OTT Movies: ಸಿಕಂದರ್ ಬಿಡುಗಡೆ ಸನಿಹ, ರಶ್ಮಿಕಾ ಮಂದಣ್ಣರ ಈ 6 ಸಿನಿಮಾ ಒಟಿಟಿಯಲ್ಲಿ ನೋಡಿ, ಲಿಸ್ಟ್‌ನಲ್ಲಿದೆ 3 ಕನ್ನಡ ಸಿನಿಮಾ
- Rashmika Mandanna OTT Movies: ಸಿಕಂದರ್ ಸಿನಿಮಾ ಮಾರ್ಚ್ 30ರಂದು ಈದ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ನಟಿಸಿದ್ದದಾರೆ. ಈ ಸಮಯದಲ್ಲಿ ಅಭಿಮಾನಿಗಳು ಒಟಿಟಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ಇನ್ನಿತರ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು.
- Rashmika Mandanna OTT Movies: ಸಿಕಂದರ್ ಸಿನಿಮಾ ಮಾರ್ಚ್ 30ರಂದು ಈದ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ನಟಿಸಿದ್ದದಾರೆ. ಈ ಸಮಯದಲ್ಲಿ ಅಭಿಮಾನಿಗಳು ಒಟಿಟಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ಇನ್ನಿತರ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು.
(1 / 7)
Rashmika Mandanna OTT Movies: ಸಿಕಂದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜತೆ ರಶ್ಮಿಕಾ ಮಂದಣ್ಣ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅಭಿಮಾನಿಗಳು ಒಟಿಟಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ಇನ್ನಿತರ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು. ರಶ್ಮಿಕಾ ಮಂದಣ್ಣ ಅಂದಾಗ ಕನ್ನಡಿಗರಿಗೆ ಹಲವು ಭಾವ. ಕೊಡಗಿನ ಹುಡುಗಿಯೊಬ್ಬಳು ಈಗ ದೇಶ ವಿದೇಶಗಳಲ್ಲಿ ಮನೆಮಾತಾಗಿರುವ ವಿಷಯ ಖುಷಿ ತರುತ್ತದೆ. ಇದೇ ಸಮಯದಲ್ಲಿ ಈಕೆ ಸವಾಲುಗಳನ್ನೇ ಮೆಟ್ಟಿಲಾಗಿಸಿ ಸಾಗಿದ ಪರಿಯೂ ಬೆರಗು ಮೂಡಿಸುತ್ತದೆ. ಭಾರತದ ಯಶಸ್ವಿ ನಟಿಯರಲ್ಲಿ ಒಬ್ಬರಾದ ರಶ್ಮಿಕಾ ಮಂದಣ್ಣರ ಖ್ಯಾತಿ ಪುಷ್ಪ ಸಿನಿಮಾದ ಬಳಿಕ ಮುಗಿಲೆತ್ತರಕ್ಕೆ ಬೆಳೆದಿದೆ. ಅನಿಮಲ್ ಸಿನಿಮಾದಲ್ಲಿ ಈಕೆ ನಟಿಸಿದ ಬಳಿಕ ಬಾಲಿವುಡ್‌ನಲ್ಲಿಯೂ ಈಕೆಯ ಕ್ರೇಜ್ ಹೆಚ್ಚಾಗಿದೆ. ಬನ್ನಿ ಒಟಿಟಿಯಲ್ಲಿ ನೋಡಬಹುದಾದ ರಶ್ಮಿಕಾ ಮಂದಣ್ಣರ ಸಿನಿಮಾಗಳನ್ನು ನೋಡೋಣ.
(2 / 7)
ಕಿರಿಕ್ ಪಾರ್ಟಿ (ಜಿಯೋಹಾಟ್‌ಸ್ಟಾರ್): ರಶ್ಮಿಕಾ ಮಂದಣ್ಣ ಎಂದಾಗ ಕನ್ನಡಿಗರಿಗೆ ಮೊದಲು ನೆನಪಾಗುವುದು ಕಿರಿಕ್ ಪಾರ್ಟಿ. ರಕ್ಷಿತ್ ಶೆಟ್ಟಿ ಜತೆಗೆ ಇವರು ಕಿರಿಕ್ ಪಾರ್ಟಿಯಲ್ಲಿ ನಟಿಸಿದ್ದರು. ಆ ಸಮಯಕ್ಕೆ ಇದು ಬ್ಲಾಕ್‌ಬಸ್ಟರ್ ಎಂದರೆ ತಪ್ಪಾಗದು. ಈ ಚಿತ್ರವು ಜಿಯೋಹಾಟ್‌ಸ್ಟಾರ್‌ನಲ್ಲಿದೆ.
(3 / 7)
ಗೀತಾ ಗೋವಿದಂ (ಜೀ5): ಗೀತಾ ಗೋವಿದಂ ಎನ್ನುವುದು ತೆಲುಗು ಭಾಷೆಯ ರೋಮ್ಯಾಂಟಿಕ್ ಕಾಮಿಡಿ ಡ್ರಾಮಾ ಸಿನಿಮಾ. ಈ ಸಿನಿಮಾದಲ್ಲಿ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಲೇಜು ಲೆಕ್ಚರರ್ ಆಗಿರುವ ವಿಜಯ್ ಗೋವಿಂದ್‌ಗೆ ಗೀತಾಳ ಮೇಲೆ ಲವ್ ಆಗುತ್ತದೆ. ಇವರ ಪ್ರೇಮ ಪ್ರಪಂಚವನ್ನು ಒಂದು ತಪ್ಪು ಹಾಳುಗೆಡಹುತ್ತದೆ. ಈ ಸಿನಿಮಾ ಜೀ5ನಲ್ಲಿದೆ.
(4 / 7)
ಪುಷ್ಪ: ದಿ ರೈಸ್ (ಅಮೆಜಾನ್ ಪ್ರೈಮ್ ವಿಡಿಯೋ): ಪುಷ್ಪ: ದಿ ರೈಸ್ ಎಂಬ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಮತ್ತೊಮ್ಮೆ ನೋಡಲು ಬಯಸುವವರು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಗೆ ಹೋಗಬಹುದು. ಕೆಂಪು ರಕ್ತಚಂದನ ಕಳ್ಳಸಾಗಾಟದ ಕಥೆಯಿದು. ಅಲ್ಲು ಅರ್ಜುನ್ ಈ ಚಿತ್ರದಲ್ಲಿ ಪುಷ್ಪ ರಾಜ್ ಆಗಿ ಮಿಂಚಿದ್ದಾರೆ. ರಶ್ಮಿಕಾ ಮಂದಣ್ಣ ಪುಷ್ಪ ರಾಜ್‌ನ ಪ್ರೇಯಸಿ.
(5 / 7)
ಅಂಜನಿ ಪುತ್ರ (ಸನ್‌ನೆಕ್ಸ್ಟ್): ತಮಿಳು ಸಿನಿಮಾ ಪೂಜಾಯಿಯ ರಿಮೇಕ್ ಅಂಜನಿಪುತ್ರ. ಈ ಕನ್ನಡ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಸಿನಿಮಾ ಸನ್‌ನೆಕ್ಸ್ಟ್‌ನಲ್ಲಿದೆ. ಕನ್ನಡಿಗರು ಈ ಸಿನಿಮಾವನ್ನು ರಶ್ಮಿಕಾ ಮಂದಣ್ಣರಿಗೆ ಮಾತ್ರವಲ್ಲದೆ ದಿವಂಗತ ಅಪ್ಪುವಿನ ನೆನಪಿನಲ್ಲಿಯೂ ಕಣ್ತುಂಬಿಕೊಳ್ಳಬಹುದು.
(6 / 7)
ಅನಿಮಲ್: ಬಾಲಿವುಡ್‌ನ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ ಅನ್ನು ಉಡೀಸ್ ಮಾಡಿದ ಕಥೆ ನಿಮಗೆ ನೆನಪಿರಬಹುದು. ರಣಬೀರ್ ಕಪೂರ್ ಜತೆ ರಶ್ಮಿಕಾ ಮಂದಣ್ಣ ಗೀತಾಂಜಲಿ ಪಾತ್ರದಲ್ಲಿ ನಟಿಸಿದ್ದಾರೆ. ತನಗೆ ಮೋಸ ಮಾಡುವ ಗಂಡನ ಜತೆಗೆ ಹಾಳಾದ ಸಂಬಂಧ ನಿಭಾಯಿಸುವ ಪಾತ್ರ ಈಕೆಯದ್ದು. ಸ್ಟ್ರಾಂಗ್ ಕ್ಯಾರೆಕ್ಟರ್‌ನಲ್ಲಿ ರಶ್ಮಿಕಾ ನಟಿಸಿದ್ದರು. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.
ಇತರ ಗ್ಯಾಲರಿಗಳು