Ramachari Serial: ವೈಶಾಖಾ ಕಾಲಿಗೆ ಪೆಟ್ಟು ಕೊಟ್ಟ ಚಾರು; ನೋವಾದರೂ ನಾಟಕ ಮುಂದುವರಿಸಿದ ಚತುರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ವೈಶಾಖಾ ಕಾಲಿಗೆ ಪೆಟ್ಟು ಕೊಟ್ಟ ಚಾರು; ನೋವಾದರೂ ನಾಟಕ ಮುಂದುವರಿಸಿದ ಚತುರೆ

Ramachari Serial: ವೈಶಾಖಾ ಕಾಲಿಗೆ ಪೆಟ್ಟು ಕೊಟ್ಟ ಚಾರು; ನೋವಾದರೂ ನಾಟಕ ಮುಂದುವರಿಸಿದ ಚತುರೆ

  • ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ತುಂಬಾ ನೋವು ಅನುಭವಿಸುತ್ತಿದ್ದಾಳೆ. ಚಾರು ಅವಳ ನಾಟಕವನ್ನು ಬಯಲು ಮಾಡುವ ಪ್ರಯತ್ನದಲ್ಲಿದ್ದಾಳೆ.

ಚಾರು ಮಾಡಿದ ಉಪಾಯದಿಂದ ವೈಶಾಖಾ ಪ್ರತಿನಿತ್ಯ ತೊಂದರೆ ಅನುಭವಿಸುವ ಹಾಗಾಗಿದೆ. ವೈಶಾಖಾ ನೋವು ಅನುಭವಿಸುತ್ತಾ ಇದ್ದಾಳೆ. 
icon

(1 / 8)

(Colors Kannada)

ಮಂತ್ರವಾದಿ ಬಂದು ವೈಶಾಖಾಳ ಕಾಲಿಗೆ ಸ್ವಾಧೀನವೇ ಇಲ್ಲ ಎಂದು ಹೇಳಿ ಹೋದ ಕಾರಣ ಅವಳನ್ನು ಪರೀಕ್ಷೆ ಮಾಡಲು ಚಾರು ಕಾಲಿಗೆ ಕೋಲಿನಿಂದ ಹೋಡೆಯುತ್ತಾಳೆ. 
icon

(2 / 8)

ಚಾರು ಎಲ್ಲ ಸತ್ಯವನ್ನು ತಾನು ತಿಳಿದುಕೊಂಡಿದ್ದರೂ ಬೇಕಂತಲೇ ವೈಶಾಖಾಳ ನಾಟಕ ಬಯಲು ಮಾಡಬೇಕು ಎಂದು ಕೋಲಿನಿಂದ ಜೋರಾಗಿ ಹೊಡೆಯುತ್ತಾಳೆ. 
icon

(3 / 8)

ಚಾರು ಎಷ್ಟೇ ಬಲವಾಗಿ ಹೊಡೆದರೂ ವೈಶಾಖಾ ಮಾತ್ರ ತುಟಿಕ್ ಪಿಟಿಕ್ ಎನ್ನುವುದಿಲ್ಲ. ನೋವು ಸಹಿಸಿಕೊಂಡು ಸುಮ್ಮನಾಗುತ್ತಾಳೆ. 
icon

(4 / 8)

ಆ ನಂತರ ಮನೆಯವರೆಲ್ಲ ಅಲ್ಲಿಂದ ಹೋದ ಮೇಲೆ ವೈಶಾಖಾ ಅಳುತ್ತಾಳೆ. “ಎಷ್ಟೊಂದು ಚೋರಾಗಿ ಹೊಡೆದ್ಲು ಚಾರು” ಎಂದು ಮನಸಿನಲ್ಲೇ ಬೈದುಕೊಳ್ಳುತ್ತಾಳೆ. 
icon

(5 / 8)

ನಂತರ ವೈಶಾಖಾ ವೀಲ್‌ಚೇರ್‌ನಲ್ಲಿ ಮನೆಯ ಹೊರಗಡೆ ಹೋಗುತ್ತಾಳೆ, ಆಗ ಚಾರು ಹಿಂದಿನಿಂದ ಬಂದು ವೀಲ್‌ಚೇರ್ ತಪ್ಪಿಸುತ್ತಾಳೆ. ವೈಶಾಖಾ ನೆಲಕ್ಕೆ ಬೀಳುತ್ತಾಳೆ. 
icon

(6 / 8)

ರಾಮಾಚಾರಿ ಮತ್ತು ಜಾನಕಿ ಮನೆಯಲ್ಲಿ ದೀಪ ಹಚ್ಚುತ್ತಾ ಇರುತ್ತಾರೆ. ದೇವರ ಬಳಿ ಬಂದು ಪ್ರಾರ್ಥನೆ ಮಾಡುತ್ತಾರೆ. 
icon

(7 / 8)

ಆದರೆ ಅಲ್ಲಿ ಹಚ್ಚಿಟ್ಟ ದೀಪ ಆರಿ ಹೋಗುತ್ತದೆ. ಅದನ್ನು ನೋಡಿ ಅವರಿಬ್ಬರಿಗೂ ಗಾಬರಿ ಆಗುತ್ತದೆ. ಇದು ಅಪಶಕುನ ಎಂದು ಜಾನಕಿ ಬೇಸರ ಮಾಡಿಕೊಂಡಿದ್ದಾಳೆ. 
icon

(8 / 8)

ಇತರ ಗ್ಯಾಲರಿಗಳು