Ramachari Serial: ರಂಗೋಲಿ ಚುಕ್ಕಿ ಇಡುತ್ತಲೇ ಬದುಕಿನ ಪಾಠ ಹೇಳಿದ ಚಾರು; ಆ ಮಾತಿಗೆ ಮೌಲ್ಯ ತುಂಬಿದ ರಾಮಾಚಾರಿ
Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ರಂಗೋಲಿ ಹಾಕುತ್ತಾ ಇರುತ್ತಾಳೆ. ಆಸಕ್ತಿಯಿಂದ ರಾಮಾಚಾರಿ ಅದನ್ನೇ ನೋಡುತ್ತಿರುತ್ತಾನೆ.
(1 / 7)
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ರಂಗೋಲಿ ಹಾಕುತ್ತಾ ಇರುತ್ತಾಳೆ. ಆಗ ಅಲ್ಲಿಗೆ ರಾಮಾಚಾರಿ ಬಂದು ಕುಳಿತುಕೊಳ್ಳುತ್ತಾನೆ.
(Colors Kannada)(2 / 7)
ಅಲ್ಲೇ ಇದ್ದ ಮುರಾರಿ ಕೂಡ ಬಂದು ರಾಮಾಚಾರಿ ಪಕ್ಕ ಕುಳಿತುಕೊಳ್ಳುತ್ತಾನೆ. ಆಗ ರಾಮಾಚಾರಿ ಮಾತಾಡಲು ಆರಂಭಿಸುತ್ತಾನೆ.
(Colors Kannada)(3 / 7)
ಚಾರು, ರಾಮಾಚಾರಿ ಮಾತು ಕೇಳಿ ರಂಗೋಲಿಯಲ್ಲಿ ಬದುಕಿನ ಸಾರವೇ ಅಡಗಿದೆ ಎಂದು ಹೇಳುತ್ತಾಳೆ. ಆ ರಾಮಾಚಾರಿ ವಿವರಿಸುತ್ತಾ ಹೋಗುತ್ತಾನೆ.
(Colors Kannada)(4 / 7)
ಬದುಕು ಅನ್ನೋದು ಈ ರಂಗೋಲಿ ಇದ್ದಂತೆ. ಚುಕ್ಕಿಗಳೆಲ್ಲ ಕುಟುಂಬದ ಒಬ್ಬೊಬ್ಬ ಸದಸ್ಯರಿದ್ದಂತೆ ಎಂದು ರಾಮಾಚಾರಿ ಹೇಳುತ್ತಾನೆ. ಒಂದೊಂದೇ ಚುಕ್ಕಿ ತೋರಿಸುತ್ತಾ ಅದಕ್ಕೆ ಹೆಸರಿಡುತ್ತಾನೆ.
(Colors Kannada)(5 / 7)
ಮನೆ ಮುಂದೆ ರಂಗೋಲಿ ನೋಡಿ ಭಿಕ್ಷುಕರು ಕೂಡ ಈ ಮನೆಯಲ್ಲಿ ಭಿಕ್ಷೆ ಸಿಗುತ್ತಾ ಇಲ್ವಾ ಅಂತ ಗುರುತು ಹಿಡಿತಾರಂತೆ ಎಂದು ಚಾರು ಹೇಳುತ್ತಾಳೆ.
(Colors Kannada)(6 / 7)
ಸಮಾನಾಂತರ ರೇಖೆಯಲ್ಲಿದ್ರು ಒಂದು ಚುಕ್ಕಿಗೆ ಇನ್ನೊಂದು ಚುಕ್ಕಿ ಸೇರೋದಿಲ್ಲ. ಅದನ್ನು ಕೂಡಿಸೋಕೆ ಗೆರೆಯೊಂದು ಬೇಕೆ ಬೇಕು. ನಮ್ಮ ಸಂಬಂಧವೂ ಹಾಗೇ ಎಂದು ರಾಮಾಚಾರಿ ಹೇಳುತ್ತಾನೆ. ಹೀಗೆ ರಂಗೋಲಿಯ ಬಗ್ಗೆ ಸಾಕಷ್ಟು ವಿಚಾರವನ್ನು ಹಂಚಿಕೊಂಡಿದ್ದಾರೆ.
(Colors Kannada)ಇತರ ಗ್ಯಾಲರಿಗಳು