Ramachari Serial: ಹೆಣ್ಣು ನೋಡಲು ಬಂದವರಿಗೆ ಅವಮಾನ; ಜಾನಕಿ ಸಿಟ್ಟಾಗಿದ್ದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಮದುವೆ ಮಾಡಬೇಕು ಎಂದು ನಾರಾಯಣಾಚಾರ್ಯರು ಅಂದುಕೊಂಡಿದ್ದಾರೆ. ಆದರೆ ಜಾನಕಿ ಕೂಡಿ ಬಂದ ಸಂಬಂಧವನ್ನು ನಿರಾಕರಿಸಿದ್ದಾಳೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಮದುವೆ ಮಾಡಬೇಕು ಎಂದು ನಾರಾಯಣಾಚಾರ್ಯರು ಅಂದುಕೊಂಡಿದ್ದಾರೆ. ಆದರೆ ಜಾನಕಿ ಕೂಡಿ ಬಂದ ಸಂಬಂಧವನ್ನು ನಿರಾಕರಿಸಿದ್ದಾಳೆ.
(1 / 8)
ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿಯನ್ನು ನೋಡಲು ಗಂಡಿನ ಕಡೆಯವರು ಬಂದು ಕುಳಿತುಕೊಂಡಿರುತ್ತಾರೆ. ಆದರೆ ಎಷ್ಟು ಹೊತ್ತಾದರೂ ಶ್ರುತಿ ಮಾತ್ರ ಬರೋದಿಲ್ಲ. ಆಗ ರಾಮಾಚಾರಿ ಚಾರು ಬಳಿ ಅವಳನ್ನು ಕರೆದುಕೊಂಡು ಬರಲು ಹೇಳುತ್ತಾನೆ.
(Colors Kannada)(2 / 8)
ಶ್ರುತಿ ಬಾರದಿರುವುದನ್ನು ಕಂಡು ಚಾರು ತಾನೇ ಹೋಗಿ ಅವಳನ್ನು ಕರೆದುಕೊಂಡು ಬರಬೇಕು ಎಂದು ನಿರ್ಧರಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಜಾನಕಿ ಬರುತ್ತಾಳೆ.
(Colors Kannada)(3 / 8)
ಜಾನಕಿ ಬಂದವಳೇ ಕೋಪದಿಂದ ನನಗೆ ಈ ಮದುವೆ ಇಷ್ಟ ಇಲ್ಲ. ನನ್ನ ಮಗಳನ್ನು ನಾನು ಇವರಿಗೆ ಕೊಡೋದಿಲ್ಲ ಎಂದು ಹೇಳುತ್ತಾಳೆ.
(Colors Kannada)(4 / 8)
ಜಾನಕಿ ಆಡಿದ ಆ ಮಾತನ್ನು ಕೇಳಿ ನಾರಾಯಣಾಚಾರ್ಯರಿಗೆ ಕೋಪ ಬರುತ್ತದೆ. “ಜಾನಕಿ” ಎಂದು ಗದರುತ್ತಾರೆ. ಆದರೆ ಜಾನಕಿ ಯಾರ ಮಾತನ್ನೂ ಕೇಳೋದಿಲ್ಲ.
(Colors Kannada)(5 / 8)
ಗಂಡಿನ ಕಡೆಯವರಿಗೆ ಅವಮಾನ ಆಗುತ್ತದೆ. “ಯಾಕೆ? ಏನಾಯ್ತು? ನಮ್ಮಿಂದ ನಿಮಗೇನಾದ್ರೂ ಅಪಚಾರ ಆಯ್ತಾ?” ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಜಾನಕಿ ಕಠುವಾಗಿ ಉತ್ತರಿಸುತ್ತಾಳೆ.
(Colors Kannada)(6 / 8)
ರಾಮಾಚಾರಿ ಹಾಗೂ ಚಾರು ಇಬ್ಬರಿಗೂ ಗಾಬರಿಯಾಗುತ್ತದೆ. ಜಾನಕಿ ಯಾವ ಕಾರಣಕ್ಕೆ ಇಷ್ಟೊಂದು ಸಿಟ್ಟಾಗಿದ್ದಾಳೆ ಎಂದು ಯಾರಿಗೂ ತಿಳಿಯುವುದಿಲ್ಲ.
(Colors Kannada)(7 / 8)
ಇನ್ನು ವೈಶಾಖಾ ಮತ್ತು ರುಕ್ಕು ಮನೆಯಲ್ಲಿ ಗಲಾಟೆ ಆಗುವುದನ್ನು ನೋಡಿ ಖುಷಿ ಪಡುತ್ತಾ ಇರುತ್ತಾರೆ.
(Colors Kannada)ಇತರ ಗ್ಯಾಲರಿಗಳು