Ramachari Serial: ಚಾರು ಹತ್ತಿರ ಸತ್ಯ ಹೇಳಿದ ಜಾನಕಿ; ವೈಶಾಖಾಳ ಮೇಲೆ ಶುರುವಾಯ್ತು ಅನುಮಾನ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಮಾಡಿದ ಎಲ್ಲ ತಪ್ಪು ಹೊರಬರುವ ಸೂಚನೆ ಇದೆ. ಜಾನಕಿ ಇಷ್ಟು ದಿನ ತನಗಾಗುತ್ತಿದ್ದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾಳೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಮಾಡಿದ ಎಲ್ಲ ತಪ್ಪು ಹೊರಬರುವ ಸೂಚನೆ ಇದೆ. ಜಾನಕಿ ಇಷ್ಟು ದಿನ ತನಗಾಗುತ್ತಿದ್ದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾಳೆ.
(1 / 7)
ರಾಮಾಚಾರಿ ಧಾರಾವಾಹಿಯಲ್ಲಿ ಚಾರುಗೆ ಯಾವಾಗಲೂ ವೈಶಾಖಾಳ ಮೇಲೆ ಅನುಮಾನ ಇದ್ದೇ ಇರುತ್ತದೆ. ಈ ಬಾರಿಯೂ ಹಾಗೇ ಆಗಿದೆ.
(Colors Kannada)(2 / 7)
ವೈಶಾಖಾ ಇಷ್ಟು ದಿನ ಮಾಡಿಕೊಂಡು ಬಂದ ಸಂಪೂರ್ಣ ನಾಟಕಗಳು ಚಾರುಗೆ ಮಾತ್ರ ಗೊತ್ತಿದೆ. ಅದನ್ನು ಎಲ್ಲರ ಎದುರು ಸಾಕ್ಷಿ ಸಮೇತ ಹೇಳಲು ಚಾರು ಕಾಯುತ್ತಿದ್ದಾಳೆ.
(Colors Kannada)(3 / 7)
ಜಾನಕಿ ಅಳುತ್ತಾ ಚಾರುಗೆ ಇಷ್ಟು ದಿನ ಕೊಟ್ಟ ಕಾಟವನ್ನೆಲ್ಲ ನೆನಪು ಮಾಡಿಕೊಳ್ಳುತ್ತಾಳೆ. ಇದನ್ನೆಲ್ಲ ನಾನು ಬೇಕೆಂದು ಮಾಡಿಲ್ಲ ಎಂದು ಅಳುತ್ತಾಳೆ.
(Colors Kannada)(4 / 7)
ಅತ್ತೆ ಅಳುವುದನ್ನು ನೋಡಿ ಚಾರು ಬೇಸರ ಮಾಡಿಕೊಳ್ಳುತ್ತಾಳೆ. “ಅಳಬೇಡಿ ಅತ್ತೆ, ಯಾವ ನಂಬರ್‍ನಿಂದ ಕಾಲ್ ಬಂದಿತ್ತು ತಿಳಿಸಿ” ಎಂದು ಹೇಳುತ್ತಾಳೆ.
(Colors Kannada)(5 / 7)
“ನಾನು ಈ ಬಗ್ಗೆ ಯೋಚನೆ ಮಾಡ್ತೀನಿ. ನನಗೆ ಒಬ್ಬರ ಮೇಲೆ ಅನುಮಾನ ಇದೆ” ಎಂದು ಹೇಳುತ್ತಾಳೆ. ಆ ನಂಬರ್‍ಗೆ ಕಾಲ್ ಮಾಡುತ್ತಾಳೆ,
(Colors Kannada)(6 / 7)
ಚಾರು ಕಾಲ್ ಮಾಡಿದರೂ ಆ ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ಆಗ ಅವಳಿಗೆ ಇದು ವೈಶಾಖಾಳೇ ಇರಬಹುದು ಎಂಬ ಅನುಮಾನ ಬಲವಾಗಿದೆ.
(Colors Kannada)ಇತರ ಗ್ಯಾಲರಿಗಳು