Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಫೈಟಿಂಗ್; ಶ್ರುತಿಗೆ ಮೋಸ ಮಾಡಿದವನಿಗೆ ತಕ್ಕ ಶಾಸ್ತಿ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಫೈಟ್ ಮಾಡಿದ್ದಾಳೆ. ಹೆಣ್ಣಿನ ರಕ್ಷಣೆಗೆ ಹೆಣ್ಣೇ ದುರ್ಗಿ, ಕಾಳಿ, ಚಂಡಿ ಅವತಾರತಾಳಬೇಕು ಎನ್ನುತ್ತಲೇ, ಶ್ರುತಿಗೆ ಮೋಸ ಮಾಡಿದವನಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಫೈಟ್ ಮಾಡಿದ್ದಾಳೆ. ಹೆಣ್ಣಿನ ರಕ್ಷಣೆಗೆ ಹೆಣ್ಣೇ ದುರ್ಗಿ, ಕಾಳಿ, ಚಂಡಿ ಅವತಾರತಾಳಬೇಕು ಎನ್ನುತ್ತಲೇ, ಶ್ರುತಿಗೆ ಮೋಸ ಮಾಡಿದವನಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ.
(1 / 8)
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಫೈಟ್ ಮಾಡಿದ್ದಾಳೆ. ಶ್ರುತಿಯನ್ನು ಪ್ರೀತಿಸಿ, ನಂಬಿಸಿ ಅವಳನ್ನು ಗರ್ಭಿಣಿ ಮಾಡಿ, ಈಗ ಮದುವೆ ಆಗೋದಿಲ್ಲ ಎಂದವನಿಗೆ ಬುದ್ದಿ ಕಲಿಸಿದ್ದಾಳೆ.
(Colors Kannada)(2 / 8)
ಶ್ರುತಿ ಹಾಗೂ ಜಾನಕಿ ಮುಚ್ಚಿಟ್ಟಿದ್ದ ಸತ್ಯ ಗೊತ್ತಾದ ನಂತರವೂ ಸುಮ್ಮನೆ ಕೂರುವ ಜಾಯಮಾನ ಚಾರುದಲ್ಲ. ಅವಳೇ ಶ್ರುತಿಗೆ ಮೋಸ ಮಾಡಿದವನನ್ನು ಹುಡುಕಿ ಹೋಗಿದ್ದಾಳೆ.
(Colors Kannada)(3 / 8)
ಚಾರು ಅವನನ್ನು ಕಂಡು ಕೋಪಗೊಂಡಿದ್ದಾಳೆ. ತನ್ನ ಕಾಲಿನಿಂದ ಅವನಿಗೆ ಒದ್ದು ಬುದ್ಧಿ ಕಲಿಸಿದ್ದಾಳೆ.
(Colors Kannada)(4 / 8)
ರೌಡಿಗಳ ಗುಂಪೇ ಅವಳನ್ನು ಸದೆಬಡಿಯಲು ಮುಂದಾಗಿತ್ತು. ಆದರೆ, ಚಾರು ಅವರೆಲ್ಲರನ್ನೂ ಹೊಡೆದಿದ್ದಾಳೆ.
(Colors Kannada)(5 / 8)
ಕಣ್ಣಿಗೆ ಖಾರದ ಪುಡಿ ಎರಚಲು ನೋಡಿದಾಗ ಅಲ್ಲೇ ಇದ್ದ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಚಾವ್ ಆಗಿದ್ದಾಳೆ. ಅವರೆಲ್ಲರನ್ನೂ ಅಟ್ಟಿಸಿಕೊಂಡು ಹೋಗಿದ್ದಾಳೆ.
(Colors Kannada)(6 / 8)
ಶ್ರುತಿಗೆ ಮೋಸ ಮಾಡಿದವನಿಗೆ ತನ್ನ ಜೀವನದಲ್ಲಿ ಮುಂದೆಂದೂ ಈ ರೀತಿ ತಪ್ಪು ಮಾಡಬಾರದು ಎಂದನಿಸುವ ರೀತಿ ಹೊಡೆದಿದ್ದಾಳೆ.
(Colors Kannada)(7 / 8)
ಜೀಪ್ ಓಡಿಸಿಕೊಂಡು ಹೋಗಿ ಅವರೆಲ್ಲರ ಎದುರು ನಿಂತು ಚಾರು ಹೋರಾಡಿದ್ದಾಳೆ. ಚಾರು ಜತೆಯಲ್ಲಿ ಶ್ರುತಿ ಕೂಡ ಇದ್ದಾಳೆ.
(Colors Kannada)ಇತರ ಗ್ಯಾಲರಿಗಳು