Ratha Sapthami 2024: ದೇಹ, ಮನಸ್ಸು ಮಾತ್ರವಲ್ಲ; ಸೂರ್ಯ ನಮಸ್ಕಾರದಿಂದ ಸಾವಿರ ಪ್ರಯೋಜನಗಳಿವೆ
- Surya Namaskara: 2024ರ ಫೆಬ್ರವರಿ 16ರಂದು ರಥ ಸಪ್ತಮಿ ಹಬ್ಬ. ಇದು ವಸಂತ ಋತುವಿನ ಆರಂಭದ ಸಂಕೇತ. ರಥಸಪ್ತಮಿಯನ್ನು ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ. ಈ ದಿನ ಸೂರ್ಯ ನಮಸ್ಕಾರಕ್ಕೆ ಹೆಚ್ಚು ಮಹತ್ವವಿದೆ. ಮಂಗಳಕರ ಹಬ್ಬವನ್ನು 108 ಸೂರ್ಯ ನಮಸ್ಕಾರದ ಅಭ್ಯಾಸದೊಂದಿಗೆ ಆಚರಿಸಲಾಗುತ್ತದೆ. ಹಾಗಿದ್ದರೆ, ಸೂರ್ಯ ನಮಸ್ಕಾರ ಮಾಡುವುದರಿಂದ ಪ್ರಯೋಜನಗಳನ್ನು ನೋಡೋಣ.

(1 / 6)
ಪ್ರತಿದಿನ ಬೆಳಗ್ಗೆ ಸೂರ್ಯನ ದರ್ಶನ ಮಾಡುವುದರಿಂದ ದೇಹಕ್ಕೆ ಪ್ರಯೋಜನಗಳಿವೆ. ಸೂರ್ಯ ನಮಸ್ಕಾರವು ರೂಪ, ಶಕ್ತಿ ಮತ್ತು ಲಯ ಎಂಬ ಮೂರು ಅಂಶಗಳಿಂದ ಕೂಡಿದೆ. ಇದು ದೇಹದ ಎಲ್ಲಾ ಸ್ನಾಯುಗಳಿಗೆ ಹೊಸ ಚೈತನ್ಯ ತುಂಬುತ್ತದೆ.
(2 / 6)
ಸೂರ್ಯ ನಮಸ್ಕಾರವು ದೇಹ ಮಾತ್ರವಲ್ಲದೆ ಮನಸು ಹಾಗೂ ಉಸಿರಾಟ ಕ್ರಿಯೆಗೆ ಹೊಸ ಹುರುಪು ತುಂಬುತ್ತದೆ. ಆಧ್ಯಾತ್ಮಿಕ ಬದುಕಿನ ಒಂದು ಭಾಗವಾಗಿರುವ ಈ ಯೋಗವನ್ನು ಯಾರಾದರೂ ಅಭ್ಯಾಸ ಮಾಡಬಹುದು. ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಧ್ಯಾನದೊಂದಿಗೆ ಸೂರ್ಯ ನಮಸ್ಕಾರ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ.
(3 / 6)
ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಂದ ಹಲವು ಪ್ರಯೋಜನಗಳಿವೆ. ಸ್ನಾಯುವಿನ ಒತ್ತಡ ಕಡಿಮೆಯಾಗುತ್ತದೆ. ಬೆನ್ನುಮೂಳೆ ಗಟ್ಟಿಯಾಗುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತದೆ.
(5 / 6)
ದೀರ್ಘ ಉಸಿರಾಟ ಪ್ರಕ್ರಿಯೆವು ಉಸಿರಾಟದ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ. ಒತ್ತಡ ನಿವಾರಿಸುತ್ತದೆ. ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು