ರಾಮನಗರ ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆ: ಹಠ ಹಿಡಿದು ಗೆದ್ದ ಡಿಕೆಶಿ, ಕೆಂಗಲ್ ಹನುಮಂತಯ್ಯ ಹೆಸರಿಟ್ಟ ಊರಿನ ಮೊದಲ ಹೆಸರೇನು ಗೊತ್ತೆ
ಹಿಂದೆ ಬೆಂಗಳೂರಿನ ಭಾಗವಾಗಿ ಎರಡು ದಶಕದ ಹಿಂದೆ ಜಿಲ್ಲಾ ಕೇಂದ್ರದಿಂದ ಕರೆಯಲ್ಪಡುತ್ತಿದ್ದ ರಾಮನಗರ ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಲಿದೆ. ರಾಮನಗರ ಹಿಂದಿನಂತೆ ನಗರವಾಗಿ ಉಳಿಯಲಿದೆ.
(1 / 7)
ಕರ್ನಾಟಕದ ಜಿಲ್ಲಾ ಕೇಂದ್ರವಾದ ರಾಮನಗರದ ಹೆಸರು ಬದಲಾವಣೆ ಕೊನೆಗೂ ಆಗಿದೆ. ರಾಮನಗರ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸುವ ನಿಟ್ಟಿನಲ್ಲಿ ಕೆಲ ವರ್ಷದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಡೆಸಿದ್ದ ಪ್ರಯತ್ನ ಕೊನೆಗೂ ಕೈಗೂಡಿದೆ.
(2 / 7)
ರಾಮನಗರ ಜಿಲ್ಲೆ ಈ ಮೊದಲು ಬೆಂಗಳೂರು ಗ್ರಾಮಾಂತರ ಎಂದಿತ್ತು. ನಂತರ ಬೆಂಗಳೂರು ನಗರ ಜಿಲ್ಲೆ ಎಂದಾಗಿತ್ತು. ರಾಮನಗರದ ಹೆಸರನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿ ತೀರ್ಮಾನ ಕೈಗೊಂಡು, ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರು ನಾಮಕರಣ ಮಾಡಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
(3 / 7)
ರಾಮನಗರವೇ ಜಿಲ್ಲಾ ಕೇಂದ್ರ ಸ್ಥಾನ ಆಗಿರಲಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದರೆ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿವರಣೆ ನೀಡಿದ್ಧಾರೆ.
(4 / 7)
ರಾಮನಗರ ಜಿಲ್ಲಾ ಕೇಂದ್ರವಾದರೂ ಬೆಂಗಳೂರಿನೊಂದಿಗೆ ಹೆಚ್ಚಿನ ಒಡನಾಟ ಹೊಂದಿದೆ. ಇದರಿಂದ ಈ ಜಿಲ್ಲೆಗೂ ಬೆಂಗಳೂರಿ ಹೆಸರೇ ಇರಬೇಕು. ಇದರಿಂದ ಎಲ್ಲಾ ರೀತಿಯಲ್ಲೂ ಸಹಾಯವಾಗಲಿದೆ ಎನ್ನುವ ಉದ್ದೇಶದೊಂದಿಗೆ ಡಿಕೆ ಶಿವಕುಮಾರ್ ಅವರು ಜಿಲ್ಲೆಯ ಹೆಸರು ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
(5 / 7)
ರಾಮನಗರ ಜಿಲ್ಲೆಯನ್ನು ಹಿಂದಿನ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಿಂದ 23 ಆಗಸ್ಟ್ 2007 ರಂದು ರಚಿಸಲಾಗಿದೆ. ಇದರಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ಮತ್ತು ಹಾರೋಹಳ್ಳಿ ತಾಲ್ಲೂಕುಗಳು ಸೇರಿವೆ. ಇತ್ತಿಚೆಗೆ 2024ರಲ್ಲಿ ಕನಕಪುರ ತಾಲೂಕಿನಿಂದ ಹಾರೋಹಳ್ಳಿಯನ್ನು ಬೇರ್ಪಡಿಸಿ ಹೊಸ ತಾಲೂಕಾಗಿ ಮಾಡಲಾಗಿದೆ. ರಾಮನಗರ ಜಿಲ್ಲೆಯು ರೇಷ್ಮೆ ನಾಡು ಎಂದು ಪ್ರಸಿದ್ಧಿ ಪಡೆದಿದ್ದು, ಏಷ್ಯಾದಲ್ಲೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
(6 / 7)
ರಾಮನಗರ ಎಂಬುದು ಭಾರತದ ರಾಜ್ಯ ಕರ್ನಾಟಕದ ಪಟ್ಟಣ ಮತ್ತು ನಗರ ಪುರಸಭೆ. ಇದು ರಾಮನಗರ ಜಿಲ್ಲೆಯ ಪ್ರಧಾನ ಕಛೇರಿಯಾಗಿದೆ. ಟಿಪ್ಪು ಸುಲ್ತಾನ್ ಆಡಳಿತದ ಸಮಯದಲ್ಲಿ ಈ ಪಟ್ಟಣವನ್ನು ಶಂಸೆರಾಬಾದ್ ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಬ್ಯಾರಿ ಕ್ಲೋಸ್ (1756-1813) ನಂತರ ಕ್ಲೋಸೆಪ್ಟ್ ಎಂದು ಕರೆಯಲಾಯಿತು. ಈ ಊರಿಗೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಕಂಗಲ್ ಹನುಮಂತಯ್ಯ ಅವರು ರಾಮನಗರ ಎಂದು ಮರುನಾಮಕರಣ ಮಾಡಿದರು.
ಇತರ ಗ್ಯಾಲರಿಗಳು