Ramachari Serial: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ನಿರ್ಧಾರ ಮಾಡಿದ ಚಾರು; ವೈಶಾಖಾಳ ನಾಟಕ ತಂದಿಟ್ಟಿದೆ ಸಂಕಟ
- Ramachari serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ವೈಶಾಖಾಳ ನಾಟಕವನ್ನು ಬಯಲು ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾಳೆ. ಸತ್ಯ ಗೊತ್ತಾದರೂ ಯಾರಿಗೂ ಹೇಳದೆ ತನ್ನೊಳಗೇ ಇಟ್ಟುಕೊಂಡು ವೈಶಾಖಾಳಿಗೆ ಕಾಟ ಕೊಡಲು ಆರಂಭಿಸಿದ್ದಾಳೆ.
- Ramachari serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ವೈಶಾಖಾಳ ನಾಟಕವನ್ನು ಬಯಲು ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾಳೆ. ಸತ್ಯ ಗೊತ್ತಾದರೂ ಯಾರಿಗೂ ಹೇಳದೆ ತನ್ನೊಳಗೇ ಇಟ್ಟುಕೊಂಡು ವೈಶಾಖಾಳಿಗೆ ಕಾಟ ಕೊಡಲು ಆರಂಭಿಸಿದ್ದಾಳೆ.
(1 / 9)
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಎಲ್ಲರಿಗೂ ತಾನೇ ಊಟ ಬಡಿಸುತ್ತೇನೆ ಎಂದು ಹೇಳುತ್ತಾಳೆ. ನಂತರ ಎಲ್ಲರೂ ಬಂದು ಊಟಕ್ಕೆ ಕುಳಿತುಕೊಳ್ಳುತ್ತಾರೆ.
(Colors Kannada)(2 / 9)
ರಾಮಾಚಾರಿ ತನ್ನ ಕೈಯ್ಯಾರೆ ಎಲ್ಲರಿಗೂ ಅಡುಗೆ ಮಾಡಿರುತ್ತಾನೆ. ಮನೆಯವರೆಲ್ಲ ಒಟ್ಟಿಗೆ ಕೂತು ಊಟ ಮಾಡಲು ಮುಂದಾಗುತ್ತಾರೆ.
(Colors Kannada)(3 / 9)
ಆದರೆ ವೈಶಾಖಾ ನನಗೆ ನಿಮ್ಮ ರೀತಿ ಕೆಳಗಡೆ ಕೂತು ಊಟ ಮಾಡುವ ಭಾಗ್ಯವೇ ಇಲ್ಲ ಎಂದು ಬೇಸರ ಆದವರಂತೆ ನಾಟಕ ಮಾಡುತ್ತಾಳೆ.
(Colors Kannada)(4 / 9)
ಆಗ ಜಾನಕಿ ಬೇಸರ ಮಾಡಿಕೊಳ್ಳುತ್ತಾಳೆ. ಚಾರು ಸಮಾಧಾನ ಮಾಡಲು ಮುಂದಾದಾಗ, ನನಗೆ ಕೈಕೂಡ ನೊಯ್ತಾ ಇದೆ ಎಂದು ಮತ್ತೊಂದು ನಾಟಕ ಮಾಡುತ್ತಾಳೆ.
(Colors Kannada)(5 / 9)
ಆಗ ಚಾರು ತಾನೇ ಊಟ ಮಾಡಿಸುತ್ತೇನೆ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಮನೆಯವರು ಅವರಿಬ್ಬರ ಪ್ರೀತಿಯನ್ನು ಮೆಚ್ಚುತ್ತಾರೆ.
(Colors Kannada)(6 / 9)
ಆದರೆ ಚಾರು ಒಳಗಿಂದೊಳಗೇ ಬೇರೆ ಉಪಾಯ ಮಾಡಿರುತ್ತಾಳೆ. ವೈಶಾಖಾಳಿಗೆ ಖಾರದ ಊಟ ತಿನ್ನಿಸಿ ಅವಳು ನೀರು ಕುಡಿಯಲು ಓಡಬೇಕು ಆ ರೀತಿ ಮಾಡುವ ಆಲೋಚನೆ ಹೊಂದಿರುತ್ತಾಳೆ.
(Colors Kannada)(7 / 9)
ರುಕ್ಕು ಕೂಡ ವೈಶಾಖಾಳ ಪರವಾಗಿ ನಾಟಕ ಮಾಡುತ್ತಾ ಇರುತ್ತಾಳೆ, ಆದರೆ ಅವಳು ಊಟ ಮಾಡಿಸುವುದಿಲ್ಲ. ಬದಲಾಗಿ ತಾನೇ ಊಟಕ್ಕೆ ಕುಳಿತುಕೊಳ್ಳುತ್ತಾಳೆ.
(Colors Kannada)(8 / 9)
ಚಾರು ಒಂದೊಳ್ಳೆ ಉಪಾಯ ಮಾಡಿ, ಊಟ ಮಾಡಿಸುತ್ತಾಳೆ. ಆದರೆ ಊಟದಲ್ಲಿ ಖಾರ ಹೆಚ್ಚು ಮಾಡಿರುತ್ತಾಳೆ. ವೈಶಾಖಾ ಒಂದು ತುತ್ತು ತಿಂದ ತಕ್ಷಣ “ಅಯ್ಯೋ! ಖಾರಾ” ಎಂದು ಕೂಗುತ್ತಾಳೆ.
(Colors Kannada)ಇತರ ಗ್ಯಾಲರಿಗಳು