Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಸಡಗರ; ಸಂಕ್ರಾಂತಿ ಬಂತು ರತ್ತೋ ರತ್ತೋ ಎಂದು ಕುಣಿದ ಚಾರಿ, ಚಾರು
- ರಾಮಾಚಾರಿ ಧಾರಾವಾಹಿಯಲ್ಲಿ ಸಂಕ್ರಾಂತಿಯ ಸಡಗರ ಅದ್ಧೂರಿಯಾಗಿತ್ತು. ‘ಹಳ್ಳಿ ಮೇಷ್ಟ್ರು’ ಸಿನಿಮಾದ ಹಾಡಿನ ಮರುಸೃಷ್ಟಿ ಮಾಡಲಾಗಿತ್ತು. ಸಂಕ್ರಾಂತಿ ಬಂತು ರತ್ತೋ ರತ್ತೋ ಎಂದು ರಾಮಾಚಾರಿ ಹಾಗೂ ಚಾರು ಹಾಡಿ ಕುಣಿದರು.
- ರಾಮಾಚಾರಿ ಧಾರಾವಾಹಿಯಲ್ಲಿ ಸಂಕ್ರಾಂತಿಯ ಸಡಗರ ಅದ್ಧೂರಿಯಾಗಿತ್ತು. ‘ಹಳ್ಳಿ ಮೇಷ್ಟ್ರು’ ಸಿನಿಮಾದ ಹಾಡಿನ ಮರುಸೃಷ್ಟಿ ಮಾಡಲಾಗಿತ್ತು. ಸಂಕ್ರಾಂತಿ ಬಂತು ರತ್ತೋ ರತ್ತೋ ಎಂದು ರಾಮಾಚಾರಿ ಹಾಗೂ ಚಾರು ಹಾಡಿ ಕುಣಿದರು.
(1 / 9)
ರಾಮಾಚಾರಿ ಧಾರಾವಾಹಿಯಲ್ಲಿ ‘ಹಳ್ಳಿ ಮೇಷ್ಟ್ರು' ಸಿನಿಮಾದ ಹಾಡನ್ನು ರೀಕ್ರಿಯೇಟ್ ಮಾಡಲಾಗಿತ್ತು. ಗ್ಯ್ರಾಂಡ್ ಸೆಟ್‌ನಲ್ಲಿ ಸಂಕ್ರಾಂತಿ ಸಂಭ್ರಮ ಅದ್ಧೂರಿಯಾಗಿತ್ತು.
(Colors Kannada)(2 / 9)
ಈ ಹಿಂದೆ ಇದೇ ಧಾರಾವಾಹಿಯಲ್ಲಿ ‘ರಾಗಿ ಹೊಲದಾಗೆ ಖಾಲಿ ಗುಡಿಸಲು’ ಹಾಡನ್ನು ಮರುಸೃಷ್ಟಿ ಮಾಡಿದ್ದರು.
(Colors Kannada)(3 / 9)
ಹತ್ತಾರು ಜನ ಸೇರಿ ರಾಮಾಚಾರಿ ಮನೆಯಂಗಳದಲ್ಲಿ ಕುಣಿದು, ಸಂಭ್ರಮಿಸಿ ಸಂಕ್ರಾಂತಿ ಆಚರಿಸಿದರು.
(Colors Kannada)(4 / 9)
ಗುಡಿಸಲು, ಕಬ್ಬು, ಹೂವಿನ ಅಲಂಕಾರ ಮತ್ತು ಸಾಂಪ್ರದಾಯಿಕ ಉಡುಗೆ ಇವೆಲ್ಲವೂ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತ್ತು.
(Colors Kannada)(5 / 9)
ಈ ಹಿಂದೆ ‘ಹಳ್ಳಿ ಮೇಷ್ಟ್ರು’ ಸಿನಿಮಾದಲ್ಲಿ ಎಷ್ಟು ಅದ್ಧೂರಿಯಾಗಿ ಸೃಷ್ಟಿ ಮಾಡಲಾಗಿತ್ತೋ, ಈ ಧಾರಾವಾಹಿಯಲ್ಲೂ ಅಷ್ಟೇ ಅದ್ಧೂರಿಯಾದ ಸೆಟ್ ಹಾಕಲಾಗಿತ್ತು.
(Colors Kannada)(6 / 9)
‘ರಾಗಿ ಹೊಲದಾಗೆ ಖಾಲಿ ಗುಡಿಸಲು’ ಹಾಡಿಗೆ ನೃತ್ಯ ಮಾಡಿದಾಗಲೂ ಈ ಜೋಡಿ ಪ್ರಶಂಸೆ ಪಡೆದಿತ್ತು. ಈಗಲೂ ವೀಕ್ಷಕರು ಈ ವಿಶೇಷ ಸಂಚಿಕೆಯನ್ನು ಇಷ್ಟಪಟ್ಟಿದ್ದಾರೆ.
(Colors Kannada)(7 / 9)
ಹಳ್ಳಿಯ ಶೈಲಿಯನ್ನು ಮತ್ತೆ ಸೃಷ್ಟಿಸಿ ಅದೇ ಹಳೆಯ ಕಾಲದ ಅನುಭವ ಆಗುವಂತೆ ಈ ಹಾಡನ್ನು ಮರುಸೃಷ್ಟಿ ಮಾಡಿದ್ದಾರೆ.
(Colors Kannada)(8 / 9)
ಹಳದಿ ಬಣ್ಣದ ಅಂಗಿ, ಪಂಚೆ ಮತ್ತು ಶಲ್ಯ ತೊಟ್ಟು ರಾಮಾಚಾರಿ ಹಾಗೂ ಸೀರೆಯುಟ್ಟು ಚಾರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.
(Colors Kannada)ಇತರ ಗ್ಯಾಲರಿಗಳು