ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು, 4 ಸಾವು, 6 ಜನರಿಗೆ ಗಾಯ

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು, 4 ಸಾವು, 6 ಜನರಿಗೆ ಗಾಯ

ಹಾವೇರಿಯಿಂದ ತಿರುಪತಿಗೆ ಹೊರಟಿದ್ದವರ ಕಾರು ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಸಮೀಪ ಭೀಕರ ಅಪಘಾತಕ್ಕೆ ಒಳಗಾಗಿದೆ. ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ನಜ್ಜುಗುಜ್ಜಾಗಿದ್ದು, 4 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿವೆ. ಇಲ್ಲಿದೆ ಚಿತ್ರನೋಟ. 

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ ನಿನ್ನೆ (ಮೇ 23) ತಡ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
icon

(1 / 5)

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ ನಿನ್ನೆ (ಮೇ 23) ತಡ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.(YST DVG)

ಹಾವೇರಿಯಿಂದ ತಿರುಪತಿಗೆ ಹೊರಟಿದ್ದವರ ಮಾರುತಿ ಎರ್ಟಿಗಾ ಕಾರು ಇದಾಗಿದ್ದು, ರಾಣೆಬೇನ್ನೂರಿನ  ಹಲಗೇರಿ ಬೈಪಾಸ್ ಬಳಿ ಈ ದುರಂತ ಸಂಭವಿಸಿದೆ. ಎನ್ ಎಚ್ 4 ಪಿಬಿ ರಸ್ತೆಯಿಂದ  ಕೆಳಗೆ ಸರ್ವಿಸ್ ರಸ್ತೆಗೆ ಕಾರು ಬಿದ್ದಿದೆ. 
icon

(2 / 5)

ಹಾವೇರಿಯಿಂದ ತಿರುಪತಿಗೆ ಹೊರಟಿದ್ದವರ ಮಾರುತಿ ಎರ್ಟಿಗಾ ಕಾರು ಇದಾಗಿದ್ದು, ರಾಣೆಬೇನ್ನೂರಿನ  ಹಲಗೇರಿ ಬೈಪಾಸ್ ಬಳಿ ಈ ದುರಂತ ಸಂಭವಿಸಿದೆ. ಎನ್ ಎಚ್ 4 ಪಿಬಿ ರಸ್ತೆಯಿಂದ  ಕೆಳಗೆ ಸರ್ವಿಸ್ ರಸ್ತೆಗೆ ಕಾರು ಬಿದ್ದಿದೆ. (YST DVG)

ಮೃತರನ್ನು ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7),  ಪವಿತ್ರಾ ಪ್ರಭುರಾಜ ಸಮಗಂಡಿ‌ (28) ಎಂದು ಗುರುತಿಸಲಾಗಿದೆ. ಸುರೇಶ್​, ಐಶ್ವರ್ಯ, ಚೇತನಾ ಸ್ಥಳದಲ್ಲೇ ಮೃತಪಟ್ಟರೆ, ಪವಿತ್ರಾ (28) ಅವರನ್ನು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ ಸಾಗಿಸಿದ್ದು, ಅಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟರು.
icon

(3 / 5)

ಮೃತರನ್ನು ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7),  ಪವಿತ್ರಾ ಪ್ರಭುರಾಜ ಸಮಗಂಡಿ‌ (28) ಎಂದು ಗುರುತಿಸಲಾಗಿದೆ. ಸುರೇಶ್​, ಐಶ್ವರ್ಯ, ಚೇತನಾ ಸ್ಥಳದಲ್ಲೇ ಮೃತಪಟ್ಟರೆ, ಪವಿತ್ರಾ (28) ಅವರನ್ನು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ ಸಾಗಿಸಿದ್ದು, ಅಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟರು.(YST DVG)

ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಪ್ರಭುರಾಜ್ ಸಮಗಂಡಿ, ಗೀತಾ ಭಾರ್ಕಿ, ಹೊನ್ನಪ್ಪ ಬಾರ್ಕಿ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ದಾವಣಗೆರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
icon

(4 / 5)

ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಪ್ರಭುರಾಜ್ ಸಮಗಂಡಿ, ಗೀತಾ ಭಾರ್ಕಿ, ಹೊನ್ನಪ್ಪ ಬಾರ್ಕಿ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ದಾವಣಗೆರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.(YST DVG)

ಕಾರುಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ರಾಣೆಬೆನ್ನೂರು ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದುರಂತ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿದರು.
icon

(5 / 5)

ಕಾರುಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ರಾಣೆಬೆನ್ನೂರು ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದುರಂತ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿದರು.(YST DVG)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು