Ramachari Serial: ರಾಮಾಚಾರಿಗೆ ಬಂತು ಇನ್ನೊಂದು ಸಂಬಂಧ; ಚಾರು ಆತಂಕಕ್ಕೆ ಇದೇ ಕಾರಣ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಏನಾದರೂ ತನ್ನಿಂದ ದೂರ ಆಗಬಹುದೇ ಎಂಬ ಅನುಮಾನ ಚಾರುಗೆ ಆರಂಭವಾಗಿದೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಏನಾದರೂ ತನ್ನಿಂದ ದೂರ ಆಗಬಹುದೇ ಎಂಬ ಅನುಮಾನ ಚಾರುಗೆ ಆರಂಭವಾಗಿದೆ.
(1 / 7)
ರಾಮಾಚಾರಿಗೆ ಸಂಕಷ್ಟ ಎದುರಾಗಿದೆ. ತನ್ನ ಜೀವನದಲ್ಲಿ ಹೀಗೊಂದು ತಿರುವು ಬರುತ್ತದೆ ಎಂದು ರಾಮಾಚಾರಿ ಊಹೆನೂ ಮಾಡಿರೋದಿಲ್ಲ. ಆ ರೀತಿ ಬದಲಾವಣೆ ಆಗಲಿದೆ.
(Colors Kannada)(2 / 7)
ರಾಮಾಚಾರಿಯನ್ನು ಕೆಲವರು ಕೂರಿಸಿಕೊಂಡು ಮಾತಾಡಿಸುತ್ತಿದ್ದಾರೆ. ಅವರು ಇನ್ಯಾರೂ ಅಲ್ಲ ರಾಮಾಚಾರಿ ಕಾಪಾಡಿದ ಹುಡುಗಿಯ ತಂದೆ ಹಾಗೂ ಅವರ ಸಹಾಯಕರು.
(Colors Kannada)(3 / 7)
ರಾಮಾಚಾರಿಯ ಬಳಿ ನೇರವಾಗಿ ಮದುವೆ ವಿಚಾರ ಮಾತಾಡದೆ ಸುತ್ತಿ ಬಳಸಿ ಮಾತಾಡುತ್ತಾ ಇದ್ದಾರೆ. ಆದರೆ, ರಾಮಾಚಾರಿಗೆ ಸಮಯ ಇರೋದಿಲ್ಲ.
(Colors Kannada)(4 / 7)
ಅವರು ನಾವು ನಿಮಗೊಂದು ಆಫರ್ ನೀಡುತ್ತೇವೆ ಎನ್ನುವ ರೀತಿ ಮಾತಾಡುತ್ತಾರೆ. ಆದರೆ, ರಾಮಾಚಾರಿಗೆ ಮಾತ್ರ ಏನೂ ಅರ್ಥ ಆಗೋದಿಲ್ಲ.
(Colors Kannada)(5 / 7)
ನಂತರ ನೇರವಾಗಿ ಕೇಳಿದಾಗ, “ನನ್ನ ಮಗಳು ನಿಮ್ಮನ್ನು ಪ್ರೀತಿಸುತ್ತಿದ್ದಾಳೆ” ಎಂದು ರಾಮಾಚಾರಿ ಕಾಪಾಡಿದ ಹುಡುಗಿಯ ತಂದೆ ಹೇಳುತ್ತಾರೆ.
(Colors Kannada)(6 / 7)
ಆಗ ರಾಮಾಚಾರಿ ನಗುತ್ತಾ, ಇಲ್ಲ ನನಗೆ ಮದುವೆ ಆಗಿದೆ ಎಂದು ಹೇಳುತ್ತಾನೆ. ಅದನ್ನು ಕೇಳಿ ಅವರೆಲ್ಲರಿಗೂ ಬೇಸರ ಆಗುತ್ತದೆ.
(Colors Kannada)ಇತರ ಗ್ಯಾಲರಿಗಳು