Ramanagar Name Change: ಬೆಂಗಳೂರು ದಕ್ಷಿಣ ಜಿಲ್ಲೆಯಾಗಲಿದೆ ರಾಮನಗರ, ಹೆಸರು ಬದಲಾವಣೆಯಿಂದ ಏನು ಲಾಭ photos
- DK Shivakumar ರಾಮನಗರ ಜಿಲ್ಲಾ ಕೇಂದ್ರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸುವ ಹಿಂದೆ ಹಲವಾರು ಕಾರಣಗಳು ಇವೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಾಸೆಯಾಗಿ ನಿಂತಿದ್ದಾರೆ.
- DK Shivakumar ರಾಮನಗರ ಜಿಲ್ಲಾ ಕೇಂದ್ರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸುವ ಹಿಂದೆ ಹಲವಾರು ಕಾರಣಗಳು ಇವೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಾಸೆಯಾಗಿ ನಿಂತಿದ್ದಾರೆ.
(1 / 6)
ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಭಾಗವಾಗಿರುವ ರಾಮನಗರ ಜಿಲ್ಲೆಯನ್ನು 2007 ರಲ್ಲಿ ವಿಂಗಡಿಸಲಾಯಿತು ಮತ್ತು ರಾಮನಗರ ತಾಲ್ಲೂಕಿನಲ್ಲಿ ಜಿಲ್ಲಾ ಕೇಂದ್ರದ ಜೊತೆಗೆ ಮೂರು ಇತರ ತಾಲ್ಲೂಕುಗಳಾದ ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿಯೊಂದಿಗೆ ಪುನರ್ ನಿರ್ಮಿಸಲಾಯಿತು.
(2 / 6)
ರಾಮನಗರವನ್ನೇ ಜಿಲ್ಲಾ ಕೇಂದ್ರ ಮಾಡಿದ್ದರಿಂದ ಈಗಲೂ ಅದು ಒಟ್ಟಾರೆ ರಾಮನಗರ ಜಿಲ್ಲೆ ಎಂದೇ ಕರೆಯಲಾಗುತ್ತಿದೆ. ಇದನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು ಎನ್ನುವುದು ಡಿಸಿಎಂ ಡಿಕೆ ಶಿವಕುಮಾರ್ ಅವರ ವಾದ.
(3 / 6)
ರಾಮನಗರ ಜಿಲ್ಲೆ ಪ್ರತ್ಯೇಕವಾಗಿದ್ದರೂ ಅಭಿವೃದ್ದಿ ದೃಷ್ಟಿಯಿಂದ ಬೆಂಗಳೂರು ದಕ್ಷಿಣ ಎಂದು ರೂಪಿಸಬೇಕು ಎನ್ನುವುದು ಡಿಕೆ ಶಿವಕುಮಾರ್ ಅವರ ನಿಲುವು.
(4 / 6)
ಬೆಂಗಳೂರು ದಕ್ಷಿಣ ಎನ್ನುವ ಹೆಸರು ಬದಲಾದರೆ ಇದು ಬೆಂಗಳೂರಿನ ಭಾಗ ಎನ್ನುವ ಭಾವನೆ ಬರಲಿದೆ. ಇದರಿಂದ ಎಲ್ಲಾ ರೀತಿಯ ವಹಿವಾಟುಗಳಿಗೆ ಬೆಲೆ ಬರಲಿದೆ. ಜನರಿಗೂ ಲಾಭವಾಗಲಿದೆ ಎನ್ನುವುದು ಇದರ ಹಿಂದೆ ಇರುವ ಲೆಕ್ಕಾಚಾರ.
(5 / 6)
ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ಕೇಂದ್ರಗಳು ಬೇರೆಯಾಗಿದ್ದರೂ ಜಿಲ್ಲೆಯ ಹೆಸರು ಭಿನ್ನವಾಗಿದೆ. ಅದೇ ಮಾದರಿಯಲ್ಲಿ ರಾಮನಗರ ಜಿಲ್ಲಾ ಕೇಂದ್ರವಾಗಿ ಬೆಂಗಳೂರು ದಕ್ಷಿಣ ಆಗಬೇಕು ಎನ್ನುವುದು ಬೇಡಿಕೆ.
ಇತರ ಗ್ಯಾಲರಿಗಳು