Ramachari Serial: ಸಂಕ್ರಾಂತಿ ದಿನದಂದು ವೈಶಾಖಾಳಿಗೆ ಪಾಠ ಕಲಿಸಿದ ಚಾರು; ರಾಮಾಚಾರಿ ತಡೆದರೂ, ಮನೆಯವರೆಲ್ಲ ಹೊಡೆದರು
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಇಷ್ಟು ದಿನ ನಾಟಕ ಮಾಡುತ್ತಿದ್ದ ವೈಶಾಖಾಳಿಗೆ ಚಾರು ಸರಿಯಾಗಿ ಪಾಠ ಕಲಿಸಿದ್ದಾಳೆ. ಎಲ್ಲರೂ ಹೊಡೆದ ಏಟಿಗೆ ವೈಶಾಖಾ ನೋವಿನಿಂದ ಕೂಗಿದ್ದಾಳೆ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಇಷ್ಟು ದಿನ ನಾಟಕ ಮಾಡುತ್ತಿದ್ದ ವೈಶಾಖಾಳಿಗೆ ಚಾರು ಸರಿಯಾಗಿ ಪಾಠ ಕಲಿಸಿದ್ದಾಳೆ. ಎಲ್ಲರೂ ಹೊಡೆದ ಏಟಿಗೆ ವೈಶಾಖಾ ನೋವಿನಿಂದ ಕೂಗಿದ್ದಾಳೆ.
(1 / 9)
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹೇಗಾದರೂ ಮಾಡಿ ವೈಶಾಖಾ ಮಾಡುತ್ತಿರುವುದು ನಾಟಕ ಎಂದು ಗೊತ್ತು ಮಾಡುವ ಪ್ರಯತ್ನ ಮಾಡಿದ್ದಳು.
(Colors Kannada)(2 / 9)
ಸತ್ಯ ಬಾಯ್ಬಿಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ವೈಶಾಖಾ ಮಾತ್ರ ಸುಳ್ಳು ಹೇಳುವುದನ್ನು, ನಾಟಕ ಮಾಡುವುದನ್ನು ಬಿಟ್ಟಿರಲಿಲ್ಲ.
(Colors Kannada)(3 / 9)
ಅದಕ್ಕೆಂದೇ ಚಾರು ಉಪಾಯ ಮಾಡಿ ಮನೆಯ ಎಲ್ಲರ ಬಳಿಯೂ ಮಂತ್ರದಂಡ ಎಂದು ಸುಳ್ಳು ಹೇಳಿ ಒಂದೊಂದು ಕೋಲು ಕೊಡುತ್ತಾಳೆ. ಜಾನಕಿ ಬಳಿ ಮೊದಲು ನೀವು ಈ ಕೋಲಿನಿಂದ ಅಕ್ಕನ ಕಾಲಿಗೆ ಹೊಡೆಯಿರಿ ಎನ್ನುತ್ತಾಳೆ.
(Colors Kannada)(4 / 9)
ಮೊದಲಿಗೆ ಜಾನಕಿ ಹೊಡೆಯುತ್ತಾಳೆ. ಅದಾದ ನಂತರದಲ್ಲಿ "ಈಗ ನೀನು ಹೊಡಿ ಎಂದು ರುಕ್ಕು ಹತ್ತಿರ ಹೇಳುತ್ತಾಳೆ. ಆಗ ಮನಸಿಲ್ಲದ ಮನಸಿನಿಂದ ರುಕ್ಕು ಹೊಡೆಯುತ್ತಾಳೆ.
(Colors Kannada)(5 / 9)
ಯಾರು ಎಷ್ಟೇ ಹೊಡೆದರು ವೈಶಾಖಾ ಮಾತ್ರ ಎಲ್ಲ ನೋವನ್ನು ಸಹಿಸಿಕೊಂಡು ಕೂತಿರುತ್ತಾಳೆ. ನಂತರ ಕೋದಂಡ ಕೋಲಿನಿಂದ ಹೊಡೆಯುತ್ತಾನೆ.
(Colors Kannada)(6 / 9)
ಮೊರಾರಿಗೂ ಸತ್ಯ ಗೊತ್ತಿರುವ ಕಾರಣ ತಾನೇ ಮೊದಲು ಜೋರಾಗಿ ಹೊಡೆಯಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾನೆ. ಅವನ ಸರದಿಯೂ ಬರುತ್ತದೆ. ಮುರಾರಿ ಕೂಡ ಹೊಡೆಯುತ್ತಾನೆ.
(7 / 9)
ಎಲ್ಲರೂ ತನ್ನ ಸೊಸೆಗೆ ಹೊಡಿತಾ ಇದ್ದಾರಲ್ಲ ಎಂದು ಜಾನಕಿಗೆ ಬೇಸರ ಆಗುತ್ತದೆ. ಆದರೆ ಏನು ಮಾಡಲೂ ಸಾಧ್ಯವಿಲ್ಲದೆ ಸುಮ್ಮನಾಗುತ್ತಾಳೆ.
(Colors Kannada)(8 / 9)
ರಾಮಾಚಾರಿ ಬಳಿ ನೀನು ಈಗ ಹೊಡಿ ಎಂದರೆ ಅವನು ಇದನ್ನೆಲ್ಲ ನಂಬೋದಿಲ್ಲ. ಇಲ್ಲ ನಾನು ಹೊಡೆಯಲ್ಲ ಎನ್ನುತ್ತಾನೆ. ಆದರೂ ಚಾರು ಒತ್ತಾಯ ಮಾಡಿ ಹೊಡೆಸುತ್ತಾಳೆ.
(Colors Kannada)ಇತರ ಗ್ಯಾಲರಿಗಳು