Rangoli Designs: ಹೋಳಿ ಹಬ್ಬದಂದು ಬಿಡಿಸಬಹುದಾದ ಸರಳ, ಸುಂದರ ರಂಗೋಲಿ ವಿನ್ಯಾಸಗಳಿವು
- Rangoli Designs: ಹೋಳಿ ಹಬ್ಬದಂದು ಸರಳ, ಸುಂದರ ರಂಗೋಲಿ ಬಿಡಿಸಲು ಯೋಜಿಸುತ್ತಿದ್ದರೆ ಇಲ್ಲಿ ಕೆಲವು ವಿನ್ಯಾಸಗಳಿವೆ. ಸೃಜನಶೀಲ, ವಿಭಿನ್ನ ಮತ್ತು ಸುಲಭವಾದದ್ದನ್ನು ಹುಡುಕುತ್ತಿದ್ದರೆ ಇಲ್ಲಿ ನೀಡಿರುವ ಡಿಸೈನ್ ಅನ್ನು ಪ್ರಯತ್ನಿಸಬಹುದು.
- Rangoli Designs: ಹೋಳಿ ಹಬ್ಬದಂದು ಸರಳ, ಸುಂದರ ರಂಗೋಲಿ ಬಿಡಿಸಲು ಯೋಜಿಸುತ್ತಿದ್ದರೆ ಇಲ್ಲಿ ಕೆಲವು ವಿನ್ಯಾಸಗಳಿವೆ. ಸೃಜನಶೀಲ, ವಿಭಿನ್ನ ಮತ್ತು ಸುಲಭವಾದದ್ದನ್ನು ಹುಡುಕುತ್ತಿದ್ದರೆ ಇಲ್ಲಿ ನೀಡಿರುವ ಡಿಸೈನ್ ಅನ್ನು ಪ್ರಯತ್ನಿಸಬಹುದು.
(1 / 9)
ಹೋಳಿ ಹಬ್ಬದಂದು ಸುಂದರವಾದ ರಂಗೋಲಿಯನ್ನು ಅಲಂಕರಿಸಿ: ಹಿಂದೂಗಳ ಹಬ್ಬಗಳಲ್ಲಿ ರಂಗೋಲಿಗೆ ಹೆಚ್ಚಿನ ಮಹತ್ವವಿದೆ. ದೀಪಾವಳಿಯಂದು ಲಕ್ಷ್ಮಿಯನ್ನು ಸ್ವಾಗತಿಸಲು ರಂಗೋಲಿಯನ್ನು ತಯಾರಿಸಲಾಗುತ್ತದೆ. ಹೋಳಿ ಹಬ್ಬದಂದು ಕಾಮದಹನದ ನಂತರ, ಮನೆಯಲ್ಲಿ ಪೂಜೆ ಮತ್ತು ಅತಿಥಿಗಳನ್ನು ಸ್ವಾಗತಿಸಲು ರಂಗೋಲಿ ಹಾಕಲಾಗುತ್ತದೆ. ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಬಯಸಿದರೆ, ಇಲ್ಲಿರುವ ಸುಂದರವಾದ ರಂಗೋಲಿ ಮಾದರಿಗಳನ್ನು ಆಯ್ಕೆ ಮಾಡಬಹುದು.
(2 / 9)
ಸುಂದರವಾದ ರಂಗೋಲಿ: ಭಾರತ ಹಬ್ಬಗಳ ನಾಡು. ಪ್ರತಿಯೊಂದು ಹಬ್ಬವನ್ನು ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿಯಾಗಿರಲಿ ಅಥವಾ ಹೋಳಿಯಾಗಿರಲಿ, ನಿಮ್ಮ ಮನೆಗೆ ಅತಿಥಿಗಳು ಬರುತ್ತಿರಬಹುದು. ಹೀಗಾಗಿ ನೀವು ಸುಂದರವಾದ ರಂಗೋಲಿಯನ್ನು ಬಿಡಿಸುವ ಮೂಲಕ ಅವರ ಮೆಚ್ಚುಗೆಯನ್ನು ಪಡೆಯಬಹುದು.
(3 / 9)
ಸುಲಭ ರಂಗೋಲಿ: ರಂಗೋಲಿಯನ್ನು ಹೇಗೆ ಬಿಡಿಸಬೇಕು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಇದು ಹೋಳಿಗೆ ಪರಿಪೂರ್ಣ ಮತ್ತು ಸೃಜನಶೀಲ ಮಾರ್ಗವಾಗಿದೆ. ಸಣ್ಣ ಮಡಕೆಗಳನ್ನು ವಿವಿಧ ಬಣ್ಣಗಳಿಂದ ತುಂಬಿಸಿ ಅವುಗಳನ್ನು ಹರಡಿ.
(4 / 9)
ಕೈಮುದ್ರೆ ರಂಗೋಲಿ: ಈ ರಂಗೋಲಿ ಕೂಡ ತುಂಬಾ ಸುಲಭ. ವಿವಿಧ ಬಣ್ಣಗಳನ್ನು ಹಾಕಿ ಬಳಿಕ ನಿಮ್ಮ ಕೈ ಮುದ್ರೆ ಒತ್ತಿದರೆ ಸೊಗಸಾಗಿ ಕಾಣುತ್ತದೆ.ಮತ್ತು ಅದರೊಂದಿಗೆ ಹೋಳಿ ಹಬ್ಬದ ಶುಭಾಶಯಗಳು ಎಂಬ ಸಂದೇಶವನ್ನು ಬರೆಯಬಹುದು.
(5 / 9)
ಹೂವುಗಳೊಂದಿಗೆ ರಂಗೋಲಿ: ರಂಗೋಲಿ ಪುಡಿ ಇಲ್ಲದಿದ್ದರೆ ಚೆಂಡು ಹೂಗಳು ಮತ್ತು ಅವುಗಳ ಎಲೆಗಳನ್ನು ಬಳಸಿ ಇಂತಹ ವೃತ್ತವನ್ನು ಮಾಡಬಹುದು. ಈ ಹೂವಿನ ರಂಗೋಲಿ ಕೂಡ ತುಂಬಾ ಸುಂದರವಾಗಿ ಕಾಣುತ್ತದೆ. ಎಲೆಗಳು ಸಿಕ್ಕರೆ, ಅವನ್ನೂ ಬಳಸಬಹುದು.
(6 / 9)
ಅಚ್ಚಿನಿಂದ ತಯಾರಿಸುವ ರಂಗೋಲಿ: ಈ ರಂಗೋಲಿಯನ್ನು ಅಚ್ಚಿನಿಂದ ತಯಾರಿಸಲಾಗುತ್ತದೆ. ನೀವು ನಿಮ್ಮ ಸ್ವಂತ ಕೈಗಳಿಂದ ಇದೇ ರೀತಿಯದ್ದನ್ನು ಮಾಡಬಹುದು. ನಿಮ್ಮ ಬಳಿ ಅಚ್ಚು ಇದ್ದರೆ, ಈ ಬಣ್ಣ ಸಂಯೋಜನೆಯು ನಿಮಗೆ ಉಪಯುಕ್ತವಾಗಬಹುದು.
(7 / 9)
ವರ್ಣರಂಜಿತ ರಂಗೋಲಿ: ರಂಗೋಲಿಯ ಅರ್ಥವು ಬಣ್ಣಗಳಿಂದ ತುಂಬಿದೆ. ಈ ಕ್ಲಾಸಿಕ್ ವಿನ್ಯಾಸ ಮತ್ತು ಬಣ್ಣಗಳ ಸಂಯೋಜನೆಯು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಇತರ ಗ್ಯಾಲರಿಗಳು