Ramachari Serial: ಅನ್ಯಾಯವಾಗಿ ಮುಡಿ ಕೊಟ್ಟೆ ಎಂದು ಬೇಸರಿಸಿಕೊಂಡ ಚಾರು; ಬಯಲಾಯ್ತು ವೈಶಾಖಾ ನಾಟಕ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರುಗೆ ಈಗ ಎಲ್ಲ ಸತ್ಯ ಗೊತ್ತಾಗಿದೆ. ಇಷ್ಟು ದಿನ ವೈಶಾಖಾ ಮಾಡಿದ್ದು ನಾಟಕ ಎಂದು ಅರ್ಥ ಆಗಿದೆ. ಮುಂದೇನ್ಮಾಡ್ತಾಳೆ ನೀವೇ ನೋಡಿ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರುಗೆ ಈಗ ಎಲ್ಲ ಸತ್ಯ ಗೊತ್ತಾಗಿದೆ. ಇಷ್ಟು ದಿನ ವೈಶಾಖಾ ಮಾಡಿದ್ದು ನಾಟಕ ಎಂದು ಅರ್ಥ ಆಗಿದೆ. ಮುಂದೇನ್ಮಾಡ್ತಾಳೆ ನೀವೇ ನೋಡಿ.
(1 / 9)
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಎಲ್ಲ ಸತ್ಯವನ್ನು ಅರ್ಥ ಮಾಡಿಕೊಂಡಿದ್ದಾಳೆ. ನನ್ನ ಅಂದ ಕೆಡಿಸಬೇಕು ಎಂದೇ ವೈಶಾಖಾ ಹೀಗೆ ಮಾಡಿದ್ದಾಳೆ ಎಂದು ಅವಳಿಗೆ ಅರ್ಥ ಆಗಿದೆ.
(Colors Kannada)(2 / 9)
ಚಾರು ಫೋಟೋದ ಮುಂದೆ ನಿಂತುಕೊಂಡು ವೈಶಾಖಾ ಮಾತಾಡುತ್ತಾ ಇರುತ್ತಾಳೆ.. ಅದನ್ನು ಚಾರು ಕೇಳಿಸಿಕೊಂಡ ನಂತರ ಎಲ್ಲ ಸತ್ಯ ಅರ್ಥ ಆಗುತ್ತದೆ.
(Colors Kannada)(3 / 9)
“ಎಲ್ಲ ಮಾಡಿದ್ದೂ ನಾನೇ ಅವತ್ತು ದೇವಸ್ಥಾನದಲ್ಲಿ ಜೇನು ಕಚ್ಚುವಂತೆ ಮಾಡಿದ್ದು, ಉರುಳು ಸೇವೆ ಮಾಡುವಾಗ ಪಟಾಕಿ ಹಚ್ಚಿದ್ದು ಎಲ್ಲವೂ ನಾನೇ” ಎಂದು ವೈಶಾಖಾ ಹೇಳುತ್ತಿರುತ್ತಾಳೆ.
(Colors Kannada)(4 / 9)
ಆ ಎಲ್ಲ ಮಾತು ಕೇಳಿಸಿಕೊಂಡ ಚಾರು ತಾನೇ ಬದಲಾಗಬೇಕು ಮತ್ತೆ ಹಳೆ ಚಾರು ಆಗಬೇಕು ಎಂದು ಬಯಸಿ ವಿಗ್ ಹಾಕಿಕೊಂಡಿದ್ದಾಳೆ.
(Colors Kannada)(5 / 9)
ವೈಶಾಖಾಳಿಗೆ ತಪ್ಪು ಮಾಡಿದರೂ ಇಷ್ಟು ಸಿಟ್ಟಿದೆ ಅಂದ್ರೆ, ತಪ್ಪೇ ಮಾಡದ ನನಗೆ ಇನ್ನೆಷ್ಟು ಸಿಟ್ಟಿರಬಹುದು? ಎಂದು ಹೇಳಿಕೊಳ್ಳುತ್ತಾಳೆ.
(Colors Kannada)(6 / 9)
ಇನ್ನು ಮುಂದೆ ನಾನೇ ನನ್ನ ನಿಜ ರೂಪ ತೋರಿಸ್ತೀನಿ. ಹೊಸ ಚಾರು ಅಲ್ಲ ಇವಳಿಗೆ ಹಳೆ ಚಾರು ಹೇಗಿದ್ದಳೋ ಹಾಗೇ ಇದ್ದು ತೋರಿಸ್ತೀನಿ ಎಂದು ಅಂದುಕೊಳ್ಳುತ್ತಾಳೆ.
(Colors Kannada)(7 / 9)
ಇತ್ತ ವೈಶಾಖಾ ವೀಲ್‌ಚೇರ್ ಮೇಲೆ ಕುಳಿತು ಸುಸ್ತಾಗಿ ಒಂದು ಸ್ವಲ್ಪ ಸಮಯ ನಿಂತುಕೊಳ್ಳೋಣ ಎಂದು ನಿಂತುಕೊಳ್ಳುತ್ತಾಳೆ. ವ್ಯಾಯಾಮ ಮಾಡುತ್ತಾಳೆ.
(Colors Kannada)(8 / 9)
ಆದರೆ ಚಾರು ತಾನು ಮಾತನಾಡುವಾಗ ಎಲ್ಲವನ್ನೂ ಕೇಳಿಸಿಕೊಂಡಿದ್ಧಾಳೆ ಎಂಬ ಅಂದಾಜು ಕೂಡ ಅವಳಿಗಿಲ್ಲ.
(Colors Kannada)ಇತರ ಗ್ಯಾಲರಿಗಳು