ಶೇನ್ ವಾರ್ನ್ ದಾಖಲೆ ಸಮ, ರಿಚರ್ಡ್ ಹ್ಯಾಡ್ಲಿ ರೆಕಾರ್ಡ್ ಬ್ರೇಕ್; ಟೆಸ್ಟ್​ನಲ್ಲಿ ರವಿಚಂದ್ರನ್ ಅಶ್ವಿನ್ ದರ್ಬಾರ್​-ravichandran ashwin equals legendary shane warne pips richard hadlee with 37th fifer in test history prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶೇನ್ ವಾರ್ನ್ ದಾಖಲೆ ಸಮ, ರಿಚರ್ಡ್ ಹ್ಯಾಡ್ಲಿ ರೆಕಾರ್ಡ್ ಬ್ರೇಕ್; ಟೆಸ್ಟ್​ನಲ್ಲಿ ರವಿಚಂದ್ರನ್ ಅಶ್ವಿನ್ ದರ್ಬಾರ್​

ಶೇನ್ ವಾರ್ನ್ ದಾಖಲೆ ಸಮ, ರಿಚರ್ಡ್ ಹ್ಯಾಡ್ಲಿ ರೆಕಾರ್ಡ್ ಬ್ರೇಕ್; ಟೆಸ್ಟ್​ನಲ್ಲಿ ರವಿಚಂದ್ರನ್ ಅಶ್ವಿನ್ ದರ್ಬಾರ್​

  • Ravichandran ಆshwin: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದಿದ್ದಾರೆ. ದಿಗ್ಗಜ ಶೇನ್​ ವಾರ್ನ್ ದಾಖಲೆ ಸಮಗೊಳಿಸಿದ್ದರೆ, ರಿಚರ್ಡ್ ಹ್ಯಾಡ್ಲಿ ದಾಖಲೆ ಮುರಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್​​ನಲ್ಲಿ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರು. ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ ರವಿಚಂದ್ರನ್ ಅಶ್ವಿನ್, 2ನೇ ಇನ್ನಿಂಗ್ಸ್​​ನಲ್ಲಿ 5 ವಿಕೆಟ್​ಗಳ ಗೊಂಚಲು ಪಡೆದು ಮಿಂಚಿದ್ದಾರೆ. ತನ್ನ ಆಲ್​ರೌಂಡ್ ಆಟದ ಮೂಲಕ ಬಾಂಗ್ಲಾದೇಶವನ್ನು ಧ್ವಂಸಗೊಳಿಸಿದ ಅಶ್ವಿನ್ ಹಲವು ದಾಖಲೆಗಳನ್ನೂ ಬರೆದರು.
icon

(1 / 6)

ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ 280 ರನ್​ಗಳ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರವಿಚಂದ್ರನ್ ಅಶ್ವಿನ್, ರಿಚರ್ಡ್ ಹ್ಯಾಡ್ಲಿ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಅಲ್ಲದೆ, ಶೇನ್ ವಾರ್ನ್ ದಾಖಲೆಯನ್ನೂ ಸರಿಗಟ್ಟಿದ್ದಾರೆ. ದಾಖಲೆಗಳ ಪಟ್ಟಿ ಹೀಗಿದೆ ನೋಡಿ.
icon

(2 / 6)

ಪ್ರಥಮ ಟೆಸ್ಟ್​ನ 2ನೇ ಇನ್ನಿಂಗ್ಸ್​​ನಲ್ಲಿ 21 ಓವರ್​​ಗಳಲ್ಲಿ 88 ರನ್​ಗಳಿಗೆ 6 ವಿಕೆಟ್ ಪಡೆದು ಬಾಂಗ್ಲಾದೇಶ ಕುಸಿತಕ್ಕೆ ಕಾರಣರಾದ ಅಶ್ವಿನ್, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 37 ಬಾರಿ ಇನ್ನಿಂಗ್ಸ್​​ವೊಂದರಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್​ಗಳ ಗೊಂಚಲು ಪಡೆದ ಬೌಲರ್​​ಗಳ ಪಟ್ಟಿಯಲ್ಲಿ ಅಶ್ವಿನ್, ದಿಗ್ಗಜ ರಿಚರ್ಡ್ ಹ್ಯಾಡ್ಲಿ ಅವರನ್ನು ಹಿಂದಿಕ್ಕಿ ಜಂಟಿ 2ನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಶೇನ್​ ವಾರ್ನ್​ ದಾಖಲೆ ಸರಿಗಟ್ಟಿದರು.
icon

(3 / 6)

ರಿಚರ್ಡ್ ಹ್ಯಾಡ್ಲಿ 86 ಟೆಸ್ಟ್​​ಗಳ 150 ಇನ್ನಿಂಗ್ಸ್​​ಗಳಲ್ಲಿ 36 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಅಶ್ವಿನ್ 101 ಟೆಸ್ಟ್ ಪಂದ್ಯಗಳ 191 ಇನ್ನಿಂಗ್ಸ್​​ಗಳಲ್ಲಿ ಬೌಲಿಂಗ್ ಮಾಡಿದ್ದು, 37 ಬಾರಿ 5 ವಿಕೆಟ್ ಹಾಲ್ ಪಡೆದಿದ್ದಾರೆ. ಇನ್ನು ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳ 273 ಇನ್ನಿಂಗ್ಸ್​​ಗಲ್ಲಿ ಬೌಲಿಂಗ್ ಮಾಡಿದ್ದು, ಅಶ್ವಿನ್ ಅವರಂತೆ 37 ಸಲ 5 ವಿಕೆಟ್​ ಗೊಂಚಲು ಪಡೆದಿದ್ದಾರೆ.
icon

(4 / 6)

ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಐದು ವಿಕೆಟ್ ಗೊಂಚಲು ಪಡೆದ ವಿಶ್ವದಾಖಲೆ ಹೊಂದಿದ್ದಾರೆ. 133 ಟೆಸ್ಟ್ ಪಂದ್ಯಗಳ 230 ಇನ್ನಿಂಗ್ಸ್​​​ಗಳಲ್ಲಿ ಬೌಲಿಂಗ್ ಮಾಡಿದ್ದು, 67 ಸಲ 5 ವಿಕೆಟ್ ಗೊಂಚಲು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಅಶ್ವಿನ್ ಅತಿ ಹೆಚ್ಚು 5 ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್, ವಾರ್ನ್​​​ನನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.
icon

(5 / 6)

ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದ ಭಾರತದ ಅತ್ಯಂತ ಹಿರಿಯ ಬೌಲರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾದರು. 38 ವರ್ಷಗಳ ನಂತರ ಭಾರತದ ಯಾವುದೇ ಬೌಲರ್ ಟೆಸ್ಟ್ ಇನ್ನಿಂಗ್ಸ್​​ನಲ್ಲಿ ಐದು ವಿಕೆಟ್ ಪಡೆದಿಲ್ಲ.
icon

(6 / 6)

ಇತರ ಗ್ಯಾಲರಿಗಳು