Ramachari Serial: ವೈಶಾಖಾಳಿಗೆ ಬುದ್ಧಿ ಕಲಿಸಲು ಚಾರು ಉಪಾಯ; ಮನೆಗೆ ಬಂದ ಮಂತ್ರವಾದಿಯನ್ನು ನೋಡಿ ಗೊಂದಲದಲ್ಲಿದ್ದಾಳೆ ವೈಶಾಖಾ
- Ramachari Serial: ರಾಮಾಚಾರಿ ಮನೆಯಲ್ಲಿ ನಡೆಯುತ್ತಿರುವ ಅವಾಂತರಗಳು ಒಂದೆರಡಲ್ಲ. ಯಾವಾಗಲೂ ವೈಶಾಖಾ ಇದೆಲ್ಲ ಅವಾಂತರಕ್ಕೂ ಮೂಲ ಆಗಿರುತ್ತಾಳೆ. ಆದರೆ ಈ ಬಾರಿ ಚಾರು ಒಂದೊಳ್ಳೆ ಉಪಾಯ ಮಾಡಿದ್ದಾಳೆ.
- Ramachari Serial: ರಾಮಾಚಾರಿ ಮನೆಯಲ್ಲಿ ನಡೆಯುತ್ತಿರುವ ಅವಾಂತರಗಳು ಒಂದೆರಡಲ್ಲ. ಯಾವಾಗಲೂ ವೈಶಾಖಾ ಇದೆಲ್ಲ ಅವಾಂತರಕ್ಕೂ ಮೂಲ ಆಗಿರುತ್ತಾಳೆ. ಆದರೆ ಈ ಬಾರಿ ಚಾರು ಒಂದೊಳ್ಳೆ ಉಪಾಯ ಮಾಡಿದ್ದಾಳೆ.
(1 / 9)
ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಮಾಡುತ್ತಿರುವ ಮೋಸವನ್ನು ಚಾರು ಗುರುತಿಸಿದ್ದಾಳೆ. ಅವಳಿಗೆ ಈಗ ಸಮಸ್ಯೆ ಅರ್ಥ ಆಗಿದೆ.
(Colors Kannada)(2 / 9)
ಇಷ್ಟು ದಿನ ನಾಟಕ ಮಾಡುತ್ತಾ ಬಂದಿದ್ದ ವೈಶಾಖಾ, ಚಾರುವನ್ನು ಕಾಡುವ ಸಲುವಾಗಿ ಮುಡಿಕೊಡುವಂತೆ ಮಾಡಿದ್ದಳು. ಈಗ ಚಾರುಗೆ ಸತ್ಯ ತಿಳಿದಿದ್ದು, ವೈಶಾಖಾಗೆ ಸರಿಯಾಗಿ ಬುದ್ಧಿ ಕಲಿಸಬೇಕು ಅಂದುಕೊಳ್ಳುತ್ತಾಳೆ.
(Colors Kannada)(3 / 9)
ಮನೆಯ ಎಲ್ಲಾ ವಿಚಾರವನ್ನು ಒಂದು ಮಂತ್ರವಾದಿಗೆ ಹೇಳಿ, ಆ ಮಂತ್ರವಾದಿಯನ್ನು ಮನೆಗೆ ಕರೆಸುತ್ತಾಳೆ.
(Colors Kannada)(4 / 9)
ಅವರು ಒಂದು ಒಂದು ತೆಂಗಿನ ಕಾಯಿಯನ್ನು ಮನೆಯಲ್ಲಿ ಇಟ್ಟು ತಿರುಗಿಸುತ್ತಾರೆ. ಅದು ವೈಶಾಖಾ ಕಡೆ ಮುಖ ಮಾಡುತ್ತದೆ. (ಹಿಂದೂಸ್ತಾನ್ ಟೈಮ್ಸ್ ಮೂಡನಂಬಿಕೆಯನ್ನು ಪ್ರೋತ್ಸಾಹಿಸುತ್ತಿಲ್ಲ)
(Colors Kannada)(5 / 9)
ಆ ಮಂತ್ರವಾದಿ ವೈಶಾಖಾಳ ಹತ್ತಿರ ಹೋಗಿ “ಇದೇ ಇಲ್ಲಿ ಏನೋ ಸಮಸ್ಯೆ ಇದೆ” ಎಂದು ಹೇಳುತ್ತಾರೆ, ಆಗ ವೈಶಾಖಾ ಭಯಪಡುತ್ತಾಳೆ.
(Colors Kannada)(6 / 9)
ತಾನು ನಾಟಕ ಮಾಡುತ್ತಿರುವ ವಿಚಾರ ಇವನಿಗೆ ಗೊತ್ತಾಗಿದೆ ಎಂದುಕೊಳ್ಳುತ್ತಾಳೆ. ಆದರೆ ಹಾಗಾಗಿರುವುದಿಲ್ಲ.
(Colors Kannada)(7 / 9)
ಇವಳು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ ಎಂದು ಆ ಮಂತ್ರವಾದಿ ಹೇಳುತ್ತಾನೆ. ಆಗ ವೈಶಾಖಾಳಿಗೆ ಒಳಗಿಂದೊಳಗೆ ನಗು ಬರುತ್ತದೆ.
(Colors Kannada)(8 / 9)
ಇವನ್ಯಾರೋ ಏನೋ ಗೊತ್ತಿಲ್ಲದವನು ನನ್ನ ನಾಟಕವನ್ನು ನಂಬಿದ್ದಾನೆ ಎಂದುಕೊಳ್ಳುತ್ತಾಳೆ. ಆ ಕೂಡ ಕೂಡ ಇವಳಿಗೆ ಕಾಲಿನ ಸ್ವಾಧೀನ ಇಲ್ಲ ಎಂದೇ ಮಾತಾಡುತ್ತಾ ಇರುತ್ತಾನೆ.
(Colors Kannada)ಇತರ ಗ್ಯಾಲರಿಗಳು