Ramachari Serial: ಕೊಟ್ಟ ಮಾತಿನಂತೆ ಶ್ರುತಿ ಮದುವೆ ಮಾಡಿ ಮುಗಿಸಿದ ಚಾರು; ಜಾನಕಿಗೂ ನೆಮ್ಮದಿ
- Ramachari Serial: ರಾಮಾಚಾರಿ ಮನೆಯಲ್ಲಿ ಮದುವೆ ಸಂಭ್ರಮದಿಂದ ಜರುಗಿದೆ. ಯಾಕೆಂದರೆ ತಾನು ಕೊಟ್ಟ ಮಾತಿನಂತೆ ಚಾರು, ಶ್ರುತಿ ಮದುವೆ ಮಾಡಿಸಿದ್ದಾಳೆ.
- Ramachari Serial: ರಾಮಾಚಾರಿ ಮನೆಯಲ್ಲಿ ಮದುವೆ ಸಂಭ್ರಮದಿಂದ ಜರುಗಿದೆ. ಯಾಕೆಂದರೆ ತಾನು ಕೊಟ್ಟ ಮಾತಿನಂತೆ ಚಾರು, ಶ್ರುತಿ ಮದುವೆ ಮಾಡಿಸಿದ್ದಾಳೆ.
(1 / 8)
ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿಗೆ ತಕ್ಕ ವರನನ್ನು ಹುಡುಕಿ ಚಾರು ಮದುವೆ ಮಾಡಿಸಿದ್ದಾಳೆ. ತನ್ನ ಮೇಲಿದ್ದ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಿದ್ದಾಳೆ.
(Colors Kannada)(2 / 8)
ವೈಶಾಖಾ ಎಷ್ಟೇ ಪ್ರಯತ್ನ ಮಾಡಿದರೂ ಶ್ರುತಿ ಬದುಕನ್ನು ಹಾಳು ಮಾಡಲು ಸಾಧ್ಯವಾಗಲಿಲ್ಲ ಎಂದೇ ಬೇಸರ ಮಾಡಿಕೊಂಡಿದ್ದಾಳೆ.
(Colors Kannada)(3 / 8)
ಚಾರು ತನ್ನ ಗೆಳೆಯನಿಗೆ ವಿಷಯ ತಿಳಿಸಿ ಅವನ ಬಳಿ ಶ್ರುತಿಯನ್ನು ವಿವಾಹ ಆಗುವಂತೆ ಕೇಳುತ್ತಾಳೆ. ಆಗ ಅವನು ದೊಡ್ಡ ಮನಸಿನಿಂದ ಒಪ್ಪಿಕೊಳ್ಳುತ್ತಾನೆ.
(Colors Kannada)(4 / 8)
ಶ್ರುತಿ ಕೂಡ ಈ ಹಿಂದೆ ಆದ ಎಲ್ಲವನ್ನೂ ಮರೆತು ಹೊಸ ಬಾಳಿಗೆ ಕಾಲಿಡಲು ಖುಷಿಪಡುತ್ತಿದ್ದಾಳೆ. ಅವಳೂ ಯಾವ ನೋವೂ ಇಲ್ಲದೆ ಮದುವೆಯಾಗಿದ್ದಾಳೆ.
(Colors Kannada)(5 / 8)
ತನ್ನ ಮಗಳ ಜೀವನವೇ ಹಾಳಾಯ್ತು, ಇನ್ನೇನೂ ಬೇರೆ ಮಾರ್ಗವೇ ಇಲ್ಲ. ಇವಳು ಮದುವೆಗೂ ಮುಂಚೆಯೇ ಅಮ್ಮ ಆಗುತ್ತಿದ್ದಾಳೆ ಎಂದು ಗಾಬರಿಯಾಗಿದ್ದ ಜಾನಕಿಗೂ ಸಮಾಧಾನ ಆಗಿದೆ.
(Colors Kannada)(6 / 8)
ಚಾರು ಗೆಳೆಯನಿಗೂ ಇದು ಎರಡನೇ ಮದುವೆ ಆಗಿದ್ದರೂ ಸಹ ಅವನ ಮನೆಯವರೆಲ್ಲ ತುಂಬಾ ಸಂತೋಷದಿಂದ ಒಪ್ಪಿ ಮದುವೆ ಮಾಡುತ್ತಿದ್ದಾರೆ.
(Colors Kannada)(7 / 8)
ಸಿಂಪಲ್ ಆಗಿ ರಾಮಾಚಾರಿ ಮನೆಯಲ್ಲೇ ಕೆಲವೇ ಜನರನ್ನು ಕರೆದು ಮದುವೆ ಮಾಡಿದ್ದಾರೆ. ಮನೆಯವರೆಲ್ಲರೂ ಖುಷಿಯಿಂದಲೇ ಇದ್ದಾರೆ.
(Colors Kannada)ಇತರ ಗ್ಯಾಲರಿಗಳು