Ramachari Serial: ರಾಮಾಚಾರಿಗೆ ಗೊತ್ತಾಗಿದೆ ಪೂರ್ತಿ ಸತ್ಯ; ಜಾನಕಿ ಮೇಲೆ ವೈಶಾಖಾ ಆರೋಪ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಗೆ ವೈಶಾಖಾ ಮಾಡಿದ ಎಲ್ಲ ತಪ್ಪುಗಳೂ ಅರಿವಿಗೆ ಬಂದಿದೆ. ಆದರೆ ವೈಶಾಖಾ ಈಗ ಹೊಸ ಸಂಚು ರೂಪಿಸಿದ್ದಾಲೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಗೆ ವೈಶಾಖಾ ಮಾಡಿದ ಎಲ್ಲ ತಪ್ಪುಗಳೂ ಅರಿವಿಗೆ ಬಂದಿದೆ. ಆದರೆ ವೈಶಾಖಾ ಈಗ ಹೊಸ ಸಂಚು ರೂಪಿಸಿದ್ದಾಲೆ.
(1 / 8)
ರಾಮಾಚಾರಿ ಧಾರಾವಾಹಿಯಲ್ಲಿ ಕೆಲಸದಿಂದ ಬಂದ ರಾಮಾಚಾರಿ ಒಂದೇ ಸಮನೆ “ಅತ್ಗೆ,,, ಅತ್ಗೆ..” ಎಂದು ಕೂಗುತ್ತಾನೆ. ಅವನು ಕೂಗಿದ ತಕ್ಷಣ ವೈಶಾಖಾ ಗಾಬರಿ ಆಗುತ್ತಾಳೆ.
(Colors Kannada)(2 / 8)
ಕೂಗಿದವನು ರಾಮಾಚಾರಿಯಾ? ಅಥವಾ ಕಿಟ್ಟಿನಾ? ಎಂದು ಅವಳಿಗೆ ಅನುಮಾನ ಆಗುತ್ತದೆ. ಸೀದಾ ಹೊರಗಡೆ ಬಂದು ನೋಡುತ್ತಾಳೆ.
(Colors Kannada)(3 / 8)
ಅಲ್ಲಿ ರಾಮಾಚಾರಿ ನಿಂತಿರುತ್ತಾನೆ. “ಏನಾಯ್ತಪ್ಪಾ?” ಎನ್ನುತ್ತಾ ಜಾನಕಿ ಹಾಗೂ ರುಕ್ಕು ಕೂಡ ಅಲ್ಲಿ ಬಂದು ನಿಂತಿರುತ್ತಾರೆ.
(Colors Kannada)(4 / 8)
ನಿಧಾನಕ್ಕೆ ಸಪ್ಪೆ ಮೋರೆ ಹಾಕಿಕೊಂಡು ಚಾರು ಕೂಡ ಅಲ್ಲಿಗೆ ಬರುತ್ತಾಳೆ. ರಾಮಾಚಾರಿ ವೈಶಾಖಾ ತನಗೆ ಕಾಲು ಬರುತ್ತಿಲ್ಲ ಎಂದು ಈ ಹಿಂದೆ ನಾಟಕ ಮಾಡಿದ್ದರ ಬಗ್ಗೆ ಮಾತಾಡುತ್ತಾನೆ.
(Colors Kannada)(5 / 8)
ಆ ಮಾತನ್ನು ಕೇಳಿ ಜಾನಕಿಗೆ ಶಾಕ್ ಆಗುತ್ತದೆ. "ಅರೇ! ಏನಿದು ವೈಶಾಖಾ ಮತ್ತೆ ನಾಟಕ ಆರಂಭಿಸಿದ್ದಾಳಾ?" ಎಂದು ಅವಳಿಗೂ ಅನಿಸುತ್ತದೆ,
(Colors Kannada)(6 / 8)
ವೈಶಾಖಾಳಿಗೆ ಗಾಬರಿ ಆದರೂ ಅವಳು ಏನೂ ಆಗಿಲ್ಲ ಎನ್ನುವ ರೀತಿಯಲ್ಲೇ ನಿಂತು ನೋಡುತ್ತಿರುತ್ತಾಳೆ.
(Colors Kannada)(7 / 8)
ರಾಮಾಚಾರಿ ವೈಶಾಖಾಳ ಎಲ್ಲ ತಪ್ಪನ್ನೂ ಹೇಳುತ್ತಾ ಇರುತ್ತಾನೆ. ರುಕ್ಕು ಮಾಡಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಗಲೂ ವೈಶಾಖಾ ಕಾರಣ ಎನ್ನುತ್ತಾನೆ.
(Colors Kannada)ಇತರ ಗ್ಯಾಲರಿಗಳು