19,000ಕ್ಕೂ ಹೆಚ್ಚು ರನ್, 36 ಶತಕ; ನಿವೃತ್ತಿಗೂ ಮುನ್ನ ಮನೋಜ್ ತಿವಾರಿ ವರ್ಣರಂಜಿತ ವೃತ್ತಿ ಜೀವನದ ಕಿರುನೋಟ ಇಲ್ಲಿದೆ
- Manoj Tiwary Retirement: ಮನೋಜ್ ತಿವಾರಿ ಈಡನ್‌ನಲ್ಲಿ ಬಿಹಾರ ವಿರುದ್ಧದ ರಣಜಿ ಪಂದ್ಯವನ್ನು ಆಡುವ ಮೂಲಕ ತಮ್ಮ ಪ್ರಥಮ ದರ್ಜೆ ವೃತ್ತಿಜೀವನವನ್ನು ಕೊನೆಗೊಳಿಸಲಿದ್ದಾರೆ.
- Manoj Tiwary Retirement: ಮನೋಜ್ ತಿವಾರಿ ಈಡನ್‌ನಲ್ಲಿ ಬಿಹಾರ ವಿರುದ್ಧದ ರಣಜಿ ಪಂದ್ಯವನ್ನು ಆಡುವ ಮೂಲಕ ತಮ್ಮ ಪ್ರಥಮ ದರ್ಜೆ ವೃತ್ತಿಜೀವನವನ್ನು ಕೊನೆಗೊಳಿಸಲಿದ್ದಾರೆ.
(1 / 9)
ಈಡನ್‌ನಲ್ಲಿ ಶುಕ್ರವಾರ (ಫೆಬ್ರವರಿ 16) ಆರಂಭವಾಗುವ ಬೆಂಗಾಲ್-ಬಿಹಾರ ರಣಜಿ ಪಂದ್ಯ ಮನೋಜ್ ತಿವಾರಿ ಪಾಲಿಗೆ ಕೊನೆಯ ಪ್ರಥಮ ದರ್ಜೆ ಪಂದ್ಯವಾಗಲಿದೆ. 3 ಮಾದರಿಗಳಲ್ಲಿ 19,000ಕ್ಕೂ ಹೆಚ್ಚು ರನ್ ಗಳಿಸಿರುವ ಮನೋಜ್, ನಿವೃತ್ತಿ ಪಂದ್ಯಕ್ಕೆ ಸಜ್ಜಾಗಿದ್ದಾರೆ.
(2 / 9)
ಮನೋಜ್ ತಿವಾರಿ ಅವರು ವೃತ್ತಿಪರ ಕ್ರಿಕೆಟ್‌ನಿಂದ ಶಾಶ್ವತವಾಗಿ ಹಿಂದೆ ಸರಿಯುವುದಕ್ಕೂ ಮುನ್ನ ಆತನ ಸುಪ್ರಸಿದ್ಧ ವೃತ್ತಿಜೀವನದ ಕಿರು ನೋಟ ಇಲ್ಲಿದೆ ನೋಡಿ.
(3 / 9)
ಭಾರತ ಪರ 12 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮನೋಜ್ ತಿವಾರಿ, 26.09 ಸರಾಸರಿಯಲ್ಲಿ 287 ರನ್‌ಗಳನ್ನು ಸಂಗ್ರಹಿಸಿದ್ದಾರೆ. 1 ಶತಕ, 1 ಅರ್ಧಶತಕವನ್ನೂ ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಅಜೇಯ 104 ರನ್.
(4 / 9)
2011ರಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದ ಮನೋಜ್, 2012ರಲ್ಲಿ ಪಲ್ಲೆಕೆಲೆಯಲ್ಲಿ ಶ್ರೀಲಂಕಾ ವಿರುದ್ಧ ಅರ್ಧಶತಕ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿ 5 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.
(5 / 9)
ಮನೋಜ್ ತಿವಾರಿ ಅಂತರಾಷ್ಟ್ರೀಯ ಟಿ20 ವೃತ್ತಿಜೀವನವು ಅದ್ಭುತವಾಗಿಲ್ಲ. ನೀಲಿ ಜೆರ್ಸಿಯಲ್ಲಿ 3 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದು ಒಟ್ಟು 15 ರನ್ ಗಳಿಸಿದ್ದಾರೆ. ಆದರೆ ಕೇವಲ 1 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದರು.
(6 / 9)
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮನೋಜ್ ತಿವಾರಿ, 147 ಪ್ರಥಮ ದರ್ಜೆ ಪಂದ್ಯಗಳ 233 ಇನ್ನಿಂಗ್ಸ್‌ಗಳಲ್ಲಿ 30 ಶತಕ ಮತ್ತು 45 ಅರ್ಧಶತಕ ಸಹಿತ 10165 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಅಜೇಯ 303. ಅವರು 32 ವಿಕೆಟ್ ಕೂಡ ಕಿತ್ತಿದ್ದಾರೆ.
(7 / 9)
ಮನೋಜ್ ತಿವಾರಿ 169 ಲೀಸ್ಟ್ ಎ ಪಂದ್ಯಗಳ 158 ಇನ್ನಿಂಗ್ಸ್‌ಗಳಲ್ಲಿ 5581 ರನ್ ಕಲೆ ಹಾಕಿದ್ದಾರೆ. 6 ಶತಕ ಮತ್ತು 40 ಅರ್ಧಶತಕಗಳು ಸಹ ಅವರ ಖಾತೆಯಲ್ಲಿವೆ. ಗರಿಷ್ಠ ಸ್ಕೋರ್ 151 ರನ್. ಮನೋಜ್ ಲಿಸ್ಟ್-ಎ ಕ್ರಿಕೆಟ್‌ನಲ್ಲಿ 63 ವಿಕೆಟ್ ಪಡೆದಿದ್ದಾರೆ.
(8 / 9)
ದೇಶೀಯ, ಐಪಿಎಲ್ ಮತ್ತು ಅಂತಾರಾಷ್ಟ್ರೀಯ 183 ಟಿ20 ಪಂದ್ಯಗಳ 161 ಇನ್ನಿಂಗ್ಸ್‌ಗಳಲ್ಲಿ 3436 ರನ್ ಕಲೆಹಾಕಿದ್ದಾರೆ. 15 ಟಿ20ಐ ಅರ್ಧ ಶತಕ ಸಿಡಿಸಿದ್ದಾರೆ. ಗರಿಷ್ಠ ಸ್ಕೋರ್ ಔಟಾಗದೆ 75. ಮನೋಜ್ ತಿವಾರಿ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದಾರೆ.
ಇತರ ಗ್ಯಾಲರಿಗಳು