. ರಾಯರ ಆರಾಧನೆ-2024ಕ್ಕೆ ಚಾಲನೆಯನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ನೀಡಿದರು,
(2 / 9)
ಆರಾಧನಾ ಮಹೋತ್ಸವ ಅಂಗವಾಗಿ ಮಂತ್ರಾಲಯ ಮಠದ ಆವರಣದಲ್ಲಿ ಒಂಟೆಗಳಿಗೆ ವಿಶೇಷ ಪೂಜೆಯನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ಸಲ್ಲಿಸಿದರು.
(3 / 9)
ರಾಘವೇಂದ್ರ ಸ್ವಾಮಿಗಳ ಆರಾಧನೆ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಮೆರವಣಿಗೆಗಳಲ್ಲಿ ಭಾಗಿಯಾಗುವ ಅಶ್ವಕ್ಕೂ ವಿಶೇಷ ಪೂಜೆಯನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ಸಲ್ಲಿಸಿದರು.
(4 / 9)
ಗುರುರಾಘವೇಂದ್ರ ಸ್ವಾಮಿಯವರ 353ನೇ ಆರಾಧನ ಮಹೋತ್ಸವದ ಪ್ರಯುಕ್ತ ಟಿಟಿಡಿ ಪರವಾಗಿ ಜೆ.ಶ್ಯಾಮಲರಾವ್ ದಂಪತಿಗಳು ಶೇಷವಸ್ತ್ರವನ್ನು ಸಲ್ಲಿಸಿದರು. ಇದನ್ನು ಶ್ರೀ ಸುಬುದೇಂದ್ರತೀರ್ಥ ಸ್ವಾಮಿಗಳು ಸ್ವೀಕರಿಸಿದರು.
(6 / 9)
ಮುಂದಿನ ಮೂರು ದಿನ ಅಂದರೆ ಆಗಸ್ಟ್: 20ರ ಮಂಗಳವಾರದಂದು ಶ್ರೀರಾಯರ ಪೂರ್ವಾರಾಧನಾ ಮಹೋತ್ಸವ, ಆಗಸ್ಟ್ 21ರ ಬುಧವಾರ ಶ್ರೀರಾಯರ ಮುಖ್ಯ ಮಧ್ಯಾರಾಧಾನ ಮಹೋತ್ಸವ ಹಾಗೂ ಆಗಸ್ಟ್ 22ರ ಗುರುವಾರದಂದು ಶ್ರೀರಾಯರ ಶ್ರೀರಾಯರ ಉತ್ತರಾರಾಧನಾ ಮಹೋತ್ಸವ ಜರುಗಲಿವೆ.
(7 / 9)
ಮೂರು ದಿನಗಳೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿದ್ದು. ಗುರುವಾರದಂದು ಉತ್ತರಾರಾಧನೆ ದಿನ ಮಠದ ರಥಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ. ಮಠದಲ್ಲಿ ಭಾನುವಾರವೇ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು. ಸೋಮವಾರವೂ ಪೂಜೆಗಳು ನೆರವೇರಿದವು.
(8 / 9)
ನಾನಾ ಭಾಗಗಳಿಂದ ಆಗಮಿಸಿರುವ ಭಕ್ತರು., ಗಣ್ಯರು ರಾಯರ ಬೃಂದಾವನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಆಶಿರ್ವಾದವನ್ನು ಪಡೆದುಕೊಂಡರು,
ಇತರ ಗ್ಯಾಲರಿಗಳು