ಮಳೆ ನಂತರ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲೀಗ ಹಸಿರು ವಾತಾವರಣ; ಇದು ವಾರಾಂತ್ಯ ಭೇಟಿಗೆ ಬೆಸ್ಟ್‌ ತಾಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಳೆ ನಂತರ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲೀಗ ಹಸಿರು ವಾತಾವರಣ; ಇದು ವಾರಾಂತ್ಯ ಭೇಟಿಗೆ ಬೆಸ್ಟ್‌ ತಾಣ

ಮಳೆ ನಂತರ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲೀಗ ಹಸಿರು ವಾತಾವರಣ; ಇದು ವಾರಾಂತ್ಯ ಭೇಟಿಗೆ ಬೆಸ್ಟ್‌ ತಾಣ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಮತ್ತಿಗೋಡು ಆನೆ ಶಿಬಿರ ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ. ದಸರಾದಲ್ಲಿ ಭಾಗಿಯಾಗುವ ಅನೇಕ ಆನೆಗಳು ಇಲ್ಲಿವೆ.ಚಿತ್ರಗಳು: ರವಿಕೀರ್ತಿಗೌಡ, ಮೈಸೂರು

ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಹಂಚಿ ಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
icon

(1 / 6)

(Ravikeerthi gowda)

ಹಲವಾರು ವರ್ಷಗಳಿಂದ ಇಲ್ಲಿ ಆನೆ ಶಿಬಿರ ಇದ್ದರೂ ಪ್ರವಾಸಿಗರ ಭೇಟಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಕರ್ನಾಟಕ ಅರಣ್ಯ ಇಲಾಖೆ ಈಗ ಪ್ರವಾಸಿ ತಾಣದ ರೂಪ ನೀಡಿದೆ.
icon

(2 / 6)

ದಸರಾ ಮೆರವಣಿಗೆಯಲ್ಲಿ ಭಾಗಿಯಾಗುವ ಅಭಿಮನ್ಯು ಸಹಿತ 17 ಆನೆಗಳು ,ಮತ್ತಿಗೋಡು ಆನೆ ಶಿಬಿರದಲ್ಲಿವೆ.
icon

(3 / 6)

ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಕೊಡಗಿನ ವೀರಾಜಪೇಟೆಗೆ ಹೋಗುವ ಮಾರ್ಗದಲ್ಲಿ ತಿತಿಮತಿ ಸಮೀಪದಲ್ಲಿದೆ ಈ ಆನೆ ಶಿಬಿರ.
icon

(4 / 6)

ಆನೆಗಳಿಗೆ ಇಲ್ಲಿ ಅರಣ್ಯ ಇಲಾಖೆಯಿಂದ ನಿತ್ಯ ಆರೈಕೆ ಸೇರಿ ನಾನಾ ಚಟುವಟಿಕೆ ಇರಲಿವೆ. ಇದನ್ನು ಹತ್ತಿರದಿಂದಲೇ ವೀಕ್ಷಿಸಬಹುದು.ಮಕ್ಕಳಿಗೂ ಇಲ್ಲಿನ ವಾತಾವರಣ ಇಷ್ಟವಾಗಲಿದೆ.
icon

(5 / 6)

ಮತ್ತಿಗೋಡು ಆನೆ ಶಿಬಿರದಲ್ಲಿ ಅತ್ಯಂತ ಕಿರಿಯದಾದ ಭುವನೇಶ್ವರಿ ಆನೆ ಎಲ್ಲರನ್ನು ಆಕರ್ಷಿಸುತ್ತಿದೆ.
icon

(6 / 6)

ಮತ್ತಿಗೋಡು ಆನೆ ಶಿಬಿರದಲ್ಲಿ ಅತ್ಯಂತ ಕಿರಿಯದಾದ ಭುವನೇಶ್ವರಿ ಆನೆ ಎಲ್ಲರನ್ನು ಆಕರ್ಷಿಸುತ್ತಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು