ರಾಜ್‌ಕೋಟ್ ಅಗ್ನಿದುರಂತ; ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿಸುರಕ್ಷೆ ಕೊರತೆ, ಮಾಲೀಕ, ಮ್ಯಾನೇಜರ್ ಬಂಧನ
ರಾಜ್‌ಕೋಟ್ ಅಗ್ನಿದುರಂತ; ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿಸುರಕ್ಷೆ ಕೊರತೆ ಇತ್ತು. ಇದರಿಂದಾಗಿ ದುರಂತ ಸಂಭವಿಸಿದ್ದು, ಗೇಮಿಂಗ್ ಝೋನ್ ಮಾಲೀಕ, ಮ್ಯಾನೇಜರ್ ಬಂಧನವಾಗಿದೆ. ದುರಂತದಲ್ಲಿ 27 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಭಾನುವಾರದ ಸಚಿತ್ರ ವರದಿ ಇಲ್ಲಿದೆ.
(1 / 5)
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ ಟಿಆರ್‌ಪಿ ಗೇಮಿಂಗ್ ಝೋನ್ ಸ್ಥಳದಲ್ಲಿ ಅಧಿಕಾರಿಗಳು ಭಾನುವಾರ ಪರಿಶೀಲನೆ ನಡೆಸಿದರು. ದುರಂತದಲ್ಲಿ ನಾಲ್ಕು ಮಕ್ಕಳು ಸೇರಿ 27 ಜನ ಮೃತಪಟ್ಟರು.
(AFP)(2 / 5)
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಧಿಕಾರಿಗಳ ಜತೆಗೆ ಭಾನುವಾರ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
(AFP)(3 / 5)
ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಶನಿವಾರದಂದು ಭಾರೀ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 27ಕ್ಕೇರಿದೆ. ಈ ಸಂಸ್ಥೆ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅಗತ್ಯ ಅಗ್ನಿ ಸುರಕ್ಷತೆ ಕ್ಲಿಯರೆನ್ಸ್ ಪಡೆದಿಲ್ಲ. ಹೀಗಾಗಿ, ಗೇಮಿಂಗ್ ಝೋನ್‌ನ ಮಾಲೀಕ ಮತ್ತು ವ್ಯವಸ್ಥಾಪಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(AFP)(4 / 5)
ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್ ಬೆಂಕಿ ದುರಂತದ ಬಳಿಕ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭಾನುವಾರ ನಡೆಯಿತು.
(AFP)ಇತರ ಗ್ಯಾಲರಿಗಳು