ಮಂಡ್ಯ ಕಾವೇರಿ ತೀರದ ರಂಗನತಿಟ್ಟಿಗೆ ಸಂತಾನ ಸುಖಕ್ಕೆಂದು ಬಂದವು ವಿದೇಶಿ ಬಾನಾಡಿಗಳು, ಮೊದಲ ಬಾರಿಗೆ ಬಂದಿರುವ ಸಿಂಗಾಪೂರದ ಭೀಮರಾಜ
ಮಂಡ್ಯದ ಕಾವೇರಿ ತೀರದ ರಂಗನತಿಟ್ಟು ವಿದೇಶಿ ಬಾನಾಡಿಗಳ ಸಂತಾನ ಸಂತಸದ ತಾಣ.ಸಾವಿರಾರು ಕಿ.ಮಿ ದೂರ ಕ್ರಮಿಸಿ ಇಲ್ಲಿಗೆ ಆಗಮಿಸಿ ಮರಿ ಮಾಡಿಕೊಂಡು ತಮ್ಮ ದೇಶಕ್ಕೆ ಹಕ್ಕಿಗಳು ಪಯಣಿಸುತ್ತವೆ. ಈ ಬಾರಿ ಹೊಸ ಹಕ್ಕಿಗಳು ಬಂದಿರುವನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಗುರುತಿಸಿದ್ಧಾರೆ. ಹೇಗಿರಲಿದೆ ಇಲ್ಲಿನ ವಾತಾವರಣ. ನೋಡಿ ಚಿತ್ರಗಳಲ್ಲಿ
(1 / 9)
ರಂಗನತಿಟ್ಟಿಗೆ ಇಪ್ಪತ್ತಕ್ಕೂ ಅಧಿಕ ವಿದೇಶಿ ಹಕ್ಕಿಗಳು ಪ್ರತಿ ವರ್ಷ ಬರುತ್ತವೆ. ಈ ಬಾರಿ ಭೀಮರಾಜ ಹಕ್ಕಿ(Greater racket-tailed drongo) ವಿಶೇಷ. ಮೊದಲ ಬಾರಿಗೆ ಈ ಹಕ್ಕಿ ರಂಗನತಿಟ್ಟಿನಲ್ಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಮೈಸೂರು ವನ್ಯಜೀವಿ ಡಿಸಿಎಫ್ ಹೇಳಿದ್ದಾರೆ. ಇದು ತೇವ ಇರುವ ಪ್ರದೇಶಗಳಲ್ಲಿ ಹೆಚ್ಚು ಕಾಣ ಸಿಗುತ್ತದೆ.
(2 / 9)
ನವೆಂಬರ್‌ನಲ್ಲಿ ನಡೆಸಿದ ಗಣತಿಯಂತೆ ರಂಗನತಿಟ್ಟಿಗೆ ಈಗಾಗಲೇ 72 ಜಾತಿಯ ಹಕ್ಕಿಗಳು ಬಂದಿವೆ. ಇದರಲ್ಲಿ ನೀರು ಕಾಗೆ ಡಾರ್ಟರ್‌ಗಳೂ ಕಾಣಿಸಿಕೊಂಡಿವೆ. (Drakesh)
(3 / 9)
ನವೆಂಬರ್ ತಿಂಗಳು ಬಂತೆಂದಂತೆ ಇಲ್ಲಿಗಳು ಹಕ್ಕಿಗಳು ಬರಲು ಶುರುವಾಗುತ್ತದೆ. ಕಳೆದ ವಾರ ನಡೆಸಿದ ಹಕ್ಕಿಗಳ ಗಣತಿ ಪ್ರಕಾರ ಹಲವು ಹಕ್ಕಿಗಳು ಗೂಡು ಕಟ್ಟಲು ಶುರು ಮಾಡಿವೆ. (Ninad bellippadi)
(4 / 9)
ರಂಗನತಿಟ್ಟಿನಲ್ಲಿರುವ ಕಾವೇರಿ ನದಿ ನೀರಿನ ಹರಿವು, ಗಿಡಮರಗಳ ಜತೆಗೆ ಹಸಿರ ವಾತಾವರಣವು ಹಕ್ಕಿಗಳಿಗೆ ಸುರಕ್ಷಿತ ಹೆರಿಗೆ ತಾಣ. ಈ ಕಾರಣದಿಂದ ಭಾರತದ ಜತೆಗೆ ಹೊರ ದೇಶದ ಹಕ್ಕಿಗಳು ಇಲ್ಲಿಗೆ ಬರುತ್ತವೆ.(virat Singh)
(5 / 9)
ಅದರಲ್ಲೂ ಕಲ್ಲು ಬಂಡೆಗಳಮೇಲೆ ಕುಳಿತ ಇಲ್ಲವೇ ನೀರಿನ ಮಧ್ಯೆ ಹಾರುವ ಪೆಲಿಕಾನ್ ಹಕ್ಕಿಗಳ ಸದ್ದು, ಸಡಗರ ಈಗ ಜೋರಾಗಿದೆ,
(6 / 9)
ಪೆಲಿಕಾನ್ ಹಕ್ಕಿಗಳು ಗೂಡುಗಳನ್ನು ಕಟ್ಟಲು ಅತ್ತಿಂದಿತ್ತ ಓಡಾಡುವ, ಏನನ್ನೋ ಹೊತ್ತು ತರುವ ಸನ್ನಿವೇಶಗಳು ಶುರುವಾಗಿವೆ.(Piush Sharma)
(7 / 9)
ರಂಗನತಿಟ್ಟು ಹಕ್ಕಿಗಳ ಜತೆಗೆ ಮೊಸಳೆಗಳಿಗೂ ಜನಪ್ರಿಯ. ಇಲ್ಲಿ ಸಾಕಷ್ಟು ಮೊಸಳೆಗಳಿದ್ದು, ಹಕ್ಕಿಗಳೊಂದಿಗೆ ಸಹಜ ಜೀವನ ನಡೆಸುತ್ತವೆ.(Umesh UV)
(8 / 9)
ರಂಗನತಿಟ್ಟಿನ ಹಸಿರು ವಾತಾವರಣದಲ್ಲಿ ಮರದ ಮೇಲೆ ಕುಳಿತ ಹಲವು ಹಕ್ಕಿಗಳು ಮುಂದಿನ ಆರೇಳು ತಿಂಗಳ ಇಲ್ಲಿನ ಪರಿಸರಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿವೆ.(Dev Sristri)
ಇತರ ಗ್ಯಾಲರಿಗಳು