Ramachari Serial: ವೈಶಾಖಾಳಿಗಾಗಿ ಹರಕೆ ತೀರಿಸಲು ಹೊರಟಿದ್ದಾಳೆ ಚಾರು; ದೇವಸ್ಥಾನದಲ್ಲಿ ಮುಡಿ ಕೊಡುವ ವಿಚಾರ ಯಾರಿಗೂ ಗೊತ್ತಿಲ್ಲ
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮನೆಯ ಸಲುವಾಗಿ, ಕುಟುಂಬದ ಸಲುವಾಗಿ ಸಾಕಷ್ಟು ತ್ಯಾಗ ಮಾಡುತ್ತಿದ್ದಾಳೆ. ಈಗ ವೈಶಾಖಾ ಸಲುವಾಗಿ ಏನು ಮಾಡಿದ್ದಾಳೆ ನೀವೇ ನೋಡಿ.
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮನೆಯ ಸಲುವಾಗಿ, ಕುಟುಂಬದ ಸಲುವಾಗಿ ಸಾಕಷ್ಟು ತ್ಯಾಗ ಮಾಡುತ್ತಿದ್ದಾಳೆ. ಈಗ ವೈಶಾಖಾ ಸಲುವಾಗಿ ಏನು ಮಾಡಿದ್ದಾಳೆ ನೀವೇ ನೋಡಿ.
(1 / 8)
ವೈಶಾಖಾ ಬೇಕು ಎಂದೇ ಚಾರುಗೆ ತೊಂದರೆ ಕೊಡಲು ತಾನು ಹರಕೆ ಹೊತ್ತಿರುವುದಾಗಿ ಹೇಳಿರುತ್ತಾಳೆ. ಆದರೆ ಅವಳು ಹರಕೆ ಹೊತ್ತಿರುವುದಿಲ್ಲ.
(colors kannada)(2 / 8)
ದೇವಸ್ಥಾನಕ್ಕೆ ಮುಡಿ ಕೊಡಬೇಕು ಎಂದು ಹೇಳುತ್ತಾಳೆ. ಅದನ್ನೇ ನಿಜ ಎಂದು ನಂಬಿಕೊಂಡು ಚಾರು ಎಲ್ಲದಕ್ಕೂ ಒಪ್ಪಿಕೊಳ್ಳುತ್ತಾಳೆ. ಈ ವಿಚಾರ ಜಾನಕಿಗೂ ತಿಳಿದಿಲ್ಲ.
(3 / 8)
ಚಾರು ಮಾತ್ರ ತನ್ನ ಒಳ್ಳೆತನದಿಂದ ವೈಶಾಖಾ ಹೇಳಿದ ಎಲ್ಲ ಮಾತುಗಳನ್ನೂ ಒಪ್ಪಿಕೊಂಡು ದೇವಸ್ಥಾಕ್ಕೆ ಹೋಗಲು ರೆಡಿಯಾಗ್ತಾಳೆ.
(4 / 8)
ಚಾರು ಮುಡಿ ಕೊಡ್ತಾಳೆ ಅನ್ನೋ ವಿಚಾರ ಗೊತ್ತಾಗಿ ರುಕ್ಕು “ನನಗೆ ಶಾಕ್ ಆಗ್ತಾ ಇದೆ” ಎಂದು ಹೇಳುತ್ತಾ ನಾಟಕ ಮಾಡ್ತಾಳೆ. ಅವಳೂ ಈ ವಿಚಾರದಲ್ಲಿ ವೈಶಾಖಾಳ ಪರ ಇರ್ತಾಳೆ.
(5 / 8)
ಇನ್ನು ರಾಮಾಚಾರಿ ಆಫೀಸ್‌ಗೆ ಹೋಗಲು ರೆಡಿ ಆಗಿರ್ತಾನೆ. ಆಗ “ನಾನೇ ದೇವಸ್ಥಾನಕ್ಕೆ ಡ್ರಾಪ್ ಮಾಡ್ತೀನಿ ಬನ್ನಿ ಚಾರು ಮೇಡಂ” ಎಂದು ಕರೆಯುತ್ತಾನೆ
(6 / 8)
ವೈಶಾಖಾ ಮನಸಿನಲ್ಲೇ “ಎಲ್ಲ ನಾನು ಅಂದುಕೊಂಡ ಹಾಗೇ ಆಗಿದೆ” ಎಂದು ಗರ್ವ ಪಡುತ್ತಾ ಇರುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
(7 / 8)
ಮನೆಯಲ್ಲಿ ರಾಮಾಚಾರಿಗಾಗಲಿ ಅಥವಾ ಜಾನಕಿಗಾಗಲಿ ಯಾರಿಗೂ ಚಾರು ಮುಡಿಕೊಡುತ್ತಿದ್ದಾಳೆ ಎನ್ನುವ ವಿಚಾರವೇ ಗೊತ್ತಿಲ್ಲ.
ಇತರ ಗ್ಯಾಲರಿಗಳು