Ramadan 2024: ಕರ್ನಾಟಕದಲ್ಲಿ ರಂಜಾನ್‌ಗೆ ಭರ್ಜರಿ ಸಿದ್ದತೆ; ಹೊಸ ಬಟ್ಟೆ ಸೇರಿ ಖರೀದಿ ಭರಾಟೆ ಜೋರು, ಫೋಟೋಸ್
- ಪವಿತ್ರ ರಂಜಾನ್‌ಗೆ ದಿನಗಣನೆ ಆರಂಭವಾಗಿದ್ದು, ಮುಸ್ಲಿ ಬಾಂಧವರು ಹೊಸ ಬಟ್ಟೆ ಸೇರಿದಂತೆ ಹಬ್ಬಕ್ಕೆ ಬೇಕಾಗಿರುವಂತ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ವಿಜಯಪುರದ ಮಾರುಕಟ್ಟೆ ಚಿತ್ರಣ ಇಲ್ಲಿದೆ.
- ಪವಿತ್ರ ರಂಜಾನ್‌ಗೆ ದಿನಗಣನೆ ಆರಂಭವಾಗಿದ್ದು, ಮುಸ್ಲಿ ಬಾಂಧವರು ಹೊಸ ಬಟ್ಟೆ ಸೇರಿದಂತೆ ಹಬ್ಬಕ್ಕೆ ಬೇಕಾಗಿರುವಂತ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ವಿಜಯಪುರದ ಮಾರುಕಟ್ಟೆ ಚಿತ್ರಣ ಇಲ್ಲಿದೆ.
(1 / 9)
ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಭಾವೈಕ್ಯದ ರಂಜಾನ್ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ಹಾಗೂ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
(2 / 9)
ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳ ಪರ್ಯಂತ ರೋಜಾ ಆಚರಿಸಿದ ನಂತರ ಈದ್ ಆಚರಿಸುತ್ತಾರೆ. ಹೀಗಾಗಿ ಹಬ್ಬಕ್ಕೆ ಭರದ ಸಿದ್ಧತೆಗಳು ಮಾಡಿಕೊಳ್ಳುತ್ತಿದ್ದಾರೆ.
(3 / 9)
ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಉತ್ಸಾಹದಿಂದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಯುವಕರು ತಮ್ಮ ಸ್ನೇಹಿತರ ಒಡಗೂಡಿ ಶಾಪಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ, ಕೆಲವರು ನೆರೆಯ ಮುಂಬಯಿ, ಸೊಲ್ಲಾಪುರ, ಹೈದರಾಬಾದ್‌ಗೆ ಬಟ್ಟೆ ಖರೀದಿಗಾಗಿಯೇ ಪ್ರಯಾಣ ಬೆಳೆಸಿದ್ದಾರೆ.
(4 / 9)
ವಿಜಯಪುರದ ಜಾಮೀಯಾ ಮಸೀದಿ ರಸ್ತೆಯುದ್ದಕ್ಕೂ ಝಗಮಗಿಸುವ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ನಮಾಜ್‌ಗೆ ಬೇಕಾಗುವ ಟೋಪಿ, ಮಿಸ್ವಾಕ್, ಅತ್ತರ್ ಮಾರಾಟದ ಅಂಗಡಿಗಳನ್ನು ತೆರೆಯಲಾಗಿದ್ದು, ಜನರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
(5 / 9)
ಇಫ್ತಿಯಾರ್ ಸಂದರ್ಭದಲ್ಲಿ ಖರ್ಜೂರ ಮೂಲಕವೇ ರೊಜಾ ಬಿಡುವುದು ಮುಸ್ಲಿಂ ಬಾಂಧವರಿಗೆ ಪವಿತ್ರ. ಹೀಗಾಗಿ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಖರ್ಜೂರಗಳಾದ ಅಜ್ವಾ, ಮೆಡ್ಝೋಲ್, ಸಫವಾಯಿ, ಕಿಮಿಯಾ, ಸುಕ್ಕಾರೀ ಮೊದಲಾದ ತಳಿಯ ಖರ್ಜೂರ ಮಾರಾಟ ಗಮನ ಸೆಳೆಯುತ್ತಿದೆ
(6 / 9)
ಈದ್ ನಮಾಜ್‌ಗಾಗಿ ಮಸೀದಿಗಳಿಗೆ ಲೈಟಿಂಗ್ ಅಳವಡಿಸಲಾಗಿದೆ, ರಾತ್ರಿ ಬಣ್ಣದ ಬೆಳಕಿನಲ್ಲಿ ಅನೇಕ ಮಸೀದಿಗಳು ಕಂಗೊಳಿಸುತ್ತಿವೆ.
(7 / 9)
ರಣಬಿಸಿಲಿನ ಪ್ರಖರತೆಯೂ ಅಧಿಕವಾಗಿರುವುದರಿಂದ ರೋಜಾ ಬಿಟ್ಟು ರಾತ್ರಿ ಸಮಯದಲ್ಲಿಯೇ ಖರೀದಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಧ್ಯರಾತ್ರಿಯಲ್ಲೂ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬರುತ್ತಿದೆ.
ಇತರ ಗ್ಯಾಲರಿಗಳು